ಸಿಎಂ ಬೊಮ್ಮಾಯಿ ಹೆಬ್ಬೆಟ್ ಗಿರಾಕಿ, ಅವರಿಗೆ ಕಾನೂನು ತಿಳಿವಳಿಕೆಯೇ ಇಲ್ಲ -ಪೊಲೀಸ್ ಮಹಾಸಂಘದ ರಾಜ್ಯಾಧ್ಯಕ್ಷ ವಿ ಶಶಿಧರ

Karnataka Police: ಅಲೋಕ ಕುಮಾರರರು ನೂರು ಜನ ಬಂದರೂ ಅವರನ್ನು ಎದುರಿಸೋ ಶಕ್ತಿ ಪೊಲೀಸ್ ಮಹಾಸಂಘಕ್ಕೆ ಇದೆ. ಪೊಲೀಸ್ ಮಹಾಸಂಘ ದೇಶಪ್ರೇಮ, ವೀರ ಸೇನಾನಿಗಳನ್ನು ಹುಟ್ಟುಹಾಕುವ ಸಂಘ ನಮ್ಮದು -ಪೊಲೀಸ್ ಮಹಾಸಂಘದ ರಾಜ್ಯಾಧ್ಯಕ್ಷ ವಿ ಶಶಿಧರ

ಸಿಎಂ ಬೊಮ್ಮಾಯಿ ಹೆಬ್ಬೆಟ್ ಗಿರಾಕಿ, ಅವರಿಗೆ ಕಾನೂನು ತಿಳಿವಳಿಕೆಯೇ ಇಲ್ಲ -ಪೊಲೀಸ್ ಮಹಾಸಂಘದ ರಾಜ್ಯಾಧ್ಯಕ್ಷ ವಿ ಶಶಿಧರ
ಸಿಎಂ ಬೊಮ್ಮಾಯಿ ಹೆಬ್ಬೆಟ್ ಗಿರಾಕಿ -ಪೊಲೀಸ್ ಮಹಾಸಂಘದ ರಾಜ್ಯಾಧ್ಯಕ್ಷ ವಿ ಶಶಿಧರ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Mar 15, 2023 | 10:25 AM

ಪೊಲೀಸ್ ಇಲಾಖೆಯಲ್ಲಿ ಔರಾದಕರ್ ವರದಿ ಜಾರಿಗಾಗಿ (Auradkar committee police pay scale report) ಸಾಕಷ್ಟು ಒತ್ತಡ ಹಾಕಿ ಪ್ರಯತ್ನ ಮಾಡುತ್ತಿದ್ದೇವೆ, ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೆಬ್ಬೆಟ್ ಗಿರಾಕಿ (Thumb Impression), ಅವರಿಗೆ ಏನು ತಿಳಿವಳಿಕೇನೇ ಇಲ್ಲಾ ಎಂದು ಪೊಲೀಸ್ ಮಹಾಸಂಘದ ರಾಜ್ಯಾಧ್ಯಕ್ಷ ವಿ ಶಶಿಧರ ವಿಜಯಪುರ ನಗರದಲ್ಲಿ ತೀಕ್ಷಣವಾಗಿ ಹೇಳಿದ್ದಾರೆ. ನಗರದಲ್ಲಿ (Vijayapura) ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶಶಿಧರ ಅವರು ಸಿಎಂ ಬೊಮ್ಮಾಯಿ ನಮ್ಮ ಕುಟುಂಬದ ಸದಸ್ಯರ ಮದುವೆಗೆ ಬಂದಿದ್ದಾಗ ಅಲ್ಪ ಪ್ರಮಾಣದ ವೇತನ ಹೆಚ್ಚಳ ಮಾಡೋದಾಗಿ ಹೇಳಿದ್ದರು. ಮದುವೆ ಮನೇಲೆ ಬೊಮ್ಮಾಯಿ ಅವರಿಗೆ ತರಾಟೆಗೆ ತಗೊಂಡೆ. ಅವರಿಗೇನು ತಿಳಿವಳಿಕೆಯೇ ಇಲ್ಲಾ ಎಂದು ಕಿಡಿಕಾರಿದರು. ಐಎಎಸ್ ಹಾಗೂ ಐಪಿಎಸ್ ಹೇಳಿದಂಗೆ ಇವರು ಕೇಳುತ್ತಾರೆ. ಆದರೆ ಇವರಿಗೆ ಕಾನೂನು ತಿಳಿವಳಿಕೆನೇ ಇಲ್ಲಾ, ಹೆಬ್ಬೆಟ್ಟು ಗಿರಾಕಿಗಳು, ಇವರಿಗೆ ಕಾನೂನು ಏನು ಎತ್ತ ಎಂಬುದು ಗೊತ್ತಿಲ್ಲವೆಂದು ವಿ ಶಶಿಧರ ಆಕ್ರೋಶ ವ್ಯಕ್ತಪಡಿಸಿದರು. ಐಎಎಸ್ ನವರು ಫೈಲ್ ತಂದು ಇಡುತ್ತಾರೆ, ಸೆಕ್ಷನ್ ಆಫೀಸರ್ಸ್ ಫೈಲ್ ತರ್ತಾರೆ, ಇವರು ಸಹಿ ಮಾಡಿ ಕಳಿಸುತ್ತಾರೆ. ನಮ್ಮ ದುರಂತ ಜನಾಡಳಿತನ್ನು ಇಂತಹವರ ಕೈಗೆ ಕೊಟ್ಟು ನಲುಗಿ ಹೋಗುತ್ತಿದ್ದೇವೆ (Karnataka Police) ಎಂದು ಹೇಳಿದರು.

