ವಿಜಯಪುರ: ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ವ್ಯಕ್ತಿ ಕೊಲೆ; ಇಬ್ಬರ ಬಂಧನ

| Updated By: shruti hegde

Updated on: Oct 27, 2021 | 11:47 AM

ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ 34 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಘಟನೆ ವಿಜಯಪುರದ ಸಿಂದಗಿ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದಿದೆ.

ವಿಜಯಪುರ: ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ವ್ಯಕ್ತಿ ಕೊಲೆ; ಇಬ್ಬರ ಬಂಧನ
ಸಾಂಕೇತಿಕ ಚಿತ್ರ
Follow us on

ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ರವಿ ಎಂಬಾತನನ್ನು ಅಪಹರಿಸಿ ಕೊಲೆ ಮಾಡಲಾಗಿದೆ. ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದಿದೆ. ಯುವತಿಯ ಕುಟುಂಬದ ಸದಸ್ಯರು 34 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿಯ ಕುಟುಂಬದ ಇಬ್ಬರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಮೃತನ ಶವ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ. ಕಳೆದ ಶುಕ್ರವಾರ ಯುವತಿ ಪೊಲೀಸರಿಗೆ ಕರೆ ಮಾಡಿ, ನನ್ನ ಗೆಳೆಯನ ಜೀವಕ್ಕೆ ಅಪಾಯವಿದೆ. ದಯವಿಟ್ಟು ಆತನನ್ನು ರಕ್ಷಿಸಿ ಎಂದು ಎಂದು ಕೋರಿದ್ದಳು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಮಹಿಳೆ ದೂರವಾಣಿ ಕರೆ ಮಾಡಿದ ತಕ್ಷಣ ಪೊಲೀಸರು ಆಕೆಯ ಸುರಕ್ಷತೆಗೆ ಪೊಲೀಸ್ ಠಾಣೆಗೆ ಅವಳನ್ನು ಕರೆತಂದರು.

ಮೃತ ಯುವಕ ಕಳೆದ ಗುರುವಾರರಿಂದ ನಾಪತ್ತೆಯಾಗಿದ್ದ ಎಂದು ಶುಕ್ರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಯುವತಿಯ ಚಿಕ್ಕಪ್ಪ ಮತ್ತು ಸಹೋದರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯ ತಂದೆ ಮತ್ತು ಅಣ್ಣ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಆದ್ದರಿಂದ ಯುವತಿಯ ಚಿಕ್ಕಪ್ಪ ಮತ್ತು ಆಕೆಯ ಕಿರಿಯ ಸಹೋದರನನ್ನು ಬಂಧಿಸಿದ್ದೇವೆ. ಇಬ್ಬರೂ ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರು ಹೇಳಿರುವಂತೆ ಗ್ರಾಮದ ಕೆರೆಯಲ್ಲಿ ರವಿಯ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:

ಹೆಂಡತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಆತ್ಮಹತ್ಯೆಗೆ ಶರಣು!

Crime News: ಮೈಸೂರು ಹೊರವಲಯದಲ್ಲಿ ಡಬಲ್ ಮರ್ಡರ್; ಮಗನಿಂದಲೇ ತಂದೆ ಮತ್ತು ತಂದೆಯ ಪ್ರೇಯಸಿ ಕೊಲೆ