ಮಾರನಹೊಳೆಯಲ್ಲಿ ಸಿಗದ ನೀರು, ಜೀವ ಜಲಕ್ಕಾಗಿ ಪ್ರತೀ ದಿನ ಜನರ ಪರದಾಟ

ಬೆಳಗಾವಿ: ಆ ಗ್ರಾಮದ ಹೆಸರಿನಲ್ಲೇ ಹೊಳೆ ಇದೆ, ಅಷ್ಟೇ ಅಲ್ಲದೆ ಆ ಗ್ರಾಮದ ಸಮೀಪದಲ್ಲೇ ನದಿ ಕೂಡ ಹರಿದು ಹೋಗುತ್ತೆ. 5 ತಿಂಗಳ ಹಿಂದೆ ಜಲಪ್ರವಾಹಕ್ಕೆ ಇಡೀ ಊರೇ ಮುಳುಗಿ ಹೋಗಿತ್ತು. ಆದ್ರೆ ಈಗ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಜನಪ್ರತಿನಿಧಿಗಳ ಕಿತ್ತಾಟದಿಂದ ಜನರು ಪರದಾಡುತ್ತಿದ್ದಾರೆ. ಕಲ್ಲು ಮುಳ್ಳಿರುವ ದಾರಿಯಲ್ಲಿ ಮಹಿಳೆಯರು ಕೊಡಹೊತ್ತು ಸಾಗಬೇಕಿದೆ. ಮತ್ತೊಂದ್ಕಡೆ ಕೊಡಗಳನ್ನ ತುಂಬಿಕೊಂಡು ಗಾಡಿಯಲ್ಲಿ ಮನೆಯತ್ತ ಹೊರಟ ಮಕ್ಕಳು ಹಾಗೂ ಪುರುಷರು. ಜಮೀನಿನಲ್ಲಿ ಬೀಳುತ್ತಿರುವ ನೀರು ತುಂಬಲು ಕಿತ್ತಾಟ ಅಂದಹಾಗೆ ಇಂತಹ […]

ಮಾರನಹೊಳೆಯಲ್ಲಿ ಸಿಗದ ನೀರು, ಜೀವ ಜಲಕ್ಕಾಗಿ ಪ್ರತೀ ದಿನ ಜನರ ಪರದಾಟ
Follow us
ಸಾಧು ಶ್ರೀನಾಥ್​
|

Updated on: Jan 06, 2020 | 7:14 AM

ಬೆಳಗಾವಿ: ಆ ಗ್ರಾಮದ ಹೆಸರಿನಲ್ಲೇ ಹೊಳೆ ಇದೆ, ಅಷ್ಟೇ ಅಲ್ಲದೆ ಆ ಗ್ರಾಮದ ಸಮೀಪದಲ್ಲೇ ನದಿ ಕೂಡ ಹರಿದು ಹೋಗುತ್ತೆ. 5 ತಿಂಗಳ ಹಿಂದೆ ಜಲಪ್ರವಾಹಕ್ಕೆ ಇಡೀ ಊರೇ ಮುಳುಗಿ ಹೋಗಿತ್ತು. ಆದ್ರೆ ಈಗ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದ್ದು, ಜನಪ್ರತಿನಿಧಿಗಳ ಕಿತ್ತಾಟದಿಂದ ಜನರು ಪರದಾಡುತ್ತಿದ್ದಾರೆ.

ಕಲ್ಲು ಮುಳ್ಳಿರುವ ದಾರಿಯಲ್ಲಿ ಮಹಿಳೆಯರು ಕೊಡಹೊತ್ತು ಸಾಗಬೇಕಿದೆ. ಮತ್ತೊಂದ್ಕಡೆ ಕೊಡಗಳನ್ನ ತುಂಬಿಕೊಂಡು ಗಾಡಿಯಲ್ಲಿ ಮನೆಯತ್ತ ಹೊರಟ ಮಕ್ಕಳು ಹಾಗೂ ಪುರುಷರು. ಜಮೀನಿನಲ್ಲಿ ಬೀಳುತ್ತಿರುವ ನೀರು ತುಂಬಲು ಕಿತ್ತಾಟ ಅಂದಹಾಗೆ ಇಂತಹ ಪರಿಸ್ಥತಿ ಉಂಟಾಗಿರುವುದು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಮಾರನಹೊಳೆಯಲ್ಲಿ.

