ವಿಜಯಪುರ: ವಿದ್ಯುತ್ ತಂತಿ ಸ್ಪರ್ಶಿಸಿ ಕುರಿಗಾಹಿ ದುರ್ಮರಣವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಬಳಿ ನಡೆದಿದೆ. ಮರದ ಕೊಂಬೆ ಕಡಿಯುವಾಗ ಘಟನೆ ನಡೆದಿದೆ. ಬಾಲೇನಹಳ್ಳಿಯಲ್ಲಿ ಕುರಿಗಾಹಿ ಅರುಣ್ (30) ಸಾವನ್ನಪ್ಪಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹುಲಿದಾಳಿಗೆ ವ್ಯಕ್ತಿ ಸಾವು ಶಂಕೆ
ನಾಗರಹೊಳೆ ಅರಣ್ಯದಲ್ಲಿ ಹುಲಿ ದಾಳಿಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ನಾಗರಹೊಳೆ ಅರಣ್ಯದಲ್ಲಿ ಗಣೇಶ್ ಎಂಬಾತ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಅರಣ್ಯಪ್ರದೇಶದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೆಸಿಬಿ ದುರಂತ: ಇಬ್ಬರ ದುರ್ಮರಣ
ಜೆಸಿಬಿ ದುರಸ್ತಿ ವೇಳೆ ಇಬ್ಬರು ಮೆಕಾನಿಕ್ಗಳ ದುರ್ಮರಣ ಆಗಿರುವ ಘಟನೆ ವಿಜಯಪುರದ ಇಂಡಿ ರಸ್ತೆಯಲ್ಲಿ ಸಂಭವಿಸಿದೆ. ಜೆಸಿಬಿ ಡೋಸರ್ನ ಹೈಡ್ರಾಲಿಕ್ನಲ್ಲಿ ಸಿಲುಕಿ ಇಬ್ಬರು ದುರ್ಮರಣವನ್ನಪ್ಪಿದ್ದಾರೆ. ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣಾ ಘಟಕದಲ್ಲಿ ದುರಂತ ಸಂಭವಿಸಿದೆ. ಮೆಕಾನಿಕ್ಗಳಾದ ರಫೀಕ್ (35), ಅಯೂಬ್ (50) ಎಂಬವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಅಪರಾಧ ಸುದ್ದಿಗಳು: ಬೆಂಗಳೂರಿನಲ್ಲಿ ಹೆಚ್ಚಿದ ಪೆಟ್ರೋಲ್ ಕಳ್ಳರ ಹಾವಳಿ
ಇದನ್ನೂ ಓದಿ: ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಕೊಲೆಗೆ ಸುಪಾರಿ ನೀಡಿದ್ದ ಆರ್ಟಿಐ ರವಿ ಬಂಧನ; ಚಾಮರಾಜನಗರ ಕಾಡಿನಲ್ಲಿ ಅಡಗಿದ್ದ ರವಿ