ಕಿಡ್ನ್ಯಾಪ್ ಮಾಡಿ 20 ಲಕ್ಷ ರೂ. ಹಣ ಕದ್ದಿದ್ದ 7 ಆರೋಪಿಗಳು ದಾವಣಗೆರೆಯಲ್ಲಿ ಬಂಧನ!

| Updated By: sandhya thejappa

Updated on: Jul 23, 2022 | 9:19 AM

20 ಲಕ್ಷ ನಗದು ಕಸಿದುಕೊಂಡು 80 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿಡ್ನ್ಯಾಪ್ ಮಾಡಿ 20 ಲಕ್ಷ ರೂ. ಹಣ ಕದ್ದಿದ್ದ 7 ಆರೋಪಿಗಳು ದಾವಣಗೆರೆಯಲ್ಲಿ ಬಂಧನ!
ಬಂಧಿತ ಆರೋಪಿಗಳು
Follow us on

ವಿಜಯನಗರ: ಕಿಡ್ನ್ಯಾಪ್ (Kidnap) ಮಾಡಿ 20 ಲಕ್ಷ ರೂ. ಹಣ ಕದ್ದಿದ್ದ ಏಳು ಆರೋಪಿಗಳನ್ನ 24 ಗಂಟೆಯೊಳಗೆ ವಿಜಯನಗರ ಪೊಲೀಸರು (Police) ದಾವಣಗೆರೆಯಲ್ಲಿ ಸೆರೆ ಹಿಡಿದಿದ್ದಾರೆ. ಶಾಂತಕುಮಾರ್, ಅಲ್ತಾಫ್, ಚಿರಾಗ್, ರಾಕೇಶ್, ರಾಹುಲ್, ಮಂಜುನಾಥ್, ಶಿವಕುಮಾರ್ ಬಂಧಿತರು. ಆರೋಪಿಗಳು ರಿಯಲ್ ಎಸ್ಟೇಟ್ ಏಜೆಂಟ್ ಹಾಲೇಶ್ನನ್ನ ಅಪಹರಿಸಿದ್ದರು. 20 ಲಕ್ಷ ನಗದು ಕಸಿದುಕೊಂಡು 80 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಿಂದ 16.50 ಹಣ, ಕಾರು, 5 ಮೊಬೈಲ್, 2 ಮಚ್ಚು, 2 ಚಾಕು ಜಪ್ತಿ ಮಾಡಲಾಗಿದೆ.

ಚಿರತೆ ದಾಳಿ, ಮೇಕೆ‌ ಸಾವು:
ರಾಮನಗರ: ಬೆಂಗಳೂರು ದಕ್ಷಿಣ ತಾಲೂಕಿನ ಹೊಸಪಾಸ್ಯ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೇಕೆ ಸಾವನ್ನಪ್ಪಿದೆ. ಲಕ್ಷಣ್‌ ಎಂಬುವವರಿಗೆ ಸೇರಿದ ಮೇಕೆ ಸಾವನ್ನಪ್ಪಿದೆ. ಚಿರತೆ ಪದೇ ಪದೇ ಗ್ರಾಮದಲ್ಲಿ ‌ಜಾನುವಾರುಗಳು, ಮೇಕೆ ಮೇಲೆ ದಾಳಿ ನಡೆಸುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವ್ಯಾಕ್ಸಿಂಗ್ ಬಳಿಕ ಮುಖದಲ್ಲಿ ದದ್ದುಗಳು ಮೂಡಿದರೆ ಏನು ಮಾಡಬೇಕು?

ಇದನ್ನೂ ಓದಿ
ChandraShekhar Azad Birth Anniversary: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ 116ನೇ ಜನ್ಮದಿನ; ಆಜಾದ್​ರ ಆಸಕ್ತಿದಾಯಿಕ ಸಂಗತಿಗಳು ಇಲ್ಲಿವೆ
Shikhar Dhawan: ರಣ ರೋಚಕ ಜಯದ ಬಳಿಕ ನಾಯಕ ಶಿಖರ್ ಧವನ್ ಏನು ಹೇಳಿದರು ನೋಡಿ
ಸಿದ್ದರಾಮೋತ್ಸವಕ್ಕೆ ಎದಿರೇಟು ಕೊಡಲು ಸಜ್ಜಾದ ಬಿಜೆಪಿ: ಸಂಪುಟ ವಿಸ್ತರಣೆ ಮೂಲಕ ಮತಬ್ಯಾಂಕ್ ಉಳಿಸಿಕೊಳ್ಳಲು ಯತ್ನ
Kerala Gold Smuggling Case: ತನಿಖಾ ಸಂಸ್ಥೆ ನಮ್ಮ ಪರವಾದ ಸಾಕ್ಷ್ಯಗಳನ್ನು ಡಿಲೀಟ್ ಮಾಡಿದೆ; ಸ್ವಪ್ನಾ ಸುರೇಶ್ ಆರೋಪ

ಹಾಸ್ಟೆಲ್​​ನಲ್ಲಿ ರಾತ್ರಿ ಊಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ:
ಚಿತ್ರದುರ್ಗ: ಹೊಳಲ್ಕೆರೆ ಪಟ್ಟಣದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ಹಾಸ್ಟೆಲ್​​ನಲ್ಲಿ ರಾತ್ರಿ ಊಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರಾಗಿರುವ ವಿದ್ಯಾರ್ಥಿಗಳನ್ನ ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೃದಯಾಘಾತದಿಂದ ಯೋಧ ಸಾವು:
ಹೃದಯಾಘಾತದಿಂದ ಹಾವೇರಿ ಜಿಲ್ಲೆಯ ಯೋಧ ಮೃತಪಟ್ಟಿದ್ದಾರೆ. ಪಠಾಣ್​ಕೋಟ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಮಲ್ಲಿಕಾರ್ಜುನಯ್ಯ ಹೃದಯಾಘಾತದಿಂದ ಜು.21ರಂದು ಮೃತಪಟ್ಟಿದ್ದರು. ಇಂದು ಹಾವೇರಿ ತಾಲೂಕಿನ ಎಂ.ಜಿ.ತಿಮ್ಮಾಪುರ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ತರಲಾಗುತ್ತಿದೆ.

ಇದನ್ನೂ ಓದಿ: Petrol Price Today: ವೈಮಾನಿಕ ಇಂಧನದ ತೆರಿಗೆ ಇಳಿಸಿದ ಸರ್ಕಾರ, ದೇಶದ ವಿವಿಧೆಡೆ ಪೆಟ್ರೋಲ್-ಡೀಸೆಲ್ ಬೆಲೆ ಹೀಗಿದೆ

Published On - 8:32 am, Sat, 23 July 22