ಹೊಳೆನರಸೀಪುರದಲ್ಲಿ ದೂರು ದಾಖಲಿಸಿದ ಸಂತ್ರಸ್ತೆಯನ್ನು ರೇವಣ್ಣನ ಬೆಂಗಳೂರು ಮನೆಗೆ ಕರೆತಂದ ಎಸ್ಐಟಿ ಅಧಿಕಾರಿಗಳು
ಸಂತ್ರಸ್ತೆಯು ದೂರಿನಲ್ಲಿ ತನ್ನನ್ನು ನಗರದಲ್ಲಿರುವ ಈ ಮನೆಗೂ ಕರೆತರಲಾಗಿತ್ತು ಎಂದು ದಾಖಲಿಸಿರುವಂತಿದೆ. ಹಾಗಾಗೇ, ಸ್ಥಳದ ಮಹಜರ್ ನಡೆಸಲು ಅವರನ್ನು ಅಧಿಕಾರಿಗಳು ಇಲ್ಲಿಗೆ ಕರೆತಂದಿರುತ್ತಾರೆ. ಶನಿವಾರದಂದು ಬಂಧನಕ್ಕೊಳಗಾಗಿರುವ ರೇವಣ್ಣರನ್ನು 4-ದಿನ ಎಸ್ಐಟಿ ಕಸ್ಟಡಿಗೆ ಒಪ್ಪಿಸಲಾಗಿದೆ. ಸೆಕ್ಸ್ ಟೇಪುಗಳ ಇನ್ನೊಬ್ಬ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದು ಅವರ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿಮಾಡಲಾಗಿದೆ.
ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಲೈಂಗಿಕ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಹೊಳೆನರಸೀಪುರದ ಪೊಲೀಸ್ ಠಾಣೆಯಲ್ಲಿ ದೂರರು ದಾಖಲಿಸಿರುವ ಸಂತ್ರಸ್ತೆಯೊಬ್ಬರನ್ನು (victim) ಇಂದು ನಗರದ ಬಸವನಗುಡಿಯಲ್ಲಿರುವ ಶಾಸಕ ಹೆಚ್ ಡಿ ರೇವಣ್ಣ (HD Revanna ) ಮನೆಗೆ ಕರೆತರಲಾಯಿತು. ಎಸ್ಐಟಿ ಅಧಿಕಾರಿಗಳು ಸಂತ್ರಸ್ತೆಯನ್ನು ಪೊಲೀಸ್ ವಾಹನದಲ್ಲಿ ಸ್ಥಳದ ಮಹಜರ್ ಗಾಗಿ ಕರೆತಂದಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅಧಿಕಾರಿಗಳಲ್ಲಿ ಹೆಚ್ಚಿನವರು ಮಹಿಳಾ ಸಿಬ್ಬಂದಿಯಾಗಿದ್ದಾರೆ. ಸಂತ್ರಸ್ತೆಯನ್ನು ಕೊನೆಯಲ್ಲಿ ಜೀಪ್ ನಿಂದ ಕೆಳಗಿಳಿಸಿ ಮನೆಯೊಳಗೆ ಕರೆದೊಯ್ಯಲಾಗುತ್ತದೆ. ಸಂತ್ರಸ್ತೆಯು ದೂರಿನಲ್ಲಿ ತನ್ನನ್ನು ನಗರದಲ್ಲಿರುವ ಈ ಮನೆಗೂ ಕರೆತರಲಾಗಿತ್ತು ಎಂದು ದಾಖಲಿಸಿರುವಂತಿದೆ. ಹಾಗಾಗೇ, ಸ್ಥಳದ ಮಹಜರ್ ನಡೆಸಲು ಅವರನ್ನು ಅಧಿಕಾರಿಗಳು ಇಲ್ಲಿಗೆ ಕರೆತಂದಿರುತ್ತಾರೆ. ಶನಿವಾರದಂದು ಬಂಧನಕ್ಕೊಳಗಾಗಿರುವ ರೇವಣ್ಣರನ್ನು 4-ದಿನ ಎಸ್ಐಟಿ ಕಸ್ಟಡಿಗೆ ಒಪ್ಪಿಸಲಾಗಿದೆ. ಸೆಕ್ಸ್ ಟೇಪುಗಳ ಇನ್ನೊಬ್ಬ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದು ಅವರ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಂತ್ರಸ್ತೆ ಅಪಹರಣ ಪ್ರಕರಣ, ಇದು ರಾಜಕೀಯ ಷಡ್ಯಂತ್ರ, ಬಂಧನ ಬಳಿಕ ಹೆಚ್ಡಿ ರೇವಣ್ಣ ಫಸ್ಟ್ ರಿಯಾಕ್ಷನ್