ಪಾರ್ಕಿಂಗ್ ಸ್ಥಳದ ಬಗ್ಗೆ ಪುರಾವೆ ನೀಡಿದ್ರೆ ಮಾತ್ರ ಹೊಸ ವಾಹನ ನೋಂದಣಿ

ಬೆಂಗಳೂರು: ನಗರದ ವಾಹನ ಪ್ರಿಯರಿಗೆ ಸಾರಿಗೆ ಇಲಾಖೆ ಶಾಕಿಂಗ್ ಸುದ್ದಿಯನ್ನ ನೀಡಿದೆ. ಹೊಸ ವಾಹನ ಖರೀದಿಸಬೇಕಾದ್ರೆ ಪಾರ್ಕಿಂಗ್ ಜಾಗ ಕಡ್ಡಾಯ. ಪಾರ್ಕಿಂಗ್ ಸ್ಥಳದ ಬಗ್ಗೆ ಪುರಾವೆ ನೀಡಿದ್ರೆ ಮಾತ್ರ ನೋಂದಣಿ ಮಾಡಲಾಗುತ್ತೆ. ಇಲ್ಲದಿದ್ರೆ ಹೊಸ ವಾಹನ ನೋಂದಣಿಗೆ ಅನುಮತಿ ಸಿಗುವುದಿಲ್ಲ ಎಂದು ಟಿವಿ9ಗೆ ಸಾರಿಗೆ ಇಲಾಖೆ ಆಯುಕ್ತ ಎನ್.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸಲು ಹೊಸ ನಿಯಮ ರೂಪಿಸಲಾಗಿದೆ. ಪಾರ್ಕಿಂಗ್​ಗೆ ಜಾಗ ಇಲ್ದೆ ಹೋದ್ರು ಜನ ವಾಹನ ಖರೀದಿಸುತ್ತಿದ್ದಾರೆ. ಫುಟ್ […]

ಪಾರ್ಕಿಂಗ್ ಸ್ಥಳದ ಬಗ್ಗೆ ಪುರಾವೆ ನೀಡಿದ್ರೆ ಮಾತ್ರ ಹೊಸ ವಾಹನ ನೋಂದಣಿ
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​

Updated on: Dec 12, 2019 | 2:24 PM

ಬೆಂಗಳೂರು: ನಗರದ ವಾಹನ ಪ್ರಿಯರಿಗೆ ಸಾರಿಗೆ ಇಲಾಖೆ ಶಾಕಿಂಗ್ ಸುದ್ದಿಯನ್ನ ನೀಡಿದೆ. ಹೊಸ ವಾಹನ ಖರೀದಿಸಬೇಕಾದ್ರೆ ಪಾರ್ಕಿಂಗ್ ಜಾಗ ಕಡ್ಡಾಯ. ಪಾರ್ಕಿಂಗ್ ಸ್ಥಳದ ಬಗ್ಗೆ ಪುರಾವೆ ನೀಡಿದ್ರೆ ಮಾತ್ರ ನೋಂದಣಿ ಮಾಡಲಾಗುತ್ತೆ. ಇಲ್ಲದಿದ್ರೆ ಹೊಸ ವಾಹನ ನೋಂದಣಿಗೆ ಅನುಮತಿ ಸಿಗುವುದಿಲ್ಲ ಎಂದು ಟಿವಿ9ಗೆ ಸಾರಿಗೆ ಇಲಾಖೆ ಆಯುಕ್ತ ಎನ್.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸಲು ಹೊಸ ನಿಯಮ ರೂಪಿಸಲಾಗಿದೆ. ಪಾರ್ಕಿಂಗ್​ಗೆ ಜಾಗ ಇಲ್ದೆ ಹೋದ್ರು ಜನ ವಾಹನ ಖರೀದಿಸುತ್ತಿದ್ದಾರೆ. ಫುಟ್ ಪಾತ್, ಕಂಡವರ ಮನೆ ಮುಂದೆ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ.

ಇದರಿಂದ ಕಿರಿಕಿರಿ ಉಂಟಾಗುತ್ತಿದೆ ಹೀಗಾಗಿ ಹೊಸ ವಾಹನ ಖರೀದಿ ಮಾಡುವ ಮಾಲೀಕರು ಪಾರ್ಕಿಂಗ್ ಗೆ ಜಾಗ ಇದೇಯಾ ಇಲ್ಲವಾ ಎನ್ನುವುದರ ಬಗ್ಗೆ ಬಿಬಿಎಂಪಿಯಿಂದ ಎನ್ಓಸಿ ಕಡ್ಡಾಯವಾಗಿ ಪಡೆಯಬೇಕು. ಬಿಬಿಎಂಪಿ ಎನ್‌ಒಸಿ ನೀಡದಿದ್ರೆ ಕಾರು ನೋಂದಣಿ ಮಾಡಲ್ಲ ಎಂದು ಸಾರಿಗೆ ಇಲಾಖೆ ಆಯುಕ್ತ ಸ್ಪಷ್ಟಪಡಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us