AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶಿ ಸಾಂಸ್ಕೃತಿಕ ಕಲೆಗಳ ಜಾಗತಿಕ ಅನಾವರಣಕ್ಕೆ ವೇದಿಕೆಯಾಗಲಿದೆ ಜಿ-20 ಶೃಂಗಸಭೆ

ಜಿ-20 ಶೃಂಗಸಭೆ ಅಂಗವಾಗಿ ವಿಶ್ವ ವಿಖ್ಯಾತ ಹಂಪಿಯಲ್ಲಿ ಜುಲೈ 9 ರಿಂದ 12 ವರೆಗೆ 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಜರುಗಲಿದೆ. ದೇಶಿ ಸಾಂಸ್ಕೃತಿಕ ಕಲೆಗಳ ಜಾಗತಿಕ ಅನಾವರಣಕ್ಕೆ ಜಿ-20 ವೇದಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಕಾರ್ಯದರ್ಶಿ ಗೋವಿಂದ ಮೋಹನ್ ತಿಳಿಸಿದ್ದಾರೆ.

ದೇಶಿ ಸಾಂಸ್ಕೃತಿಕ ಕಲೆಗಳ ಜಾಗತಿಕ ಅನಾವರಣಕ್ಕೆ ವೇದಿಕೆಯಾಗಲಿದೆ ಜಿ-20 ಶೃಂಗಸಭೆ
ಜಿ-20 ಶೃಂಗಸಭೆ ಪತ್ರಿಕಾಗೋಷ್ಠಿ
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Edited By: |

Updated on:Jul 09, 2023 | 6:50 PM

Share

ವಿಜಯನಗರ: ಜಿ-20 ಶೃಂಗಸಭೆ (G-20 Summit) ಅಂಗವಾಗಿ ವಿಶ್ವ ವಿಖ್ಯಾತ ಹಂಪಿಯಲ್ಲಿ ಜುಲೈ 9 ರಿಂದ 12 ವರೆಗೆ 3ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಜರುಗಲಿದೆ. ದೇಶದ ಜವಳಿ ಕ್ಷೇತ್ರದ ವೈವಿದ್ಯತೆ ಬಿಂಬಿಸುವ ಹಾಗೂ ಜಾಗತಿಕವಾಗಿ ಸಾಂಸ್ಕೃತಿಕ ಜವಳಿ ಉದ್ದಿಮೆಯ ಬೆಳವಣಿಗೆಗೆ ಇಂಬು ಕೊಡುವ ನಿಟ್ಟಿನಲ್ಲಿ, ಹಂಪಿ ಎದುರು ಬಸವಣ್ಣ ಮಂಪಟದ ಆವರಣದಲ್ಲಿ ಜವಳಿ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಕಾರ್ಯದರ್ಶಿ ಗೋವಿಂದ ಮೋಹನ್ ತಿಳಿಸಿದ್ದಾರೆ.

ಈ ಕುರಿತು ತೋರಣಗಲ್ ಪಟ್ಟಣದ ವಿದ್ಯಾನಗರದ ಜೆ-ಮ್ಯಾಕ್ಸ್ ಸಭಾಂಗಣದಲ್ಲಿ ಜಿ-20 ಶೃಂಗಸಭೆಯ ಬಗ್ಗೆ ಪತ್ರಿಕಾಗೋಷ್ಠಿ ನಡಸಿ ಮಾತನಾಡಿದರು‌. ದೇಶಿ ಸಾಂಸ್ಕೃತಿಕ ಕಲೆಗಳ ಜಾಗತಿಕ ಅನಾವರಣಕ್ಕೆ ಜಿ-20 ವೇದಿಕೆಯಾಗಿದೆ. ಈ ಹಿಂದೆ ಒಡಿಸ್ಸಾದ ಖಜುರಾಹೋ ಹಾಗೂ ಭುವನೇಶ್ವರದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಯಶಸ್ವಿಯಾಗಿವೆ. ಇದರಲ್ಲಿ ಜಿ‌-20 ಸದಸ್ಯ ರಾಷ್ಟ್ರಗಳ 50 ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಇದರ ಜೊತೆಗೆ ಹಲವಾರು ವೆಬಿನಾರ್‌ಗಳನ್ನು ಸಹ ಆಯೋಜಿಸಲಾಗಿದೆ.

