G20 Sherpa meeting: ವಧುವಿನಂತೆ ಐತಿಹಾಸಿಕ ಹಂಪಿಗೆ ಶೃಂಗಾರ! ಸ್ಮಾರಕಗಳಿಗೆ ಜೀವಕಳೆ ನೀಡಿದ ಪ್ರಾಚ್ಯವಸ್ತು ಇಲಾಖೆ – ಎಲ್ಲಾ ಮಹತ್ವದ G 20 ಶೃಂಗಸಭೆಗಾಗಿ

ವಿಶ್ವ ವಿಖ್ಯಾತ ಹಂಪಿ ಯಾರಿಗೆ ಗೊತ್ತಿಲ್ಲ ಹೇಳಿ. ವಿಶ್ವ ಪರಂಪರೆಯ ತಾಣವಾಗಿರುವ ಹಂಪಿ ದೇಶ ವಿದೇಶಗಳಲ್ಲೂ ಪ್ರಸಿದ್ದಿ (Hampi, a UNESCO World Heritage site). ಹೌದು. ಇದೇ ಐತಿಹಾಸಿಕ ಹಂಪಿಯಲ್ಲೀಗ ಜಿ-20 ಶೃಂಗಸಭೆ ನಡೆಯಲಿದೆ. ಜುಲೈ 9ರಿಂದ 16ವರೆಗೆ ನಡೆಯಲಿರುವ ಜಿ-20 ಶೃಂಗಸಭೆಗೆ ಹಂಪಿ ನವವಧುವಿನಂತೆ (Hampi G20 Meeting) ಶೃಂಗಾರಗೊಳ್ಳುತ್ತಿದೆ. ಹಿಂದೆಂದೂ ಕಾಣದಷ್ಟು ಅಭಿವೃದ್ದಿ ಕಾರ್ಯಗಳನ್ನ ಜಿ-20 ನಿಮಿತ್ಯ ಹಂಪಿಯಲ್ಲಿ ಕೈಗೊಳ್ಳಲಾಗಿದೆ. ಅಷ್ಟಕ್ಕೂ ಜಿ-20 ಶೃಂಗಸಭೆಗಾಗಿ ಹಂಪಿಯಲ್ಲಿ ಏನೆಲ್ಲಾ ಸಿದ್ದತೆ ಮಾಡಲಾಗುತ್ತಿದೆ ಅನ್ನೋ ಡಿಟೇಲ್ಸ್ […]

G20 Sherpa meeting: ವಧುವಿನಂತೆ ಐತಿಹಾಸಿಕ ಹಂಪಿಗೆ ಶೃಂಗಾರ! ಸ್ಮಾರಕಗಳಿಗೆ ಜೀವಕಳೆ ನೀಡಿದ ಪ್ರಾಚ್ಯವಸ್ತು ಇಲಾಖೆ - ಎಲ್ಲಾ ಮಹತ್ವದ G 20 ಶೃಂಗಸಭೆಗಾಗಿ
G20 Sherpa meeting: ವಧುವಿನಂತೆ ಐತಿಹಾಸಿಕ ಹಂಪಿಗೆ ಶೃಂಗಾರ! ಸ್ಮಾರಕಗಳಿಗೆ ಜೀವಕಳೆ ನೀಡಿದ ಪ್ರಾಚ್ಯವಸ್ತು ಇಲಾಖೆ - ಎಲ್ಲಾ ಮಹತ್ವದ G 20 ಶೃಂಗಸಭೆಗಾಗಿ!
Follow us
ವೀರೇಶ್ ದಾನಿ, ಬಳ್ಳಾರಿ-ವಿಜಯನಗರ
| Updated By: ಸಾಧು ಶ್ರೀನಾಥ್​

Updated on:Jul 08, 2023 | 12:39 PM

ವಿಶ್ವ ವಿಖ್ಯಾತ ಹಂಪಿ ಯಾರಿಗೆ ಗೊತ್ತಿಲ್ಲ ಹೇಳಿ. ವಿಶ್ವ ಪರಂಪರೆಯ ತಾಣವಾಗಿರುವ ಹಂಪಿ ದೇಶ ವಿದೇಶಗಳಲ್ಲೂ ಪ್ರಸಿದ್ದಿ (Hampi, a UNESCO World Heritage site). ಹೌದು. ಇದೇ ಐತಿಹಾಸಿಕ ಹಂಪಿಯಲ್ಲೀಗ ಜಿ-20 ಶೃಂಗಸಭೆ ನಡೆಯಲಿದೆ. ಜುಲೈ 9ರಿಂದ 16ವರೆಗೆ ನಡೆಯಲಿರುವ ಜಿ-20 ಶೃಂಗಸಭೆಗೆ ಹಂಪಿ ನವವಧುವಿನಂತೆ (Hampi G20 Meeting) ಶೃಂಗಾರಗೊಳ್ಳುತ್ತಿದೆ. ಹಿಂದೆಂದೂ ಕಾಣದಷ್ಟು ಅಭಿವೃದ್ದಿ ಕಾರ್ಯಗಳನ್ನ ಜಿ-20 ನಿಮಿತ್ಯ ಹಂಪಿಯಲ್ಲಿ ಕೈಗೊಳ್ಳಲಾಗಿದೆ. ಅಷ್ಟಕ್ಕೂ ಜಿ-20 ಶೃಂಗಸಭೆಗಾಗಿ ಹಂಪಿಯಲ್ಲಿ ಏನೆಲ್ಲಾ ಸಿದ್ದತೆ ಮಾಡಲಾಗುತ್ತಿದೆ ಅನ್ನೋ ಡಿಟೇಲ್ಸ್ ಇಲ್ಲಿದೆ ನೋಡಿ..