ಒಂದೊಂದು ವಿಧಾನಸಭೆ ಕ್ಷೇತ್ರದಲ್ಲಿ ಗೆಲ್ಲಬೇಕು ಅಂದರೆ ಇಂದು 100 ರಿಂದ 120 ಕೋಟಿ ರೂಪಾಯಿ ಬೇಕು. ಮತ್ತೆ ಅವರು ಸುಮ್ಮನಿರ್ತಾರಾ? ಇವೆಲ್ಲಾ ಇಂದು ದಂದೆಯಾಗಿದೆ. ಚುನಾವಣಾ ವ್ಯವಸ್ಥೆ, ಜನತಂತ್ರ, ಅಧಿಕಾರಶಾಹಿ ಇವೆಲ್ಲಾ ದಂದೆಗಳಾಗಿವೆ. ನಾವು, ನೀವು ಕೊಟ್ಟ ತೆರಿಗೆಯನ್ನು ಯಾವುದಕ್ಕೋ ಕೊಡುತ್ತಾರೆ. ನಾನು ಪೊಲೀಸ್ ಸಿಬ್ಬಂದಿ ಮಂಡಳಿಗೆ ಕೊಡಿ ಅಂತ ಕೇಳಿದೀನಿ. ಪೊಲೀಸ್ ಮಹಾಸಂಘಕ್ಕೆ ನನ್ನನ್ನ ಗುರುತಿಸೋದಿಲ್ಲಾ. ನನಗೆ ಯಾವುದೇ ಸ್ಥಾನಮಾನಗಳನ್ನು ಕೊಡೋದಿಲ್ಲಾ. ನಾನು ರಾಜಕೀಯಕ್ಕೂ ಹೋಗಿಲ್ಲಾ, ಯಾರಿಗೂ ಅರ್ಜಿ‌ ಹಾಕಿಲ್ಲಾ. ಪೊಲೀಸರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರ್ತಿನಿ, ಪೊಲೀಸ್ ಸಿಬ್ಬಂದಿ ಮಂಡಳಿಗೆ ಕೊಡಿ ಅಂತ ನಾನು ಹೇಳಿದೀನಿ. ನಾನು ರೆಬೆಲ್ ಅಂತಾ ಅವರಿಗೆ ಗೊತ್ತು, ನನ್ನ ಕೈಗೆ ಕೊಟ್ಟರೆ ಪೊಲೀಸ್ ವ್ಯವಸ್ಥೆ ನಾವು ನಿಭಾಯಿಸೋದು ಕಷ್ಟ ಆಗುತ್ತದೆ ಅಂತ ಆಗಲ್ಲಾ ಅಂತಾರೆ ಎಂದು ಶಶಿಧರ ಹೇಳಿದರು.

