G20 Summit: ಹಂಪಿಯಲ್ಲಿ ಜಿ20 ಶೃಂಗ ಸಭೆ ತಯಾರಿ, ಯುನೆಸ್ಕೋ ನಿಯಮಗಳನ್ನು ಗಾಳಿಗೆ ತೂರಿದ ಜಿಲ್ಲಾಡಳಿತ

ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಜುಲೈ 13ರಿಂದ ಮೂರು ದಿನಗಳ ಕಾಲ ಜಿ20 ಶೃಂಗಸಭೆ ನಡೆಯಲಿದೆ. ಈ ಸಂಬಂಧ ವಿಜಯನಗರ ಜಿಲ್ಲಾಡಳಿತವತಿಯಿಂದ ಸಿದ್ಧತೆಗಳು ಬರದಿಂದ ಸಾಗಿವೆ. ಸಿದ್ಧತೆಯ ನಡುವೆ ಯುನೆಸ್ಕೋ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ನಿಯಮಗಳನ್ನು ಜಿಲ್ಲಾಡಳಿತ ಗಾಳಿಗೆ ತೂರಿದೆ.

G20 Summit: ಹಂಪಿಯಲ್ಲಿ ಜಿ20 ಶೃಂಗ ಸಭೆ ತಯಾರಿ, ಯುನೆಸ್ಕೋ ನಿಯಮಗಳನ್ನು ಗಾಳಿಗೆ ತೂರಿದ ಜಿಲ್ಲಾಡಳಿತ
ವಿರೂಪಾಕ್ಷ ದೇವಸ್ಥಾನ ಬಳಿ ಕ್ರೇನ್​
Follow us
ವಿವೇಕ ಬಿರಾದಾರ
|

Updated on:Jun 21, 2023 | 3:22 PM

ಹೊಸಪೇಟೆ: ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ (Hampi) ಜುಲೈ 13ರಿಂದ ಮೂರು ದಿನಗಳ ಕಾಲ ಜಿ20 ಶೃಂಗಸಭೆ (G20 Summit) ನಡೆಯಲಿದೆ. ಈ ಸಂಬಂಧ ವಿಜಯನಗರ (Vijayanagar) ಜಿಲ್ಲಾಡಳಿತವತಿಯಿಂದ ಸಿದ್ಧತೆಗಳು ಬರದಿಂದ ಸಾಗಿವೆ. ಸಿದ್ಧತೆಯ ನಡುವೆ ಯುನೆಸ್ಕೋ (UNESCO) ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ನಿಯಮಗಳನ್ನು ಜಿಲ್ಲಾಡಳಿತ ಗಾಳಿಗೆ ತೂರಿದೆ. ಹೌದು ಶೃಂಗಸಭೆಯ ಸಿದ್ಧತೆಗಾಗಿ, ಅಧಿಕಾರಿಗಳು ಭಾರಿ ವಾಹನಗಳನ್ನು ಪಾರಂಪರಿಕ ತಾಣದ ನಿರ್ಬಂಧಿತ ವಲಯಗಳಲ್ಲಿ ಸಂಚರಿಸಲು ಬಿಟ್ಟಿದ್ದಾರೆ. ಇದು ಸ್ಮಾರಕಗಳ ಸುರಕ್ಷತೆಗೆ ದೊಡ್ಡ ಅಪಾಯವಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಯುನೆಸ್ಕೊ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿಜಯ ವಿಠಲ ಮಂದಿರ ಮತ್ತು ವಿರೂಪಾಕ್ಷ ದೇವಸ್ಥಾನದ ಬಳಿ ಭಾರಿ ವಾಹನ ಸಂಚಾರವನ್ನು ನಿಷೇಧಿಸಿದೆ. ಆದರೂ ಕೂಡ, ಆಡಳಿತವು ಇತ್ತೀಚೆಗೆ ವಿರೂಪಾಕ್ಷ ದೇವಾಲಯದ ಗೋಪುರ ಸ್ವಚ್ಛಗೊಳಿಸಲು ಕ್ರೇನ್​​ ಬಳಸಿತ್ತು. ಅಲ್ಲದೆ, ವಿಜಯ ವಿಠಲ ದೇವಸ್ಥಾನದ ಬಳಿ ಟ್ರ್ಯಾಕ್ಟರ್ ಸಂಚಾರಕ್ಕೆ ಅನುಮತಿ ನೀಡಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಆದರೆ ಅಧಿಕಾರಿಗಳು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಹೇಳಿದ್ದಾರೆ. ಜಿ20 ಶೃಂಗಸಭೆ ತಯಾರಿಗಾಗಿ ನಮಗೆ ಕಡಿಮೆ ಸಮಯವಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರಕಾರ, ಪಾರಂಪರಿಕ ತಾಣಗಳಲ್ಲಿ ಯಾವುದೇ ಉತ್ಖನನ ಅಥವಾ ವಾಹನಗಳ ಸಂಚಾರಕ್ಕೆ ಅನುಮತಿಸಲಾಗುವುದಿಲ್ಲ. ಸ್ಮಾರಕಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರಿಕೆಯಿಂದ ಕೆಲಸ ನಡೆಯುತ್ತಿದೆ. ಕಾಮಗಾರಿಗೆ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ. ವಿರೂಪಾಕ್ಷ ದೇವಸ್ಥಾನದ ಗೋಪುರ ಸ್ವಚ್ಛಗೊಳಿಸಲು, ಬಂಡೆಗಳನ್ನು ಸ್ಥಳಾಂತರಿಸಲು ಕ್ರೇನ್ ಬಳಸುತ್ತಿದ್ದೇವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಇದನ್ನೂ ಓದಿ: G20 Summit: ರಾಜ್ಯದ ಪ್ರಮುಖ ಈ 3 ಸ್ಥಳಗಳಲ್ಲಿ ನಡೆಯಲಿದೆ G20 ಶೃಂಗಸಭೆ, ಇಲ್ಲಿದೆ ವೇಳಾಪಟ್ಟಿ

