ವಿಜಯಪುರ, ಫೆ.08: ಗೂಡ್ಸ್ ವಾಹನ ಮತ್ತು ಕ್ರೂಸರ್ ಮಧ್ಯೆ ಡಿಕ್ಕಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ (Babaleshwar) ತಾಲೂಕಿನ ಮಧಬಾವಿ ಕ್ರಾಸ್ ಬಳಿ ನಡೆದಿದೆ. ಮಂಗಳೂರು ಗ್ರಾಮದ ಸುನಂದಾ ಹಾದಿಮನಿ (40) ಮೃತ ರ್ದುದೈವಿ. ಇನ್ನುಳಿದಂತೆ ಇತರರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ವಿಜಯಪುರ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಕಾರು ಡ್ರೈವಿಂಗ್ ಕಲಿಸಲು ಹೋಗಿ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ಗಳಿಗೆ ಗುದ್ದಿದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೆಎಲ್ಇ ಕಾನೂನು ಕಾಲೇಜು ಬಳಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ವೇಳೆ ಬೇಕರಿ ಬಳಿ ನಿಂತಿದ್ದ 8 ಬೈಕ್ಗಳು ಜಖಂ ಆಗಿವೆ. ಈ ಕುರಿತು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ: ರೈಲು ಅಪಘಾತದಲ್ಲಿ ತಾಯಿ ಜೊತೆಗೆ ಕಾಲು ಕಳ್ಕೊಂಡ ಕರುವಿಗೆ ಕೃತಕ ಕಾಲು ಜೋಡಣೆ
ಧಾರವಾಡ: ನಗರದ ಚರಂತಿಮಠ ಗಾರ್ಡನ್ ಹತ್ತಿರದ ರೈತನ ಸೊಯಾಬಿನ್ ಬಣವೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ. ಗಂಗನಗೌಡ ಪಾಟೀಲ್ ಎಂಬುವರಿಗೆ ಸೇರಿದ ಬಣವೆ ಇದಾಗಿದ್ದು, ಕಿಡಿಗೇಡಿಗಳ ಕೃತ್ಯದಿಂದ 2 ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ. ಮೊದಲೇ ಬರಗಾಲದಿಂದ ಬೇಸತ್ತಿದ್ದ ರೈತ, ಇದೀಗ ಕಿಡಿಗೇಡಿಗಳು ಮಾಡಿದ ತಪ್ಪಿನಿಂದ ಕಂಗಾಲಾಗಿದ್ದಾನೆ. ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಶಹರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:08 pm, Thu, 8 February 24