ಬೆಳಗ್ಗೆಯಿಂದ ಸಂಜೆವರೆಗೂ ನೀರು ತುಂಬುವುದೇ ಕೆಲಸ! ಮಾರನಹೊಳೆ ಇರುವುದು ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ. 5 ತಿಂಗಳ ಹಿಂದೆ ಗ್ರಾಮ ಪ್ರವಾಹಕ್ಕೆ ತುತ್ತಾಗಿತ್ತು. ಸದ್ಯ ಗ್ರಾಮಕ್ಕೆ ಮರಳಿ ಬದುಕು ಕಟ್ಟಿಕೊಳ್ಳುತ್ತಿರುವ ಜನರಿಗೆ 1 ವಾರದಿಂದ ನೀರು ಸಿಗ್ತಿಲ್ಲ. ಇಡೀ ಗ್ರಾಮದಲ್ಲಿ 250 ಮನೆಗಳಿದ್ದು ಊರಿಗೆ ಎರಡು ಬೋರವೆಲ್ ಮಾತ್ರ ಇವೆ. ಆದ್ರೇ ಇದೀಗ 2 ಬೋರ್​ಗಳು ಬಂದ್ ಆಗಿರುವ ಕಾರಣ ಜನರು 1 ಕಿಲೋಮೀಟರ್ ದೂರದ ಜಮೀನಿನಿಂದ ನೀರು ತರ್ತಿದ್ದಾರೆ. ಮಾರನಹೊಳೆ ಪಕ್ಕದಲ್ಲೇ ಹಿರಣ್ಯಕೇಶಿ ನದಿ ಹರಿಯುತ್ತಿದ್ದು, ನದಿ ನೀರು ಶೇಖರಿಸಿ ಗ್ರಾಮಕ್ಕೆ ಕೊಡಬಹುದು. ಆದ್ರೆ ಆ ಕೆಲಸ ಆಗ್ತಿಲ್ಲ. ಇತ್ತ ಸತೀಶ್ ಜಾರಕಿಹೊಳಿ 5 ತಿಂಗಳಿಂದಲೂ ಗೋಕಾಕ್​ನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದು, ಸ್ವಕ್ಷೇತ್ರದ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗ್ತಿಲ್ಲ. ಇದು ಗ್ರಾಮಸ್ಥರನ್ನ ಮತ್ತೆ ಚಿಂತೆಗೀಡು ಮಾಡಿದೆ.

ಉಪಚುನಾವಣೆ ಆಯ್ತು.. ಈಗ ‘ಕೆಪಿಸಿಸಿ’ ಸಂಕಟ! ಇಲ್ಲಿವರೆಗೂ ಉಪಚುನಾವಣೆಯಲ್ಲಿ ಬ್ಯೂಸಿ ಇದ್ದ ಸತೀಶ್ ಜಾರಕಿಹೊಳಿ ಇದೀಗ ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಲಾಬಿ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿಬರ್ತಿದೆ. ಈ ಬಗ್ಗೆ ಸತೀಶ್​ರನ್ನ ಕೇಳಿದ್ರೆ, ಈಗಾಗಲೇ ಅಧಿಕಾರಿಗಳ ಜತೆ ಮಾತಾಡಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಡ್ತಿದ್ದಾರೆ ಎನ್ನು ಮಾತುಗಳೇ ಕೇಳಿ ಬರುತ್ತಿವೆ. ಒಟ್ನಲ್ಲಿ ಅಣ್ಣ-ತಮ್ಮಂದಿರ ಜಗಳದಲ್ಲಿ ವೋಟು ಹಾಕಿದ ಪ್ರಜೆಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.