AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜೆ ಹಳ್ಳಿ ಅಪ್ರಾಪ್ತೆ ಕೊಲೆಗಾರ ಅಜ್ಮೀರ್​​ನಲ್ಲಿ ಅರೆಸ್ಟ್, ಪ್ರಾಯಶ್ಚಿತಕ್ಕಾಗಿ ದರ್ಗಾ ಮೊರೆ ಹೋಗಿದ್ದ ಹಂತಕ

ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯ ಭೀಕರ ಕೊಲೆ ಪ್ರಕರಣ ಸಂಬಂಧ ಭಾವಿ ಪತಿಯ ಕ್ರೂರತೆ ಬಯಲಾಗಿದೆ. ಯುವತಿ ಮೇಲೆ ಅನುಮಾನಗೊಂಡು ಆಕೆಯ ಎದೆ ಭಾಗ ಮತ್ತು ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು, ಕುತ್ತಿಗೆ ಕೊಯ್ದು ಆರೋಪಿ ಹತ್ಯೆಗೈದಿದ್ದ. ಬಳಿಕ ನಾಪತ್ತೆಯಾಗಿದ್ದ ಹಂತಕ ರಾಜಸ್ಥಾನದ ಅಜ್ಮೀರ್ ದರ್ಗಾ ಬಳಿ ಸಿಕ್ಕಿಬಿದ್ದಿದ್ದಾನೆ. ಅಷ್ಟಕ್ಕೂ ಕೊಲೆ ಮಾಡಿ ಅಜ್ಮೀರ್ ದರ್ಗಾಕ್ಕೆ ಹೋಗಿದ್ಯಾಕೆ ಎನ್ನುವುದನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ಡಿಜೆ ಹಳ್ಳಿ ಅಪ್ರಾಪ್ತೆ ಕೊಲೆಗಾರ ಅಜ್ಮೀರ್​​ನಲ್ಲಿ ಅರೆಸ್ಟ್, ಪ್ರಾಯಶ್ಚಿತಕ್ಕಾಗಿ ದರ್ಗಾ ಮೊರೆ ಹೋಗಿದ್ದ ಹಂತಕ
ಸೈಯದ್ ಶಬೀಲ್
ರಾಚಪ್ಪಾಜಿ ನಾಯ್ಕ್
| Edited By: |

Updated on: Mar 22, 2026 | 7:51 PM

Share

ಬೆಂಗಳೂರು, (ಮಾರ್ಚ್ 22): ನಗರದ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಭಾವಿ ಪತಿ ಸೈಯದ್ ಶಬೀಲ್ ಸಿಕ್ಕಿಬಿದ್ದಿದ್ದಾನೆ. ಮದುವೆಯಾಗಿಬೇಕಿದ್ದ ಯುವತಿ ಮೇಲಿನ ಅನುಮಾನದಿಂದ ಆಕೆನ್ನು ಕೊಂದಿದ್ದ. ಮಾರ್ಚ್ 17ರಂದು ಆಕೆಯನ್ನು ಭೇಟಿಯ ನೆಪದಲ್ಲಿ ಕರೆದು, ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಮತ್ತು ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ. ಬಳಿಕ ಪೊಲೀಸರು ಎಲ್ಲಾ ಕಡೆ ಶೋಧ ನಡೆಸಿದ್ದು, ಅಂತಿಮವಾಗಿ ಹಂತಕ ಶಬೀಲ್ ರಾಜಸ್ಥಾನದ ಅಜ್ಮೀರ್ ದರ್ಗಾ ಬಳಿ ಬಲೆಗೆ ಬಿದಿದ್ದಾನೆ. ಕೊಲೆ ಬಳಿಕ ಪಶ್ಚಾತ್ತಾಪಕ್ಕಾಗಿ ಅಜ್ಮೀರ್ ದರ್ಗಾಕ್ಕೆ ಹೋಗಿದ್ದ ಎಂದು ತಿಳಿದುಬಂದಿದೆ.

ಕೊಲೆ ಮಾಡಿ ಬಳಿಕ ತಲೆ ಮರಿಸಿಕೊಂಡಿದ್ದ ಶಬೀಲ್ ನನ್ನು ಅಜ್ಮೀರ್​​​ ನಲ್ಲಿ ಬಂಧಿಸುವಲ್ಲಿ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಬಳಿಕ ಪಶ್ಚಾತ್ತಾಪ ಪಟ್ಟು ಅಜ್ಮೀರಗೆ ತೆರಳಿದ್ದು, ದರ್ಗಾದಲ್ಲಿ ಪ್ರಾರ್ಥನೆ ಮಾಡಿ ಪ್ರಾಯಶ್ಚಿತಕ್ಕಾಗಿ ಬೇಡಿಕೊಂಡಿದ್ದ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ: ಭಾವಿ ಪತಿ ಅನುಮಾನಕ್ಕೆ ಅಪ್ರಾಪ್ತೆ ಬಲಿ

