ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಪ್ರತಿಭಟನೆ ಬಿಸಿ.. ವೀರಶೈವ ಮಹಾಸಭಾದಿಂದ ಧರಣಿ, ಆಕ್ರೋಶ

| Updated By: ಆಯೇಷಾ ಬಾನು

Updated on: Jul 06, 2021 | 1:46 PM

ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ನಿಲ್ಲಿಸಲು ಆಗ್ರಹಿಸಿ ಹರಳಕೋಟೆ ಆಂಜನೇಯ ಸ್ವಾಮಿ ದೇವಾಲಯ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ವೀರಶೈವ ಮಹಾಸಭಾ ಸಮಿತಿ ಸದಸ್ಯರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ವಿರುದ್ಧ ಘೋಷಣೆ ಕೂಗಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಪ್ರತಿಭಟನೆ ಬಿಸಿ.. ವೀರಶೈವ ಮಹಾಸಭಾದಿಂದ ಧರಣಿ, ಆಕ್ರೋಶ
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Follow us on

ಚಾಮರಾಜನಗರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಪ್ರತಿಭಟನೆ ಬಿಸಿ ತಟ್ಟಿದೆ. ಚಾಮರಾಜನಗರದಲ್ಲಿ ವೀರಶೈವ ಮಹಾಸಭಾದಿಂದ ಧರಣಿ ನಡೆಯುತ್ತಿತ್ತು. ಇದೇ ವೇಳೆ ರಾಮಸಮುದ್ರದ ಹರಳಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಯತ್ನಾಳ್ ಭೇಟಿ ನೀಡಿದ್ದರೆ. ಈ ವೇಳೆ ಯತ್ನಾಳ್‌ಗೆ ಪ್ರತಿಭಟನೆ ಬಿಸಿ ತಟ್ಟಿದೆ.

ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ನಿಲ್ಲಿಸಲು ಆಗ್ರಹಿಸಿ ಹರಳಕೋಟೆ ಆಂಜನೇಯ ಸ್ವಾಮಿ ದೇವಾಲಯ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ವೀರಶೈವ ಮಹಾಸಭಾ ಸಮಿತಿ ಸದಸ್ಯರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ವಿರುದ್ಧ ಘೋಷಣೆ ಕೂಗಿದ್ದಾರೆ. ಹಾಗೂ ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಧರಣಿನಿರತರು ಕೂಗಿಕೊಂಡಿದ್ದಾರೆ. ಸದ್ಯ ಪೊಲೀಸ್ ಭದ್ರತೆಯಲ್ಲಿ ಪ್ರವಾಸಿಮಂದಿರಕ್ಕೆ ಯತ್ನಾಳ್ ತೆರಳಿದರು.

ಇನ್ನು ಈ ಬಗ್ಗೆ ಮಾತನಾಡಿದ ಯತ್ನಾಳ್‌, ಇದು ವ್ಯವಸ್ಥಿತ ಪಿತೂರಿ. ಇದರ ಹಿಂದೆ ಯಾರಿದ್ದಾರೆ ಗೊತ್ತಿದೆ. ನಾನೂ 30 ವರ್ಷಗಳಿಂದ ಹೋರಾಟ ಮಾಡಿ ಬಂದಿದ್ದೇನೆ. ಪ್ರತಿಭಟನೆ ನಡೆಸಲಿ, ನಾನು ಇದಕ್ಕೆಲ್ಲ ಹೆದರುವುದಿಲ್ಲ ಎಂದರು.

ಇದನ್ನೂ ಓದಿ: 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ, ಒಂದು ತಿಂಗಳಲ್ಲಿ ಹಾಳು; ಹಾವೇರಿ ಗ್ರಾಮಸ್ಥರಿಂದ ಆಕ್ರೋಶ

Published On - 1:43 pm, Tue, 6 July 21