ವಿಜಯಪುರ: ಆಶಾ ಕಾರ್ಯಕರ್ತೆ ವಿರುದ್ಧ ನಾಲ್ಕು ಕುಟುಂಬಗಳ ಮತಾಂತರ ಮಾಡಿದ ಆರೋಪ

ತಾಂಡಾದ ನಾಲ್ಕು ಕುಟುಂಬಗಳನ್ನು ಮತಾಂತರ ಮಾಡಲಾಗಿದೆ. ಇದನ್ನು ಪ್ರಶ್ನಿಸಿದ ತಾಂಡಾದ ಹಿರಿಯರನ್ನು ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಹಾಗೂ ಪತಿ ಅಶೋಕ ಕುಮಾರ ವಿರೋಧಿಸಿದ್ದಾರೆ. ಅವರ ವಿರುದ್ಧವೇ ದೂರು ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿಜಯಪುರ: ಆಶಾ ಕಾರ್ಯಕರ್ತೆ ವಿರುದ್ಧ ನಾಲ್ಕು ಕುಟುಂಬಗಳ ಮತಾಂತರ ಮಾಡಿದ ಆರೋಪ
ವಿಜಯಪುರ: ಆಶಾ ಕಾರ್ಯಕರ್ತೆ ವಿರುದ್ಧ ನಾಲ್ಕು ಕುಟುಂಬಗಳ ಮತಾಂತರ ಮಾಡಿದ ಆರೋಪ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: Ganapathi Sharma

Updated on:Jan 12, 2024 | 1:11 PM

ವಿಜಯಪುರ, ಜನವರಿ 12: ವಿಜಯಪುರ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯಿಂದ (Asha Worker) ಕ್ರೈಸ್ತ ಸಮುದಾಯಕ್ಕೆ ಮತಾಂತರ (Conversion)  ಮಾಡಿರೋ ಆರೋಪ ಕೇಳಿಬಂದಿದೆ. ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಪ್ಪಲದಿನ್ನಿ ಲಂಬಾಣಿ ತಾಂಡಾ 1 ರಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಅಶೋಕಕುಮಾರ ಲಮಾಣಿ ಎಂಬುವರ ವಿರುದ್ಧ ಮತಾಂತರ ಮಾಡಿರುವ ಆರೋಪ ವ್ಯಕ್ತವಾಗಿದೆ.

ತಾಂಡಾದ ನಾಲ್ಕು ಕುಟುಂಬಗಳನ್ನು ಮತಾಂತರ ಮಾಡಲಾಗಿದೆ. ಇದನ್ನು ಪ್ರಶ್ನಿಸಿದ ತಾಂಡಾದ ಹಿರಿಯರನ್ನು ಆಶಾ ಕಾರ್ಯಕರ್ತೆ ವಿಜಯಲಕ್ಷ್ಮಿ ಹಾಗೂ ಪತಿ ಅಶೋಕ ಕುಮಾರ ವಿರೋಧಿಸಿದ್ದಾರೆ. ಅವರ ವಿರುದ್ಧವೇ ದೂರು ನೀಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮತಾಂತರ ವಿಚಾರವಾಗಿ ಪ್ರಶ್ನಿಸಿದ ತಾಂಡಾದ ಹಿರಿಯರ ವಿರುದ್ಧವೇ ವಿಜಯಲಕ್ಷ್ಮಿ ಹಾಗೂ ಅವರ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತಾಂಡಾದ ಹಿರಿಯರು ನಮಗೆ ಕಿರುಕುಳ‌ ನೀಡುತ್ತಿದ್ದಾರೆಂದು ಅವರು ದೂರು ನೀಡಿದ್ದಾರೆ. ತಾಂಡಾದ‌ ಕಾರಭಾರಿ ಧನಸಿಂಗ್ ಲಮಾಣಿ, ತಾಂಡಾದ‌ ನಾಯಕ ರಾಜೂ ನಾಯಕ ಹಾಗೂ ಇತರರ ಮೇಲೆ ಬಸವನಬಾಗೇಬಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಈ ಮಧ್ಯೆ, ತಹಶಿಲ್ದಾರ್ ಯಮನಪ್ಪ, ಸಿಪಿಐ ಶರಣಗೌಡ ನ್ಯಾಮಗೌಡರ ಅವರು ಗುರುವಾರ ತಾಂಡಾಕ್ಕೆ ಆಗಮಿಸಿ ಶಾಂತಿ ಸಭೆ ನಡೆಸಿದ್ದಾರೆ. ಈ ವೇಳೆ ಆಶಾ ಕಾರ್ಯಕರ್ತೆ ಆರೋಪ ನಿರಾಕರಣೆ ಮಾಡಿದ್ದಾರೆ. ತಾಂಡಾದ ಕೆಲವರು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಚಡ್ಡಿ ಗ್ಯಾಂಗ್ ಹಾವಳಿ; ಎಚ್ಚರಿಕೆಯಿಂದಿರಲು ಸಾರ್ವಜನಿಕರಿಗೆ ಪೊಲೀಸರ ಸೂಚನೆ

ಆತ್ಮಹತ್ಯೆ ಬೆದರಿಕೆ

ತಾಂಡಾದ ಕೆಲವರು ನನಗೆ ಕಿರುಕುಳ ನೀಡುತ್ತಿದ್ದಾರೆ. ಅವರ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶಾಂತಿ ಸಭೆಯಲ್ಲಿ ಆಶಾ ಕಾರ್ಯಕರ್ತೆ ಬೆದರಿಕೆ ಹಾಕಿದ್ದಾರೆ. ಈ ಮಧ್ಯೆ, ತಾಂಡಾದಲ್ಲಿ ಪೊಲೀಸ್ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ಸದ್ಯ ತಾಂಡಾದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:03 pm, Fri, 12 January 24