ಹಾಳಾಗಿ ಹೋಗಿದ್ದ ರಸ್ತೆಗಳಿಗೆ ಡಾಂಬರೀಕರಣ ಭಾಗ್ಯ.. ಹಂಪಿ ಪ್ರದೇಶದ ಸುತ್ತೆಲ್ಲಾ ಸಿಸಿ ಕ್ಯಾಮಾರಗಳ ಅಳವಡಿಕೆ.. ರಸ್ತೆಗಳ ಅಗಲೀಕರಣ. ಸ್ಮಾರಕಗಳ ಸುತ್ತೆಲ್ಲಾ ಸ್ವಚ್ಛತೆ ಕಾರ್ಯ. ಹೌದು ಇದೂ ದೇಶದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗಾಗಿ ನಡೆಯುತ್ತಿರುವ ಸಿದ್ದತೆಗಳು. ವಿಶ್ವ ವಿಖ್ಯಾತ ಹಂಪಿಯಲ್ಲಿ ಜುಲೈ 9 ರಿಂದ 16ರವರೆಗೆ ನಡೆಯಲಿರುವ ಶೃಂಗಸಭೆಗಾಗಿ ಹಂಪಿಯಲ್ಲೀಗ ಅಭಿವೃದ್ದಿ ಪರ್ವವೇ ಶುರುವಾಗಿದೆ.

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಜಿ-20 ಶೃಂಗಸಭೆ ನಡೆಯುತ್ತಿದೆ. ಜಿ-20 ಶೃಂಗಸಭೆಗೆ ಈ ಬಾರಿಯ ಅಧ್ಯಕ್ಷೀಯ ರಾಷ್ಟ್ರ ಭಾರತವಾಗಿದೆ. ಅದಕ್ಕಾಗಿಯೇ ಅತಿ ಮುಖ್ಯವಾದ ಜಿ-20 ಶೃಂಗಸಭೆಯ ಮೂರನೇ ಪ್ರಮುಖ ಸಭೆ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ನಾಳೆ ಜುಲೈ 9 ರಿಂದ 16ರವರೆಗೆ ನಡೆಯಲಿದೆ. ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೂರು ದಿನಗಳ ಕಾಲ ಅಂತರರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ಹಂಪಿಯಲ್ಲಿ ನಡೆಯಲಿದೆ.

ಹೀಗಾಗಿಯೇ ವಿಶ್ವ ವಿಖ್ಯಾತ ಹಂಪಿಯಲ್ಲೀಗ ಭರದ ಸಿದ್ದತೆಗಳನ್ನ ಕೈಗೊಳ್ಳಲಾಗುತ್ತಿದ್ದು, ಜಿ-20 ಶೃಂಗಸಭೆ ಹಿನ್ನೆಲೆಯಲ್ಲಿ ಹಂಪಿ ಪ್ರದೇಶದ ಸುತ್ತಮುತ್ತಲಿನ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದೆ. ಸ್ಮಾರಕಗಳ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು. 43 ರಾಷ್ಟ್ರಗಳ 20 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿರುವುದರಿಂದ ಹಂಪಿಯ ಸುತ್ತಮುತ್ತ ಎಲ್ಲೆಡೆ ಸಿಸಿ ಕ್ಯಾಮಾರಾಗಳ ಅಳವಡಿಕೆ ಮಾಡಲಾಗಿದೆ. ವಿಶ್ವ ವಿಖ್ಯಾತ ಹಂಪಿ ಇದೀಗ ಜಿ-20 ಶೃಂಗಸಭೆಗಾಗಿ ನವವಧುವಿನಂತೆ ಶೃಂಗಾರಗೊಳ್ಳುತ್ತಿದೆ.