ಸಾಮಾಜಿಕ ಕಾರ್ಯಕರ್ತ, ಹಂಪಿ ನಿವಾಸಿ ಪ್ರಭಾಕರ ಜೋಶಿ ಮಾತನಾಡಿ, ನಿರ್ಬಂಧಿತ ಹಾಗೂ ಕಂಪನ ರಹಿತ ವಲಯಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಎಂಬ ನಿಯಮ ಸ್ಪಷ್ಟವಾಗಿದೆ. ಆದರೆ, ಶೃಂಗಸಭೆಗೆ ಸಿದ್ಧತೆ ನಡೆಸಲು ಅಧಿಕಾರಿಗಳು ವಿರೂಪಾಕ್ಷ ದೇವಸ್ಥಾನದ ಬಳಿ ಕ್ರೇನ್ ಮತ್ತು ವಿಜಯ ವಿಠಲ ದೇವಸ್ಥಾನದ ಬಳಿ ಟ್ರ್ಯಾಕ್ಟರ್ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

ವಿವಿಐಪಿಗಳ ಭೇಟಿಯ ಸಂದರ್ಭದಲ್ಲಿಯೂ ಸ್ಮಾರಕಗಳ ಬಳಿ ಬ್ಯಾಟರಿ ಚಾಲಿತ ಬಗ್ಗಿಗಳನ್ನು ಮಾತ್ರ ಅನುಮತಿಸಲಾಗಿದೆ. ಆದರೆ ಅಧಿಕಾರಿಗಳು ಸ್ವತಃ ನಿಯಮಗಳನ್ನು ಅನುಸರಿಸಿಲ್ಲ. ಕ್ರೇನ್‌ಗಳು ಮತ್ತು ಟ್ಯ್ರಾಕ್ಟರ್​​ಗಳ ಸಂಚಾರದಿಂದ ದುರ್ಬಲವಾದ ಸ್ಮಾರಕಗಳಿಗೆ ಹಾನಿಯಾಗಬಹುದು. ಶೃಂಗಸಭೆಯು ಇಲ್ಲಿ ನಡೆಯುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಆದರೆ ಯುನೆಸ್ಕೋದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಕೂಡಲೇ ಅಧಿಕಾರಿಗಳು ಭಾರಿ ವಾಹನಗಳ ಪ್ರವೇಶವನ್ನು ತಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Wed, 21 June 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