ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ, ಚುನಾವಣೆ ಘಟ್ಟದಲ್ಲಿ ಏನೋ ಮಾಡಕ್ಕೆ ಹೋಗ್ತಿದಾರೆ! ಏನು ಸುಖ? -ಡಿಕೆ ಶಿವಕುಮಾರ್ ವಾಗ್ದಾಳಿ
ನಾಳೆ ಹೊಸ ವರ್ಷಾಚರಣೆ, 2023ಕ್ಕೆ ಹೊಸ ಬದಲಾವಣೆ ಆಗುತ್ತೆ. 2023ಕ್ಕೆ ಕಾಂಗ್ರೆಸ್ ಪಕ್ಷ ಸ್ವಂತ ಬಲದ ಸರ್ಕಾರ ರಚಿಸುತ್ತೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನರು ಆಶೀರ್ವಾದ ಮಾಡುತ್ತಾರೆ.
ವಿಜಯಪುರ: ಬಿಜೆಪಿ ನಾಯಕರು(BJP Karnataka) ಅಧಿಕಾರ ಇದ್ದಾಗ ಏನು ಮಾಡಲಿಲ್ಲ. ಅಧಿಕಾರ ಹೋಗೋ ಸಮಯದಲ್ಲಿ ಘೋಷಣೆ ಮಾಡಿದ್ರೆ ಏನು ಸುಖ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ವಿಜಯಪುರದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ವಿಚಾರಕ್ಕೆ ಸಂಬಂಧಿಸಿ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರು ಅಧಿಕಾರ ಇದ್ದಾಗ ಏನು ಮಾಡಲಿಲ್ಲ. ಅಧಿಕಾರ ಹೋಗೋ ಸಮಯದಲ್ಲಿ ಘೋಷಣೆ ಮಾಡಿದ್ರೆ ಏನು ಸುಖ? ಅವರ ಅಧಿಕಾರ ಕೇವಲ 100 ದಿನ ಅಷ್ಟೇ ಇದೆ. ಏನಾದರೂ ಘೋಷಣೆ ಮಾಡಿದ್ರೆ ಜಾರಿ ಮಾಡಲು ಆಗುತ್ತಾ? ಚುನಾವಣೆ ಸಮಯದಲ್ಲಿ ಆಶ್ವಾಸನೆ ಕೊಡಲು ಹೋಗುತ್ತಿದ್ದಾರೆ. ಆದರೆ ನಾವು ಮುಂದೆ ಏನು ಮಾಡುತ್ತೇವೆ ಎಂದು ಹೇಳುತ್ತೇವೆ. ಬಿಜೆಪಿಯವರು ಪ್ರಣಾಳಿಕೆಯಲ್ಲಿ 600 ಭರವಸೆಗಳನ್ನು ನೀಡಿದ್ದರು. ಕೇವಲ 50 ಭರವಸೆಗಳನ್ನು ಮಾತ್ರ ಬಿಜೆಪಿಯವರು ಈಡೇರಿಸಿದ್ದಾರೆ. ನಾವು 169 ಭರವಸೆ ನೀಡಿದ್ದೆವು, 165 ಭರವಸೆ ಈಡೇರಿಸಿದ್ದೆವು ಎಂದು ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸುಳ್ಳು ಸುದ್ದಿ ಹರಡಬೇಡಿ; ಕಾಂಗ್ರೆಸ್ಗೆ ಮರು ಸೇರ್ಪಡೆಯಾಗುವ ವದಂತಿ ಬಗ್ಗೆ ಗುಲಾಂ ನಬಿ ಆಜಾದ್ ಅಸಮಾಧಾನ
2023ಕ್ಕೆ ಕಾಂಗ್ರೆಸ್ ಪಕ್ಷ ಸ್ವಂತ ಬಲದ ಸರ್ಕಾರ ರಚಿಸುತ್ತೆ
ಇದೇ ವೇಳೆ ಮಾತು ಮುಂದುವರೆಸಿದ ಡಿಕೆಶಿ, ನಾಳೆ ಹೊಸ ವರ್ಷಾಚರಣೆ, 2023ಕ್ಕೆ ಹೊಸ ಬದಲಾವಣೆ ಆಗುತ್ತೆ. 2023ಕ್ಕೆ ಕಾಂಗ್ರೆಸ್ ಪಕ್ಷ ಸ್ವಂತ ಬಲದ ಸರ್ಕಾರ ರಚಿಸುತ್ತೆ. ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನರು ಆಶೀರ್ವಾದ ಮಾಡುತ್ತಾರೆ. ಜನರ ಧ್ವನಿ ಪ್ರಜಾ ಧ್ವನಿ ಎಂದರು.