ಜಿ-20 ಶೃಂಗಸಭೆಗೆ 20 ದೇಶಗಳ ಪೈಕಿ 19 ದೇಶಗಳ 30 ಪ್ರತಿನಿಧಿಗಳು. 9 ಆಹ್ವಾನಿತ ದೇಶಗಳ 16 ಪ್ರತಿನಿಧಿಗಳು ಸೇರಿದಂತೆ ಒಟ್ಟು 52 ಗಣ್ಯರು ಜಿ-20 ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಈಗಾಗಲೇ ಹಂಪಿ ಪಾರಂಪರಿಕ ಪ್ರದೇಶದಲ್ಲಿ ಶೆರ್ಪಾ ಸಭೆಗಾಗಿ (G20 Sherpa meeting) ಅಂತಿಮ ಹಂತದ ಸಿದ್ಧತೆ ಕೈಗೊಳ್ಳಲಾಗಿದೆ. ಈ ಶೆರ್ಪಾ ಸಭೆಯು ‘ವಸುದೈವ ಕುಟುಂಬಕಂ’ ಎಂಬ ಧ್ಯೇಯದಡಿ, ‘ಒಂದು ಭೂಮಿ, ಒಂದು ಕುಟುಂಬ, ಒಂದೇ ಭವಿಷ್ಯ’ ಎಂಬ ಘೋಷವಾಕ್ಯದಡಿ ಶೃಂಗಸಭೆ ಆಯೋಜನೆ ಮಾಡಲಾಗುತ್ತಿದೆ.

ಇಲ್ಲಿ 13 ದೇಶಗಳ ಉನ್ನತಮಟ್ಟದ ಅಧಿಕಾರವುಳ್ಳ ಪ್ರತಿನಿಧಿಗಳು ಭಾಗವಹಿಸಲಿದ್ದು, ಅಂತರರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ನಡೆಯಲಿವೆ. ಶೃಂಗಸಭೆಯ ವೇಳೆ ಜುಲೈ 9ರಿಂದ ಮೂರು ದಿನಗಳ ಕಾಲ ಹಂಪಿಯ ಐತಿಹಾಸಿಕ ಮಹತ್ವ ಸಾರಲಾಗುತ್ತದೆ. ಹಾಗೂ ಸಾಂಸ್ಕೃತಿಕ ಪ್ರದರ್ಶನದ ಮೂಲಕ ಗತವೈಭವ ಸಾರುವ ಸಿದ್ಧತೆ ನಡೆಸಲಾಗುತ್ತಿದೆ. ಶೃಂಗಸಭೆಗೆ ಬೇರೆ ಬೇರೆ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸುತ್ತಿರುವುದರಿಂದ ಹಂಪಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್​​ ಭದ್ರತೆ ನಿಯೋಜಿಸಲಾಗುತ್ತಿದೆ. ಭದ್ರತೆಗಾಗಿಯೇ ಎಸ್ ಪಿ ನೇತೃತ್ವದಲ್ಲಿ ವಿವಿಧ ಹಂತದ ಅಧಿಕಾರಿಗಳು ಸೇರಿದಂತೆ 1076 ಪೊಲೀಸ್​​ ಸಿಬ್ಬಂದಿಗಳನ್ನ ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೇ ಶೃಂಗಸಭೆಯ ಅವಧಿ ವೇಳೆ ಹಂಪಿ ಪ್ರದೇಶದಲ್ಲಿ ಡ್ರೋಣ್​​ ಕ್ಯಾಮಾರಾಗಳ ಹಾರಾಟವನ್ನು ಸಹ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಹಂಪಿಯಲ್ಲಿ ಜಿ-20 ಶೃಂಗಸಭೆ ನಡೆಯುತ್ತಿರುವುದರಿಂದ ವಿಜಯ ವಿಠಲ ಮಂದಿರದಲ್ಲಿರುವ ಸಪ್ತಸ್ವರ ಮಂಟಪ ಹಾಗೂ ಕಲ್ಲಿನ ರಥದ ಕಾಮಗಾರಿ ಸಂಪೂರ್ಣವಾಗಿದ್ದು ಕಲ್ಲಿನ ರಥದ ಸುತ್ತಲೂ ಕಟ್ಟಿಗೆಯ ಬೇಲಿ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಸ್ಮಾರಕಗಳ ಸುತ್ತಲಿನ ಪ್ರದೇಶಗಳ ಸ್ವಚ್ಚತೆ ಕಾರ್ಯ ಭರದಿಂದ ಸಾಗಿದ್ದು, ಹಿಂದೆಂದೂ ಕಾಣದಷ್ಟು ಅಭಿವೃದ್ದಿ ಕಾರ್ಯಗಳನ್ನ ಹಂಪಿಯಲ್ಲೀಗ ನಡೆಸುತ್ತಿರುವುದು ವಿಶೇಷವಾಗಿದೆ.

Published On - 12:39 pm, Sat, 8 July 23

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್