ಬೆಂಗಳೂರು: ಸಿಡಿ ಲೇಡಿ ಇಂದು ಹಾಜರಾಗುವುದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. ಸಂತ್ರಸ್ತೆ ಕೋರ್ಟ್ ಮುಂದೆ ಇಂದು ಹಾಜರಾಗೋದಿಲ್ಲ. ಹಾಜರಾತಿಗೆ ಕೋರ್ಟ್ ಇನ್ನೂ ಅನುಮತಿ ಕೊಟ್ಟಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯ, ವಕೀಲ ಜಗದೀಶ್ ಅರ್ಜಿ ಸಿಎಂಎಂ ಮುಂದಿದೆ ಎಂದು ತಿಳಿದುಬಂದಿದೆ. ವಕೀಲರ ಅರ್ಜಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದಿದೆ.
‘ಕೋರ್ಟ್ ಆದೇಶ ನೋಡದೆ ಏನೂ ಹೇಳಲು ಬರಲ್ಲ’
ಇತ್ತ, ಕೋರ್ಟ್ ಆದೇಶ ನೋಡದೆ ಏನೂ ಹೇಳಲು ಬರಲ್ಲ ಎಂದು ಸಿಡಿ ಲೇಡಿ ಪರ ವಕೀಲ ಜಗದೀಶ್ ಕುಮಾರ್ ಹೇಳಿದ್ದಾರೆ. ಪ್ರಕರಣದ ಆರೋಪಿ ಪವರ್‌ಫುಲ್ ಆಗಿರುವುದರಿಂದ ನಮ್ಮ ಎಲ್ಲ ಚಲನವಲನಗಳನ್ನು ಆರೋಪಿ ಗಮನಿಸ್ತಿದ್ದಾರೆ. ಹೀಗಾಗಿ ನಾನು ಹೆಚ್ಚು ಮಾಹಿತಿ ನೀಡುವುದಕ್ಕೆ ಆಗಲ್ಲ ಎಂದು ಸಂತ್ರಸ್ತೆ ಪರ ವಕೀಲ ಜಗದೀಶ್ ಕುಮಾರ್ ಹೇಳಿದ್ದಾರೆ. ಆದರೆ, ಆ ಯುವತಿಯನ್ನು ಕೋರ್ಟ್‌ಗೆ ಹಾಜರುಪಡಿಸುತ್ತೇವೆ ಎಂದೂ ಸಹ ಹೇಳಿದರು.
ಅದಕ್ಕೂ ಮುನ್ನ ವಕೀಲ ಜಗದೀಶ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಆಗಮಿಸಿ ಸಂತ್ರಸ್ತೆ ಪರ ಅರ್ಜಿ ನೀಡಿ, ಜಡ್ಜ್ ಮುಂದೆ ಹೇಳಿಕೆಗೆ ಮನವಿ ಮಾಡಿ ಡೆಪ್ಯುಟಿ ರಿಜಿಸ್ಟ್ರಾರ್ಗೆ ಮನವಿ ಮಾಡಿದ್ದರು.
ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಭದ್ರತೆ ವಾಪಸ್
ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಭದ್ರತೆ ವಾಪಸ್ ಪಡೆಯಲಾಗಿದೆ. ಸಿಡಿ ಲೇಡಿ ಕೋರ್ಟ್‌ಗೆ ಹಾಜರಾಗುವ ಹಿನ್ನೆಲೆಯಲ್ಲಿ ಕೋರ್ಟ್ ಕಟ್ಟಡದ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಆದರೆ, ಈಗ ನೃಪತುಂಗ ರಸ್ತೆಯಲ್ಲಿರುವ ನ್ಯಾಯಾಲಯಕ್ಕೆ ಪೊಲೀಸರು ಭದ್ರತೆ ವಾಪಸ್ ಪಡೆದಿದ್ದಾರೆ.
ಇದನ್ನೂ ಓದಿ: ಸಿಡಿ ಲೇಡಿಯ ಭದ್ರತೆಗಾಗಿ 8 ಸಿಬ್ಬಂದಿಗಳ ವಿಶೇಷ ಮಹಿಳಾ ತಂಡ ರಚನೆ; ಯುವತಿ ಇಂದೇ ಕೋರ್ಟ್‌ಗೆ ಹಾಜರಾಗುವ ಸಂಭವ
Published On - 5:44 pm, Mon, 29 March 21