ಹೂವಿನ ಹಡಗಲಿ: 50 ಕೆಜಿಗೂ ಹೆಚ್ಚಿನ ಬಿಸಿಯೂಟ ಅಕ್ಕಿ ಕಸದ ತೊಟ್ಟಿಗೆ ಸುರಿದ ಶಾಲಾ ಅಡುಗೆ ಸಿಬ್ಬಂದಿ
ಮಕ್ಕಳಿಗೆ ಯೋಗ್ಯವಲ್ಲ ಎಂದು ಸಿಬ್ಬಂದಿ ಅಕ್ಕಿಯನ್ನು ತೊಟ್ಟಿಗೆ ಸುರಿದಿದ್ದಾರೆ. ಮುಗ್ಗು ಬಂದ ಅಕ್ಕಿ ಚೆಲ್ಲಲಾಗಿದೆ ಎಂದು ಮುಖ್ಯ ಶಿಕ್ಷಕ ಲಿಂಗಪ್ಪ ಸಮರ್ಥನೆ ಮಾಡಿದ್ದಾರೆ.
ವಿಜಯನಗರ, ಜನವರಿ 13: ಶಾಲಾ ಅಡುಗೆ ಸಿಬ್ಬಂದಿ ಬಿಸಿಯೂಟದ ಅಕ್ಕಿಯನ್ನು ಕಸದ ತೊಟ್ಟಿಗೆ ಸುರಿದ ಘಟನೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ (Huvina Hadagali) ತಾಲೂಕಿನ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಸರ್ಕಾರಿ ಶಾಲೆಯಲ್ಲಿ (Government School) ನಡೆದಿದೆ. 50 ಕೆಜಿಗೂ ಅಧಿಕ ಅಕ್ಕಿಯನ್ನು ಸಿಬ್ಬಂದಿ ಕಸದ ರಾಶಿಗೆ ಸುರಿದಿದ್ದಾರೆ. ಮಕ್ಕಳಿಗೆ ಆಹಾರ ರೂಪದಲ್ಲಿ ನೀಡಬೇಕಾದ ಅಕ್ಕಿಯನ್ನು ಚೆಲ್ಲಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದಾರೆ.
ಮಕ್ಕಳಿಗೆ ಯೋಗ್ಯವಲ್ಲ ಎಂದು ಸಿಬ್ಬಂದಿ ಅಕ್ಕಿಯನ್ನು ತೊಟ್ಟಿಗೆ ಸುರಿದಿದ್ದಾರೆ. ಮುಗ್ಗು ಬಂದ ಅಕ್ಕಿ ಚೆಲ್ಲಲಾಗಿದೆ ಎಂದು ಮುಖ್ಯ ಶಿಕ್ಷಕ ಲಿಂಗಪ್ಪ ಸಮರ್ಥನೆ ಮಾಡಿದ್ದಾರೆ. ಆದರೆ, ಅಕ್ಕಿ ಕೆಡುವವರೆಗೆ ಯಾಕೆ ಸಂಗ್ರಹಿಸಿದ್ದೀರಿ ಎಂದು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ತಪ್ಪಿತರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಕದ್ದು ಮಾರಾಟ ಮಾಡುವುದು, ಅನ್ನ ಭಾಗ್ಯ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಅಕ್ರಮವಾಗಿ ಮಾರಾಟ ಮಾಡುವ ಹಲವು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿದ್ದವು. ಇದೀಗ ಶಾಲೆಗಳ ಬಿಸಿಯೂಟಕ್ಕೆ ಒದಗಿಸುವ ಅಕ್ಕಿಯನ್ನು ಹಾಳಾಗಿದೆ ಎಂದು ಕಸದ ತೊಟ್ಟಿಗೆ ಚೆಲ್ಲಿರುವ ಘಟನೆ ಬಹಿರಂಗವಾಗಿದೆ.
ಇದನ್ನೂ ಓದಿ: ಅಯೋಧ್ಯೆ ರಾಮನ ದರ್ಶನಕ್ಕೆ 2000 ಕಿಮೀ ಸೈಕಲ್ ಯಾತ್ರೆ ಹೊರಟ ಬಳ್ಳಾರಿಯ ಯುವ ಜೋಡಿ
ಬಳ್ಳಾರಿ ನಗರದಲ್ಲಿ ಸರಣಿ ಅಂಗಡಿ ಕಳ್ಳತನ
ಬಳ್ಳಾರಿ ನಗರದ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಪ್ಪಗಲ್ ರಸ್ತೆಯಲ್ಲಿ ಸರಣಿ ಅಂಗಡಿ ಕಳ್ಳತನವಾಗಿದೆ. ಖದೀಮರು ನಾಲ್ಕು ಅಂಗಡಿಗಳನ್ನು ದೋಚಿದ್ದಾರೆ. ಎರಡು ಮೆಡಿಕಲ್ ಶಾಪ್, ಒಂದು ಸೂಪರ್ ಮಾರ್ಕೆಟ್, ಕಿರಾಣಿ ಶಾಪ್‌ನಲ್ಲಿ ಕಳ್ಳತನವಾಗಿದೆ. ಅಂಗಡಿಗಳಲ್ಲಿನ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಮತ್ತು ನಗದು ಕಳವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:03 pm, Sat, 13 January 24