ಜಿ‌-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಮುಖ್ಯ ಉದ್ದೇಶ ಸದಸ್ಯ ರಾಷ್ಟ್ರಗಳ ಸಾಂಸ್ಕೃತಿಕ ಅಸ್ಮಿತಿಯನ್ನು ರಕ್ಷಿಸಿ, ಪುನರ್‌ಸ್ಥಾಪಿಸುವುದಾಗಿದೆ. 1970ರ ಯುನಿಸ್ಕೋ ಒಡಬಂಡಿಕೆಯಂತೆ ಎಲ್ಲಾ ರಾಷ್ಟ್ರಗಳು ಪರಸ್ಪರ ಸಹಕಾರದಿಂದ, ವಸಹಾತು ಸಮಯ ಅಥವಾ ಇನ್ನಿತರ ಮಾರ್ಗಗಳಿಂದ ತಮ್ಮ ರಾಷ್ಟ್ರದೊಳಗೆ ಆಗಮಿಸಿದ ಸಾಂಸ್ಕೃತಿಕ ಮಹತ್ವವುಳ್ಳ ಕಲಾಕೃತಿಗಳನ್ನು ಹಿಂದಿರುಗಿಸಬೇಕು. ಭಾರತವು ಸಹ ಇದಕ್ಕೆ ಬದ್ದವಾಗಿದೆ. ಭಾರತ ಅಮೇರಿಕಾದೊಂದಿಗೆ ರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಒಡಂಬಡಿಕೆ ಅನ್ವಯ ಅಮೇರಿಕಾ 150 ಹೆಚ್ಚು ಕಲಾಕೃತಿಗಳನ್ನು ಭಾರತಕ್ಕೆ ಹಿಂದಿರುಗಿಸಲಿದೆ ಎಂದರು.

ಇದನ್ನೂ ಓದಿ: Hampi: ಐತಿಹಾಸಿಕ ಹಂಪಿಯಲ್ಲಿ ಜುಲೈ 12ರವರೆಗೂ ಜಿ20 ಸಿಡಬ್ಲ್ಯುಜಿ ಸಭೆ; 29 ದೇಶಗಳ 50 ಪ್ರತಿನಿಧಿಗಳು ಭಾಗಿ

ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಎರೆಡನ ಮುಖ್ಯ ಉದ್ದೇಶವೆಂದರೆ ಜನಜೀವನದ ಜೊತೆಗೆ ಪಾರಂಪರಿಕವಾಗಿ ಬಳಕೆಗೆ ಬಂದ ಪದ್ದತಿಗಳನ್ನು ಉಳಿಸಿ ಬೆಳಸುವುದಾಗಿದೆ. ಭಾರತದಲ್ಲಿ ಆರ್ಯುವೇದ ಪದ್ದತಿ ಬಳಕೆಯಲ್ಲಿ ಇದೆ. ಹಲವಾರು ಸಂದರ್ಭದಲ್ಲಿ ಆರ್ಯವೇದಲ್ಲಿ ಬಳಕೆಯಲ್ಲಿ ಇದ್ದ ಔಷಧೋಪಚಾರಗಳ ಪೇಟೆಂಟ್ ಬೇರೆಯವ ಪಾಲಾಗಿದೆ. ಈ ರೀತಿಯ ಘಟನೆಗಳನ್ನು ತಪ್ಪಿಸುವುದು ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಕೆಲಸವಾಗಿದೆ.

