ರೈತರ ಪ್ರತಿಭಟನೆ ವೇಳೆ.. ಲುಂಗಿ-ಪೇಟ ಗೆಟಪ್​ನಲ್ಲಿ, ನೇಗಿಲು ಹಿಡಿದು ‘ಫೀಲ್ಡ್’​ಗಿಳಿದ ವಾಟಾಳ್​!

|

Updated on: Jan 26, 2021 | 6:09 PM

ಪ್ರತಿ ಬಾರಿಯೂ ತಮ್ಮ ವಿಭಿನ್ನ ಸ್ಟೈಲ್​ನಲ್ಲಿ ಪ್ರತಿಭಟನೆ ನಡೆಸುವ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್‌ ಇಂದು ಸಹ ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಕೊಂಚ ಡಿಫರೆಂಟ್​ ಆಗಿಯೇ ಹೋರಾಟಕ್ಕೆ ಮುಂದಾದರು.

ರೈತರ ಪ್ರತಿಭಟನೆ ವೇಳೆ.. ಲುಂಗಿ-ಪೇಟ ಗೆಟಪ್​ನಲ್ಲಿ, ನೇಗಿಲು ಹಿಡಿದು ‘ಫೀಲ್ಡ್’​ಗಿಳಿದ ವಾಟಾಳ್​!
ಲುಂಗಿ, ಪೇಟ ಗೆಟಪ್​ನಲ್ಲಿ ನೇಗಿಲು ಹಿಡಿದು ‘ಫೀಲ್ಡ್’​ಗಿಳಿದ ವಾಟಾಳ್​!
Follow us on

ಬೆಂಗಳೂರು: ಪ್ರತಿ ಬಾರಿಯೂ ತಮ್ಮ ವಿಭಿನ್ನ ಸ್ಟೈಲ್​ನಲ್ಲಿ ಪ್ರತಿಭಟನೆ ನಡೆಸುವ ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್‌ ಇಂದು ಸಹ ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಕೊಂಚ ಡಿಫರೆಂಟ್​ ಆಗಿಯೇ ಹೋರಾಟಕ್ಕೆ ಮುಂದಾದರು.

ನಗರದ ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಧರಣಿಗೆ ಮುಂದಾದ ವಾಟಾಳ್​ ನಾಗರಾಜ್‌ ನೇಗಿಲು ಹಿಡಿದು ಉಳುಮೆ ಮಾಡುವ ಮುಖಾಂತರ ಪ್ರತಿಭಟನೆ ನಡೆಸಿದರು. ಈ ವೇಳೆ, ಲುಂಗಿ ಮತ್ತು ಪೇಟ ಧರಿಸಿದ್ದ ವಾಟಾಳ್​ ಅವರ ವಿಭಿನ್ನ ಗೆಟಪ್​ ಎಲ್ಲರ ಗಮನ ಸೆಳೆಯಿತು.

ಕೃಷಿ ಕಾಯ್ದೆಗಳನ್ನ ವಿರೋಧಿಸಿ ಕನ್ನಡ ಸಂಘಟನೆಗಳೂ ಸಹ ಪ್ರತಿಭಟನೆ ನಡೆಸಿದರು. ವಾಟಾಳ್ ಜೊತೆ ಸಾ.ರಾ.ಗೋವಿಂದು ಮತ್ತು ಇತರ ಹಲವು ಕನ್ನಡ ಪರ ಸಂಘಟನೆಗಳ ನಾಯಕರು ಭಾಗಿಯಾದರು.

‘ನಾಡಪ್ರಭು ಕೆಂಪೇಗೌಡ ಕಟ್ಟಿದ ಬೆಂಗಳೂರು ರಾಜ್ಯದ ಆಸ್ತಿ; ರಾಜಧಾನಿಯಲ್ಲಿ ಬೆಂಜ್​, ದೊಡ್ಡ ಕಾರುಗಳೇ ಓಡಾಡಬೇಕಾ? ’