ಕೊರೊನಾ ಕಾಲದಲ್ಲೂ ವರದಕ್ಷಿಣೆ ಪಿಡುಗು: ಮಾತ್ರೆ ಹಾಕಿ ಕೊವಿಡ್​ ವಾರಿಯರ್ ಕೊಲೆ?

ವಿಜಯಪುರ: ಆಕೆ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. 8 ತಿಂಗಳ ಮಗವನ್ನು ಮನೆಯಲ್ಲಿ ಬಿಟ್ಟು ಮಹಾಮಾರಿ ಕೊರೊನಾ ಹೊಡೆದೋಡಿಸಲು ನಿತ್ಯ ಕರ್ತವ್ಯಕ್ಕೆ ಅಣಿಯಾಗುತ್ತಿದ್ದರು. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಆರೋಗ್ಯ ಕೇಂದ್ರದಲ್ಲಿ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ದುರಂತವೆಂಬಂತೆ ವರದಕ್ಷಿಣೆ ಮಹಾಮಾರಿಗೆ ಕೊವಿಡ್ ವಾರಿಯರ್ ಬಲಿಯಾಗಿದ್ದಾರು. 2 ವರ್ಷಗಳ ಹಿಂದೆ ವಿವಾಹ: ಮೂಲತಃ ಗದಗ ನಗರದ ನಿವಾಸಿಯಾಗಿದ್ದ ನಿಕಹತ್ ಕೌಸರ್​ಗೆ ಕಳೆದ 2 ವರ್ಷಗಳ ಹಿಂದೆ ವಿಜಯಪುರ ನಗರದ ಗಣೇಶ […]

ಕೊರೊನಾ ಕಾಲದಲ್ಲೂ ವರದಕ್ಷಿಣೆ ಪಿಡುಗು: ಮಾತ್ರೆ ಹಾಕಿ ಕೊವಿಡ್​ ವಾರಿಯರ್ ಕೊಲೆ?
Follow us
ಸಾಧು ಶ್ರೀನಾಥ್​
|

Updated on:May 23, 2020 | 2:00 PM

ವಿಜಯಪುರ: ಆಕೆ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. 8 ತಿಂಗಳ ಮಗವನ್ನು ಮನೆಯಲ್ಲಿ ಬಿಟ್ಟು ಮಹಾಮಾರಿ ಕೊರೊನಾ ಹೊಡೆದೋಡಿಸಲು ನಿತ್ಯ ಕರ್ತವ್ಯಕ್ಕೆ ಅಣಿಯಾಗುತ್ತಿದ್ದರು. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದಲ್ಲಿನ ಸರ್ಕಾರಿ ಕಿರಿಯ ಆರೋಗ್ಯ ಕೇಂದ್ರದಲ್ಲಿ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ದುರಂತವೆಂಬಂತೆ ವರದಕ್ಷಿಣೆ ಮಹಾಮಾರಿಗೆ ಕೊವಿಡ್ ವಾರಿಯರ್ ಬಲಿಯಾಗಿದ್ದಾರು.

2 ವರ್ಷಗಳ ಹಿಂದೆ ವಿವಾಹ: ಮೂಲತಃ ಗದಗ ನಗರದ ನಿವಾಸಿಯಾಗಿದ್ದ ನಿಕಹತ್ ಕೌಸರ್​ಗೆ ಕಳೆದ 2 ವರ್ಷಗಳ ಹಿಂದೆ ವಿಜಯಪುರ ನಗರದ ಗಣೇಶ ನಗರದ ರಿಯಾಜ್ ಅಹ್ಮದ್ ಚಪ್ಪರಬಂದ್ ಜೊತೆ ವಿವಾಹವಾಗಿತ್ತು. ಕೊರೊನಾ ವಿರುದ್ಧ ಜನ ಜಾಗೃತಿ ಮೂಡಿಸಿ ಜನರ ಆರೋಗ್ಯದ ಬಗ್ಗೆ ಸಲಹೆ ಸೂಚನೆ ನೀಡುತ್ತಿದ್ದರು.

ಆರಂಭದಲ್ಲಿ ನಿಕಹತ್ ಕೌಸರ್ ಹಾಗೂ ಪತಿ ರಿಯಾಜ್ ಅಹ್ಮದ್ ಅನ್ಯೋನ್ಯವಾಗಿದ್ದರಂತೆ. ಇವರ ದಾಂಪತ್ಕಕೆ ಒಂದು ಗಂಡು ಮಗು ಕೂಡಾ ಆಗಿದೆ. ಇತ್ತೀಚಿನ ಕೆಲ ತಿಂಗಳಿನಿಂದ ಪತಿ, ಅತ್ತೆ ಮಾವ ಹಾಗೂ ಇತರರು ನಿಕಹತ್ ಕೌಸರ್​ಗೆ ಹಣ ತರುವಂತೆ ಪೀಡಿಸುತ್ತಿದ್ದರಂತೆ. ನಿಮ್ಮ ತಂದೆಯ ಮನೆಯಿಂದ 5 ಲಕ್ಷ ರೂಪಾಯಿ ತರುವಂತೆ ಒತ್ತಾಯ ಮಾಡುತ್ತಿದ್ದರಂತೆ.

