8 ಗಂಟೆ ರೋಗಿ ನರಳಾಟ, ಟಿವಿ9 ವರದಿ ಬಳಿಕ ಎಚ್ಚೆತ್ತ ವಿಕ್ಟೋರಿಯಾ ಡಾಕ್ಟರ್ಸ್!

|

Updated on: Jan 06, 2020 | 5:05 PM

ಬೆಂಗಳೂರು: ಒಂದಲ್ಲ.. ಎರಡಲ್ಲ.. ಬರೋಬ್ಬರಿ ಎಂಟು ಗಂಟೆಗಳ ಕಾಲ ಆಂಬುಲೆನ್ಸ್​ನಲ್ಲೇ ನರಳಾಟ. ಜೀವನ್ಮರಣ ಹೋರಾಟ. ಚಿಕಿತ್ಸೆ ಈಗ ಸಿಗುತ್ತೆ. ಇನ್ ಸ್ವಲ್ಪ ಹೊತ್ತಿಗೆ ಸಿಗುತ್ತೆ ಅಂತಾ ರೋಗಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ರೆ, ವೈದ್ಯರು ಮಾತ್ರ ಅವರ ಪಾಡಿಗೆ ಅವರಿದ್ರು. ಕುಂಟು ನೆಪ ಹೇಳ್ಕೊಂಡು ಮಾನವೀಯತೆಯೇ ಇಲ್ಲದಂತೆ ಓಡಾಡ್ಕೊಂಡಿದ್ರು. ವೈದ್ಯೋ ನಾರಾಯಣೋ ಹರಿ ಅನ್ನೋ ಮಾತಿದೆ. ಆದ್ರೆ, ಇಲ್ಲಿ ವೈದ್ಯರು ತಮ್ಮ ಕರ್ತವ್ಯವನ್ನೇ ಮರೆತಿದ್ರು. ಮಾನವೀಯತೆಯ ಕೊಂಡಿಯನ್ನೇ ಕಡಿದು ಹಾಕಿದ್ರು. ಇಂಥಾ ಅಮಾನವೀಯ ಘಟನೆಗೆ ಬೆಂಗಳೂರಿನ ವಿಕ್ಟೋರಿಯಾ […]

8 ಗಂಟೆ ರೋಗಿ ನರಳಾಟ, ಟಿವಿ9 ವರದಿ ಬಳಿಕ ಎಚ್ಚೆತ್ತ ವಿಕ್ಟೋರಿಯಾ ಡಾಕ್ಟರ್ಸ್!
Follow us on

ಬೆಂಗಳೂರು: ಒಂದಲ್ಲ.. ಎರಡಲ್ಲ.. ಬರೋಬ್ಬರಿ ಎಂಟು ಗಂಟೆಗಳ ಕಾಲ ಆಂಬುಲೆನ್ಸ್​ನಲ್ಲೇ ನರಳಾಟ. ಜೀವನ್ಮರಣ ಹೋರಾಟ. ಚಿಕಿತ್ಸೆ ಈಗ ಸಿಗುತ್ತೆ. ಇನ್ ಸ್ವಲ್ಪ ಹೊತ್ತಿಗೆ ಸಿಗುತ್ತೆ ಅಂತಾ ರೋಗಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ರೆ, ವೈದ್ಯರು ಮಾತ್ರ ಅವರ ಪಾಡಿಗೆ ಅವರಿದ್ರು. ಕುಂಟು ನೆಪ ಹೇಳ್ಕೊಂಡು ಮಾನವೀಯತೆಯೇ ಇಲ್ಲದಂತೆ ಓಡಾಡ್ಕೊಂಡಿದ್ರು.

ವೈದ್ಯೋ ನಾರಾಯಣೋ ಹರಿ ಅನ್ನೋ ಮಾತಿದೆ. ಆದ್ರೆ, ಇಲ್ಲಿ ವೈದ್ಯರು ತಮ್ಮ ಕರ್ತವ್ಯವನ್ನೇ ಮರೆತಿದ್ರು. ಮಾನವೀಯತೆಯ ಕೊಂಡಿಯನ್ನೇ ಕಡಿದು ಹಾಕಿದ್ರು. ಇಂಥಾ ಅಮಾನವೀಯ ಘಟನೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸಾಕ್ಷಿಯಾಗಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕೋಡೂರು ನಿವಾಸಿ ಶ್ರೀನಿವಾಸ್​ಗೆ ಜನವರಿ 1ರಂದು ಬೈಕ್​ ಆಕ್ಸಿಡೆಂಟ್ ಆಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ 3 ದಿನದಿಂದ ಚಿಕಿತ್ಸೆ ನೀಡಲಾಗ್ತಿತ್ತು.

ಬೆಡ್ ಖಾಲಿ ಇಲ್ಲವೆಂದ ವೈದ್ಯರು, 8 ಗಂಟೆ ರೋಗಿ ನರಳಾಟ!


ಆದ್ರೆ ದುಡ್ಡಿನ ಕೊರತೆಯಿಂದ ಶ್ರೀನಿವಾಸ್ ಕುಟುಂಬಸ್ಥರು, ನಿನ್ನೆ ಮಧ್ಯಾಹ್ನ 2 ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದಿದ್ರು. ಆದ್ರೆ, ಬೆಡ್ ಖಾಲಿ ಇಲ್ಲ ಅಂತಾ ಆಸ್ಪತ್ರೆ ಸಿಬ್ಬಂದಿ 8 ಗಂಟೆಗೂ ಹೆಚ್ಚು ಸಮಯ  ಕಾಯಿಸಿದ್ದಾರೆ. ಇದ್ರಿಂದಾಗಿ ಗಾಯಾಳು ಶ್ರೀನಿವಾಸ್, ಆಂಬುಲೆನ್ಸ್​ನಲ್ಲಿ ನರಳಾಡಿದ್ದು ಅಷ್ಟಿಷ್ಟಲ್ಲ. ಶ್ರೀನಿವಾಸ್ ಪರಿಸ್ಥಿತಿ ನೆನೆದು ಕುಟುಂಬಸ್ಥರು ಕಣ್ಣೀರಿಡ್ತಿದ್ರು. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ವಿಕ್ಟೋರಿಯಾ ವೈದ್ಯರ ನಿರ್ಲಕ್ಷ್ಯವನ್ನು ಜನರ ಮುಂದೆ ತೆರೆದಿಟ್ಟಿತ್ತು.

ಯಾವಾಗ ಟಿವಿ9ನಲ್ಲಿ ಸುದ್ದಿ ಪ್ರಸಾರ ಆಯ್ತೋ.. ಅಲ್ಲಿಗೆ ವೈದ್ಯರು ಎಚ್ಚೆತ್ತುಕೊಂಡ್ರು. 8 ಗಂಟೆ ನಂತ್ರ ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ರು. ಈ ಬಗ್ಗೆ ಆಸ್ಪತ್ರೆ ವೈದ್ಯರನ್ನು ಕೇಳಿದ್ರೆ ಬೆಡ್, ವೆಂಟಿಲೇಟರ್ ಖಾಲಿ ಇರಲಿಲ್ಲ. ಹೀಗಾಗಿ, ಒಂದು ಬೆಡ್ ಖಾಲಿ ಆದ ಕೂಡಲೇ ಶ್ರೀನಿವಾಸ್​ರನ್ನು ಅಡ್ಮಿಟ್ ಮಾಡ್ಕೊಂಡು ಚಿಕಿತ್ಸೆ ಮುಂದುವರಿಸಿದ್ದೇವೆ ಅಂತಿದ್ದಾರೆ.

Published On - 7:01 pm, Sun, 5 January 20