ಕೋಲಾರ ಮೂಲದ ಅಪ್ರಾಪ್ತ ಬಾಲಕಿ ಆಗಾಗ ಬೆಂಗಳೂರಿನ ಸಂಬಂಧಿಕರ ಮನೆಗೆ ಬರುತ್ತಿದ್ದಳು. ಈ ನಡುವೆ ಡಿಜೆ ಹಳ್ಳಿಯ ಈರುಳ್ಳಿ ಮಾರ್ಕೆಟ್​​ನಲ್ಲಿ ಕೆಲಸ ಮಾಡ್ತಿದ್ದ ಸೈಯದ್ ಶಬೀಲ್ ಎಂಬ ಯುವಕನ ಜೊತೆ ಆಕೆಗೆ ಪ್ರೀತಿ ಶುರುವಾಗಿತ್ತು. ಆಗಾಗ ಫೋನ್​​ನಲ್ಲಿಇವರು ಮಾತಾನಾಡುತ್ತಿರೋದನ್ನು ಗಮನಿಸಿದ ಸಂಬಂಧಿಕರು, ಪೋಷಕರಿಗೆ ವಿಚಾರ ತಿಳಿಸಿದ್ದರು. ಬಳಿಕ ಆಕೆ ಪ್ರೀತಿಸುತ್ತಿದ್ದವನ ಜೊತೆಯೇ ಮದುವೆ ಮಾಡಲು ಮನೆಯವರು ಮುಂದಾಗಿದ್ದರು. ಅದರಂತೆ ಕಳೆದ 2025ರ ಜೂನ್​​ನಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಕೆಲ ಸಮಯದ ಬಳಿಕ ಮದುವೆಯ ತಯಾರಿಯಲ್ಲೂ ಮನೆಯವರಿದ್ದರು. ಆದರೆ ಇತ್ತೀಚೆಗೆ ಅಪ್ರಾಪ್ತಳ ಮೇಲೆ ಅನುಮಾನ ಪಟ್ಟಿದ್ದ. ಬಳಿಕ ಇದೇ ಮಾರ್ಚ್ 17ರಂದು ಮಾತನಾಡುವ ನೆಪದಲ್ಲಿ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಗೆ ಕರೆದೊಯ್ದು ಆಕೆಯ ಎದೆ ಭಾಗ ಕತ್ತರಿಸಿ ಗುಪ್ತಾಂಗಕ್ಕೆ ಚಾಕುವಿನಿಂದ ಇರಿದಿದ್ದ. ಸಾಲದಕ್ಕೆ ಕುತ್ತಿಗೆ ಕೊಯ್ದು ಭೀಕರವಾಗಿ ಹತ್ಯೆಗೈದು ಪರಾರಿಯಾಗಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಕಿಸೆಯಿಂದ ಫೋನ್ ಹೊರತೆಗೆಯುತ್ತಿದ್ದಂತೆ ಸ್ಪೋಟ
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ಅಸ್ಸಾಂನಲ್ಲಿ ಆನೆಗಳ ಹಿಂಡು ರೈಲ್ವೆ ಹಳಿ ದಾಟುವವರೆಗೂ ಕಾದು ನಿಂತ ರೈಲು
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ರಾಮನಗರ: ವೃಷಭಾವತಿ‌ ನದಿಯಲ್ಲಿ ಕಂತೆ ಕಂತೆ ನೋಟುಗಳು ಪತ್ತೆ; ವಿಡಿಯೋ ನೋಡಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಗುಂಡೇಟಿಗೆ ಮೂವರು ಬಲಿ ಕೇಸ್​: ಮೃತರ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಏಯ್ ಯಾರಲ್ಲಿ ಟಿಕೆಟ್.. ಬಸ್ ಕಂಡಕ್ಟರ್ ಆದ ವಿದ್ಯಾರ್ಥಿ,ವಿಡಿಯೋ ವೈರಲ್!
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
ಶ್ವಾನದ ವೇಷದಲ್ಲೇ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ಯಕ್ತಿ
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
RSS ಬಗ್ಗೆ ಹೇಳಿಕೆ: ಸಚಿವ ಯತೀಂದ್ರ ವಿರುದ್ಧ ಎಸ್​​ಪಿಗೆ ಬಿಜೆಪಿ ದೂರು
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ": ಸಚಿವ ಶಿವಲಿಂಗೇಗೌಡ
ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ವಿಧಾನ ಪರಿಷತ್​​ಗೆ ನಾಗೇಂದ್ರ ಆಗಮನದ ವೇಳೆ ಗೋಬ್ಯಾಕ್​​ ಘೋಷಣೆ
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?
ತಮಿಳುನಾಡಿಗೆ ಕೆಆರ್​​ಎಸ್​ನಿಂದ ನೀರು ಹರಿಸಲಾಗ್ತಿದ್ಯಾ?: ಸಚಿವರು ಏನಂದ್ರು?