Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೇಮಿಗಳೆಂದು ಭಾವಿಸಿ ಸಹೋದರ, ಸಹೋದರಿ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಬೆಳಗಾವಿ ತಾಲೂಕಿನ ನಿವಾಸಿಗಳಾದ 24 ವರ್ಷದ ಯುವತಿ, 21 ವರ್ಷದ ಯುವಕ ಯುವನಿಧಿ ಅರ್ಜಿ ಸಲ್ಲಿಸಲು ಬಂದಿದ್ದರು. ಯುವತಿ ಮುಖಕ್ಕೆ ಬಟ್ಟೆ ಕಟ್ಟಿದ್ದಳು, ಯುವಕ ಹಣೆಗೆ ತಿಲಕ ಇಟ್ಟುಕೊಂಡಿದ್ದನು. ಇವರನ್ನು ನೋಡಿದ ಅನ್ಯಕೋಮಿನ 16 ಜನ ಯುವಕರ ಗ್ಯಾಂಗ್ ಮುಂದೇನು ಮಾಡಿದರು? ಇಲ್ಲಿದೆ ಓದಿ

ಪ್ರೇಮಿಗಳೆಂದು ಭಾವಿಸಿ ಸಹೋದರ, ಸಹೋದರಿ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ
ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ
Follow us
Sahadev Mane
| Updated By: ವಿವೇಕ ಬಿರಾದಾರ

Updated on: Jan 07, 2024 | 8:13 AM

ಬೆಳಗಾವಿ, ಜನವರಿ 07: ಪ್ರೇಮಿಗಳೆಂದು (Lovers) ಭಾವಿಸಿ ಸಹೋದರ ಮತ್ತು ಸಹೋದರಿ ಮೇಲೆ ಅನ್ಯಕೋಮಿನ ಯುವಕರು ನೈತಿಕ ಪೊಲೀಸಗಿರಿ (Moral police) ನಡೆಸಿರುವ ಘಟನೆ ಬೆಳಗಾವಿಯ (Belagavi) ಕೋಟೆ ಕರೆ ಆವರಣದಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ನಿವಾಸಿಗಳಾದ 24 ವರ್ಷದ ಯುವತಿ, 21 ವರ್ಷದ ಯುವಕ ಯುವನಿಧಿ ಅರ್ಜಿ ಸಲ್ಲಿಸಲು ಬಂದಿದ್ದರು.

ಯುವತಿ ಮುಖಕ್ಕೆ ಬಟ್ಟೆ ಕಟ್ಟಿದ್ದಳು, ಯುವಕ ಹಣೆಗೆ ತಿಲಕ ಇಟ್ಟುಕೊಂಡಿದ್ದನು. ಇವರನ್ನು ಕಂಡ ಅನ್ಯಕೋಮಿನ 16 ಜನ ಯುವಕರ ಗ್ಯಾಂಗ್​ ಹಿಂದೂ‌ ಯುವಕ, ಮುಸ್ಲಿಂ ಯುವತಿ ಪ್ರೇಮಿಗಳೆಂದು ಥಳಿಸಿದ್ದಾರೆ. ನಂತರ ಹತ್ತಿರವೊಂದರ ಕೊಠಡಿಯಲ್ಲಿ 2-3 ಗಂಟೆಗಳ ಕಾಲ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಿದ್ದಾರೆ. ಬಳಿಕ ಯುವತಿ ಮೊಬೈಲ್ ನಿಂದ ಕುಟುಂಬಸ್ಥರಿಗೆ ಕರೆ‌‌ ಮಾಡಿದ್ದಾರೆ. ಆಗ ಕುಟುಂಬಸ್ಥರು ಅವರಿಬ್ಬರು ಸಹೋದರಿ, ಸಹೋದರರು ಅಂತ ಹೇಳಿದರೂ ನಂಬದೆ, ಮೊಬೈಲ್ ಸ್ವೀಚ್ ಆಫ್ ಮಾಡಿ ಮತ್ತೆ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವೇಳೆ ಯುವಕ ಮತ್ತು ಯುವತಿ ತಾವು ಸಹೋದರಿ, ಸಹೋದರ ಅಂತಾ ಹೇಳಿದರೂ ದುಷ್ಕರ್ಮಿಗಳು ನಂಬಿಲ್ಲ.

ಇದನ್ನೂ ಓದಿ: ಬೆಳಗಾವಿಯಲ್ಲಿ ನೈತಿಕ ಪೊಲೀಸಗಿರಿ: ಯುವತಿ ಜೊತೆ ಹೋಗಿದ್ದಕ್ಕೆ ಹಲ್ಲೆ, 6 ಜನರ ಬಂಧನ

ಕೂಡಲೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮೊಬೈಲ್​ ಲೋಕೇಶ್ ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಇಬ್ಬರನ್ನೂ ರಕ್ಷಣೆ ಮಾಡಿದ್ದಾರೆ. 16 ಜನರಲ್ಲಿ ಓರ್ವ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಭೀರ ಗಾಯಗೊಂಡ ಯುವತಿ ಮತ್ತು ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ಯುವತಿಯ ತಾಯಿ ಹಿಂದೂ, ತಂದೆ ಮುಸ್ಲಿಂ ಆಗಿದ್ದು, ಪ್ರೀತಿಸಿ ಮದುವೆ ಆಗಿದ್ದಾರೆ. ಯುವತಿ ತನ್ನ ಚಿಕ್ಕಮ್ಮನ ಮಗನ ಜತೆಗೆ ಅರ್ಜಿ ಹಾಕಲು ಹೋದ ವೇಳೆ ಘಟನೆ ನಡೆದಿದೆ.

 ರಾಷ್ಟ್ರದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