ಮೀಸಲಾತಿ ವಿಚಾರದಲ್ಲಿ ಯತ್ನಾಳ ಉಸಿರೇ ಇಲ್ಲಾ
ಎಲ್ಲರಿಗೂ 100 ಪರ್ಸೆಂಟ್ ಮೀಸಲಾತಿ ಕೊಡಲಾಗಲ್ಲಾ ಎಂದು ಸಚಿವ ನಿರಾಣಿ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದ್ದಾರೆ. ಪಂಚಮಸಾಲಿಗಳಿಗೆ ನೀಡುವ ಮೀಸಲಾತಿ ವಿಚಾರದಲ್ಲಿ ಯತ್ನಾಳ್ ಬಾಯಿ ಮುಚ್ಚಿಸಿದ್ದಾರೆ. ಏನಾದ್ರೂ ಬಾಯಿ ತೆಗೆದ್ರೆ ಪಾರ್ಟಿಯಿಂದ ಕಿತ್ತಾಕ್ಬಿಡ್ತಿವಿ ಎಂದು ಯತ್ನಾಳ್ಗೆ ಹೇಳಿದ್ದಾರಂತೆ. ಈ ಕಾರಣ ಮೀಸಲಾತಿ ವಿಚಾರದಲ್ಲಿ ಯತ್ನಾಳ ಉಸಿರೇ ಇಲ್ಲಾ. ಈ ವಿಚಾರದಲ್ಲಿ ಈಗ ಸ್ಟೇಟ್ಮೆಂಟ್ ಕೊಡಲು ಯತ್ನಾಳ್ಗೆ ಕೇಳಿ. ಯತ್ನಾಳ್ ಮೀಸಲಾತಿ ವಿಚಾರದಲ್ಲಿ ಬೆಂಬಲವನ್ನಾದರೂ ನೀಡಬೇಕು ಅಥವಾ ವಿರೋಧವನ್ನಾದರೂ ಕೊಡಬೇಕು. ಯತ್ನಾಳ್ ಯಾಕೆ ಬಾಯಿ ಮುಚ್ಚಿಕೊಂಡು ಕೂತಿದ್ದಾರೆ. ಅಷ್ಟೆಲ್ಲ ಮಾತನಾಡುತ್ತಿದ್ದ ಯತ್ನಾಳ್ ಈಗ ಯಾಕೆ ಮಾತನಾಡುತ್ತಿಲ್ಲ ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ. ಇದೇ ವಿಚಾರದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಯಾಕೆ ಪ್ರೆಸ್ ಮೀಟ್ ಮಾಡಲಿಲ್ಲ. ಈ ಮೀಸಲಾತಿಯನ್ನು ಯಾರು ಒಪ್ಪಲಿಕ್ಕೆ ಸಾಧ್ಯವಿಲ್ಲ. ಇದೆಲ್ಲ ಬರೀ ಮೋಸ. ಟೋಪಿ ಹಾಕಿದ್ದರು ಟೋಪಿ ತೆಗೆದು ಈಚೆ ಇಡಬಹುದಿತ್ತು. ಎಲ್ಲಾ ಸಮಾಜಕ್ಕೂ ಇದು ಬ್ರಹ್ಮಾಂಡ ಮೋಸ ಎಂದು ಡಿಕೆಸಿ ವಾಗ್ದಾಳಿ ನಡೆಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