ಮೂರನೇ ಉದ್ದೇಶ ಸಾಂಸ್ಕೃತಿಕ ಅಂಶಗಳು, ಕಲಾ ಕುಸರಿ ಹಾಗೂ ಉದ್ದಿಮೆಗಳನ್ನು ಪ್ರಚುರ ಪಡಿಸುವುದಾಗಿದೆ. ಇದರ ಅಂಗವಾಗಿ ಹಂಪಿಯಲ್ಲಿ ಜವಳಿ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ನಾಲ್ಕನೇ ಉದ್ದೇಶ ಸಾಂಸ್ಕೃತಿಕ ಅಂಶಗಳಿಗೆ ಡಿಜಿಟಲ್ ರೂಪ ನೀಡಿ, ಆಡಿಯೋ, ವಿಡಿಯೋ ಹಾಗೂ ಇನ್ನಿತರ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದು.

ಇದನ್ನೂ ಓದಿ: ಬಳ್ಳಾರಿ ಹಾಲು ಒಕ್ಕೂಟಕ್ಕೆ ಸಂಕಟ: ಪ್ರತಿ ತಿಂಗಳು 40 ಲಕ್ಷ ರೂ. ನಷ್ಟ

ಸಂಸ್ಕೃತಿ ಎಲ್ಲರನ್ನೂ ಓಗ್ಗೂಡಿಸಲು ಆಧಾರವಾಗಿದೆ ಎಂದು ಜಿ-20 ಸಾಂಸ್ಕೃತಿಕ ಕಾರ್ಯಕಾರಣಿ ಗುಂಪು ನಂಬಿದೆ. ವಾರಣಾಸಿಯಲ್ಲಿ ಆಗಸ್ಟ್ 26 ರಂದು ಸಾಂಸ್ಕೃತಿಕ ಕಾರ್ಯಕಾರಣಿ ಗುಂಪಿನ ಅಂತಿಮ ಸಭೆ ನಡೆಯಲಿದೆ. ವಾರಣಾಸಿಯಲ್ಲಿನ ಸಭೆಯಲ್ಲಿ ಡಿಜಟಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಗಿನ್ನಿಸ್ ದಾಖಲೆ ಬರಿಯಲಿದೆ ಲಂಬಾಣಿ ಕಸೂತಿ ಕಲೆ

ಹಂಪಿಯ ಎದುರು ಬಸವಣ್ಣ ಮಂಟಪ ಎದುರು ಜವಳಿ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಜುಲೈ 10 ರಂದು ವಸ್ತು ಪ್ರದರ್ಶನದ ಉದ್ಘಾಟನೆ ನಡೆಯಲಿದೆ. 450ಕ್ಕೂ ಹೆಚ್ಚು ಕರಕಶುಲ ಹಾಗೂ ಜವಳಿ ಕಸೂತಿ ಕಲೆಗಾರರು ಪಾಲ್ಗೊಳ್ಳುವರು‌. ಇದರೊಂದಿಗೆ ಸಂಡೂರಿನ ಲಂಬಾಣಿ ಕಲಾ ಕೇಂದ್ರ ವಿಶ್ವ ಗಿನ್ನಿಸ್ ದಾಖಲೆಯ ಲಂಬಾಣಿ ಕಸೂತಿ ಕಲೆಗಳ ವಸ್ತು ಪ್ರದರ್ಶನ ನಡೆಯಲಿದೆ. ಈ ಮೂಲಕ ಜಾಗತಿಕವಾಗಿ ಲಂಬಾಣಿ ಕಸೂತಿ ಮನ್ನಣೆ ದೊರಕಿಸಿ, ಅಂತರಾಷ್ಟ್ರೀಯ ಮಾರುಕಟ್ಟೆ ದೊರಕಿಸಿಕೊಡಲಾಗುವುದು ಎಂದು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಿಲ್ಲಿ ಪಾಂಡ್ಯ ತಿಳಿಸಿದರು‌.

ಗೋಷ್ಠಿಯಲ್ಲಿ ಭಾರತೀಯ ಪುರಾತತ್ವ ಇಲಾಖೆ ಮಹಾ ನಿರ್ದೇಶಕ ಕೆ.ಕೆ.ಬಾಷಾ ಹಾಗೂ ಕೇಂದ್ರ ವಾರ್ತಾ ವಿಭಾಗದ ಸಹಾಯಕ ಮಹಾ ನಿರ್ದೇಶಕಿ ನಾನು ಭಾಸಿನ್ ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:49 pm, Sun, 9 July 23