ವಿಜಯಪುರ, (ಜನವರಿ 12): ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ ವಿಜಯಪುರ (Vijayapura) ಮಹಾನಗರ ಪಾಲಿಕೆ ಕಾಂಗ್ರೆಸ್ ತೆಕ್ಕೆಗೆ ಹೋಗಿದೆ. ಕಾಂಗ್ರೆಸ್ ಮಾಹೇಜಬೀನ್ ಹೊರ್ತಿ ಅವರು ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅದರಂತೆ ಇಂದು(ಜನವರಿ 12) ಮಾಹೇಜಬೀನ್ ಹೊರ್ತಿ ಅವರು ಕಚೇರಿಯಲ್ಲಿ 21ನೇ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದರು. ಆದ್ರೆ, ಇಸ್ಲಾಂ ಧರ್ಮದಂತೆ ಮೌಲ್ವಿ ಪ್ರಾರ್ಥನೆ ಮಾಡಿದ ಬಳಿಕ ಅಧಿಕಾರ ಸ್ವೀಕರಿಸಿದ್ದು ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ.
21 ನೇ ಅವಧಿಯ ಮಹಾನಗರ ಪಾಲಿಕೆಯ ಮೇಯರ್ ಪದಗ್ರಹದ ವೇಳೆ ಮುಸ್ಲಿಂ ಮೌಲ್ವಿಯೋರ್ವರು, ಇಸ್ಲಾಂ ಧರ್ಮದ ಪ್ರಾರ್ಥನೆ ಮಾಡಿದರು. ಎಲ್ಲ ಧರ್ಮಗಳ ಜನರಿಗೂ ಒಳ್ಳೆಯ ಕೆಲಸ ಮಾಡಬೇಕೆಂದು ಪ್ರಾರ್ಥಿಸಿದರು. ಬಳಿಕ ಮಾಹೇಜಬೀನ್ ಹೊರ್ತಿ ಅವರು ಅಧಿಕಾರ ಸ್ವೀಕಾರ ಮಾಡಿದರು. ಈ ವೇಳೆ ಉಪ ಮೇಯರ್ ದಿನೇಶ ಹಳ್ಳಿ, ಕಾಂಗ್ರೆಸ್ ಕಾರ್ಪೋರೇಟರ್ಸ್ ಹಾಗೂ ಇತರರು ಭಾಗಿಯಾಗಿದ್ದರು.
ಇದನ್ನೂ ಓದಿ: ವಿಜಯಪುರ ಮಹಾನಗರ ಪಾಲಿಕೆ ಕೊನೆಗೂ ಕಾಂಗ್ರೆಸ್ ತೆಕ್ಕೆಗೆ, ಯತ್ನಾಳ್ಗೆ ಮುಖಭಂಗ
ಜನವರಿ 09 ನಡೆದಿದ್ದ ನಡೆದ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ಮಹೆಜಬೀನ್ ಹೊರ್ತಿ ಅವರು ಒಟ್ಟು 22 ಮತ ಪಡೆದು ಮೇಯರ್ ಆಗಿ ಆಯ್ಕೆಯಾಗಿದ್ದರೆ, ಎಸ್ ಟಿಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ಸಿನ ದಿನೇಶ್ ಹಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದರು.
10 ಕಾಂಗ್ರೆಸ್ ಸದಸ್ಯರು ಐವರು ಪಕ್ಷೇತರರು, ಇಬ್ಬರು ಎಐಎಂಐಎಂ, ಓರ್ವ ಜೆಡಿಎಸ್ ಸದಸ್ಯರ ಬೆಂಬಲ ಹಾಗೂ ಶಾಸಕರಾದ ಎಂಬಿ ಪಾಟೀಲ್, ವಿಠ್ಠಲ್ ಕಟಕದೊಂಡ, ಪರಿಷತ್ ಸದಸ್ಯರಾದ ಸುನಿಲಗೌಡ ಪಾಟೀಲ್, ಪ್ರಕಾಶ್ ರಾಥೋಡ್ ಮತಗಳ ಬೆಂಬಲದೊಂದಿಗೆ ಕಾಂಗ್ರೆಸ್ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿತ್ತು. ಆದ್ರೆ, ಬಿಜೆಪಿ ಬಹುಮತ ಇದ್ದರೂ ಸಹ ಚುನಾವಣೆ ಬಹಿಷ್ಕರಿಸಿ ಅಧಿಕಾರ ಕಳೆದುಕೊಂಡಿತ್ತು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