ಇದೇ ವೇಳೆ ಕಾನೂನು ಹಾಗೂ ಸುವ್ಯವಸ್ಥೆ ಎಡಿಜಿಪಿ ಅಲೋಕಕುಮಾರ ವಿರುದ್ದ ಮಾತನಾಡಿದ ಶಶಿಧರ ನನ್ನ ಇತಿಹಾಸ ಏನು, ಅಲೋಕಕುಮಾರ ಇತಿಹಾಸ ಏನು ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಲಾಟರಿ ಹಗರಣದಲ್ಲಿ ಹಾಗೂ ಬೇರೆ ಬೇರೆ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿರೋ ವ್ಯಕ್ತಿ ನಮಗೆ ನೀತಿ ಪಾಠ ಹೇಳೊಕೆ ಹೊರಟಿದಾರೇನು? ಎಂದು ಎಡಿಜಿಪಿ ಅಲೋಕಕುಮಾರ ವಿರುದ್ದ ಮಾತನಾಡಿದರು.

ಈ ಹಿಂದೆ ವಿಜಯಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಪೊಲೀಸ್ ಮಹಾಸಂಘದ ಪದಾಧಿಕಾರಿಗಳ ಜೊತೆಗೆ ಅಲೋಕುಮಾರ ಅನುಚಿತವಾಗಿ ವರ್ತನೆ ಮಾಡಿದ್ದರು. ಇಂತಹ ಅಲೋಕ ಕುಮಾರರರು ನೂರು ಜನ ಬಂದರೂ ಅವರನ್ನು ಎದುರಿಸೋ ಶಕ್ತಿ ಪೊಲೀಸ್ ಮಹಾಸಂಘಕ್ಕೆ ಇದೆ. ಪೊಲೀಸ್ ಮಹಾಸಂಘ ದೇಶಪ್ರೇಮ, ವೀರ ಸೇನಾನಿಗಳನ್ನು ಹುಟ್ಟುಹಾಕುವ ಸಂಘ ನಮ್ಮದು ಎಂದರು.

ಸಮಾಜದಲ್ಲಿ ಅವ್ಯವಸ್ಥೆ ಆಗಿದೆ, ದೇಶ ಒಡೆಯುವ ಕೆಲಸ ಆಗುತ್ತಿದೆ. ಇದನ್ನು ನಿರ್ಭಂದಿಸುವ ಕೆಲಸ ಸಂಘಟನೆ ಮಾಡುತ್ತಿದೆ. ಇದನ್ನು‌ ಯಾರೂ ನಿರ್ಭಂದಿಸೋಕೆ ಆಗಲ್ಲಾ. ಪೊಲೀಸ್ ಸಂಘ ಮಾಡಬಾರದು ಅಂತಾರೆ, ಮಾಡಿ ವಸೂಲಿಗೆ ಇಳಿಯಬಾರದು ಅಂತಾರೆ‌. ವಸೂಲಿಗೆ ಯಾರು ಇಳಿದಿದಾರೋ ಗೊತ್ತಿಲ್ಲಾ. ಇವರು ಖಾಕಿ ಬಟ್ಟೆ ಹಾಕೊಂಡು ಏನೆಲ್ಲಾ ಮಾಡುತ್ತಿದಾರೆ ಎಂಬುದು ಇಡಿ ವ್ಯವಸ್ಥೆಗೆ ಗೊತ್ತಿದೆ. ಪೊಲೀಸ್ ಸಂಘಟನೆ ಎಂಬುದು ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ತರಲು ದಿಟ್ಟ ಹೆಜ್ಜೆ ಇಟ್ಟಿರುವ ಸಂಘಟನೆ ಎಂದು ಹೇಳಿದರು.

ವರದಿ: ಅಶೋಕ ಯಡಳ್ಳಿ, ಟಿವಿ9, ವಿಜಯಪುರ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