AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯನಗರ: ತಂದೆ ಕಣ್ಣೆದುರೇ ಜಲ ಸಮಾಧಿಯಾದ ಇಬ್ಬರು ಪುತ್ರರು; ಮತ್ತೊಬ್ಬ ಮಗ ಬಚಾವ್​

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ನೀರುಪಾಲಾಗಿದ್ದಾರೆ. ತಂದೆ ಕಣ್ಣೆದುರೇ ಪುತ್ರರು ಸಾವನ್ನಪ್ಪಿರುವಂತಹ ದುರ್ಘಟನೆ ನಡೆದಿದೆ. ಮಕ್ಕಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಸದ್ಯ ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರ: ತಂದೆ ಕಣ್ಣೆದುರೇ ಜಲ ಸಮಾಧಿಯಾದ ಇಬ್ಬರು ಪುತ್ರರು; ಮತ್ತೊಬ್ಬ ಮಗ ಬಚಾವ್​
ನೀರುಪಾಲುImage Credit source: tv9 kannada
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Mar 22, 2026 | 9:39 PM

Share

ವಿಜಯನಗರ, ಮಾರ್ಚ್​ 22: ತಂದೆ ಕಣ್ಣೆದುರೇ ತುಂಗಭದ್ರಾ ನದಿಯಲ್ಲಿ ಮುಳುಗಿ ಇಬ್ಬರು ಪುತ್ರರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಬಳಿ ನಡೆದಿದೆ. ಎಂ.ಜಿ.ಮನು(19) ಮತ್ತು ಎಂ.ಜಿ.ಪ್ರಜ್ವಲ್(18) ಮೃತರು. ನದಿಯಲ್ಲಿ ಮುಳುಗುತ್ತಿದ್ದ ಕಿರಿಮಗ ಚಿರಂಜೀವಿಯನ್ನ ತಂದೆ ಮಂಜಪ್ಪ ರಕ್ಷಿಸಿದ್ದಾರೆ. ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಬಳಿಯ ತುಂಗಭದ್ರ ನದಿಗೆ ಮೂವರು ಸಹೋದರರು ಕೆರೆಗೆ ಈಜಾಡಲು ಹೋಗಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ತಂದೆ ಕಣ್ಣೆದುರೇ ಇಬ್ಬರು ಮಕ್ಕಳು ಜಲ ಸಮಾಧಿಯಾಗಿದ್ದಾರೆ. ಇನ್ನೊಬ್ಬ ಮಗನನ್ನು ರಕ್ಷಿಸಲಾಗಿದೆ. ಮೃತ ಎಂ.ಜಿ.ಮನು ಬಿಇ ವಿದ್ಯಾರ್ಥಿಯಾಗಿದ್ದು, ಎಂ.ಜಿ.ಪ್ರಜ್ವಲ್ ಪಿಯು ಓದುತ್ತಿದ್ದ. ಸದ್ಯ ತುಂಗಭದ್ರಾ ನದಿಯಿಂದ ಸ್ಥಳೀಯರು ಇಬ್ಬರ ಶವ ಹೊರತೆಗೆದಿದ್ದಾರೆ. ಘಟನಾ ಸ್ಥಳದಲ್ಲಿ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

ಮೀನಿನ ಬಲೆಗೆ ಸಿಲುಕಿ ಮೀನುಗಾರ ಸಾವು 

ಮೀನು ಹಿಡಿಯಲು ಹೋಗಿದ್ದ ಮೀನುಗಾರ ಮೀನಿನ ಬಲೆಗೆ ಸಿಲುಕಿ ಸಾವನ್ನಪ್ಪಿರುವಂತಹ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದ ಹೊರಭಾಗದ ಭೀಮಾ ನದಿಯಲ್ಲಿ ನಡೆದಿದೆ. ಜೋಳದಡಗಿ ಗ್ರಾಮದ ನಿವಾಸಿ, ಮೀನುಗಾರ ನಾಗರಾಜ್ (28) ಮೃತ ದುರ್ದೈವಿ.

ಇದನ್ನೂ ಓದಿ: ಡಿಜೆ ಹಳ್ಳಿ ಅಪ್ರಾಪ್ತೆ ಕೊಲೆಗಾರ ಅಜ್ಮೀರ್​​ನಲ್ಲಿ ಅರೆಸ್ಟ್, ಪ್ರಾಯಶ್ಚಿತಕ್ಕಾಗಿ ದರ್ಗಾ ಮೊರೆ ಹೋಗಿದ್ದ ಹಂತಕ

ನಾಗರಾಜ್ ಎಂದಿನಂತೆ ನಸುಕಿನ ಜಾವ ಭೀಮಾನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ. ನದಿಯಲ್ಲಿ ಬೆಂಡ್ ಮೇಲೆ ಕುಳಿತು ಮೀನಿನ ಬಲೆ ಹಾಕಿ ಮೀನು ಹಿಡಿಯಲು ಮುಂದಾಗಿದ್ದ. ಈ ವೇಳೆ ಮೀನುಗಾರನ ಹತ್ತಿರ ಬಂದ ಬೃಹತ್ ಮೊಸಳೆ, ಮೀನುಗಾರ ಕುಳಿತ ಬೆಂಡ್ ಕೆಡವಿದೆ. ಈ ವೇಳೆ ಈಜಾಡಿ ಪಾರಾಗಿ ಬರಲು ಸಾಧ್ಯವಾಗದೇ ಮೀನಿನ ಬಲೆ ಕಾಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮಲಗಿದ್ದಾಗ ಗಂಡನ ಮರ್ಮಾಂಗಕ್ಕೆ ಒದ್ದು‌ ಕೊಲೆಗೆ ಯತ್ನಿಸಿದ ಪತ್ನಿ: ಆಗಿದ್ದೇನು?

ಮೀನುಗಾರರು ದೂರದಿಂದ ಕೂಗಿದ ಹಿನ್ನಲೆ ಮೊಸಳೆ ಪರಾರಿ ಆಗಿದೆ. ಸ್ಥಳೀಯ ಮೀನುಗಾರರು ಮೃತದೇಹವನ್ನು ಹೊರತೆಗೆದಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us