ಹಣ ತರುವಂತೆ ಒತ್ತಾಯ: ಇವೆಲ್ಲವುಗಳನ್ನು ಸಹಿಸಿಕೊಂಡಿದ್ದ ನಿಕಹತ್ ಕೌಸರ್ ಇಲ್ಲಿರುವುದೇ ಬೇಡವೆಂದು ತೀರ್ಮಾನ ಮಾಡಿದ್ದರಂತೆ. ತಾನು ಕೆಲಸ ಮಾಡುವ ಶೇಗುಣಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹದಲ್ಲಿರಲು ಸಿದ್ಧತೆ ನಡೆಸಿದ್ದರಂತೆ. ನಾನು ಇಲ್ಲಿರಲ್ಲಾ, ಶೆಗುಣಸಿ ಗ್ರಾಮದಲ್ಲಿ ಮಗುವಿನೊಂದಿಗೆ ಇರುತ್ತೇನೆ. ನನಗೆ ತಂದೆಯ ಮನೆಯಿಂದ ಹಣ ತರಲು ಆಗಲ್ಲಾ ಎಂದು ಪತಿ ರಿಯಾಜ್ ಅಹ್ಮದ್​ಗೆ ಹೇಳಿದ್ದರಂತೆ. ನೀನೂ ಅಲ್ಲಿಗೇ ಬಾ ಎಂದೂ ಪತಿಗೆ ಒತ್ತಾಯಿಸಿದ್ದರಂತೆ. ಈ ದಿಸೆಯಲ್ಲಿ ಶೇಗುಣಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹದಲ್ಲಿ ಕೆಲ ಗೃಹಪಯೋಗಿ ವಸ್ತುಗಳನ್ನು ತಂದು ಇಟ್ಟಿದ್ದರಂತೆ ನಿಕಹತ್ ಕೌಸರ್.

ಇಷ್ಟರ ನಡುವೆ ಕಳೆದ ಮೇ 14ರಂದು ನಿಹಕತ್ ಕೌಸರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ವಿಜಯಪುರ ಗಣೇಶ ನಗರದ ಪತಿಯ ಮನೆಯಲ್ಲಿ ಬಿದ್ದಿದ್ದರಂತೆ. ಕೂಡಲೇ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗೇ ನಿಹಕತ್ ಕೌಸರ್ ಮೃತಪಟ್ಟಿದ್ದರು. ಯಾವುದೋ ಮಾತ್ರೆಗಳನ್ನು ನುಂಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರು.

ಮಾತ್ರೆಗಳನ್ನ ಹಾಕಿ ಕೊಲೆ ಮಾಡಿದ್ರಾ? ಸುದ್ದಿ ತಿಳಿದ ನಿಹಕತ್ ಕೌಸರ್ ಪೋಷಕರು ಆಗಮಿಸಿ ಪತಿ ಮನೆಯವರೇ ನಮ್ಮ ಮಗಳ ಸಾವಿಗೆ ಕಾರಣವೆಂದು ಆರೋಪಿಸಿದ್ದಾರೆ. ಸದಾ ಕಾಲ ತವರಿನಿಂದ ಹಣ ತರುವಂತೆ ನಮ್ಮ ಮಗಳಿಗೆ ಪೀಡಿಸುತ್ತಿದ್ದರು. ಪತಿ ಮನೆಯವರ ಕಿರಿಕಿರಿಯಿಂದ, ಇವರನ್ನು ಬಿಟ್ಟು ಆಕೆ ತಾನು ಸೇವೆ ಸಲ್ಲಿಸುತ್ತಿರುವ ಜಾಗದಲ್ಲೇ ಇರಲು ಬಯಸಿದ್ದಳು. ಅದೇ ಸಿಟ್ಟಿನಿಂದ ಪತಿ ಹಾಗೂ ಮನೆಯವರು ನಮ್ಮ ಮಗಳಿಗೆ ಬಲವಂತವಾಗಿ ಮಾತ್ರೆಗಳನ್ನು ಹಾಕಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಮೃತಪಟ್ಟ ನಿಹಕತ್ ಕೌಸರ್ ತಂದೆ-ತಾಯಿ, ಆಕೆಯ ಪತಿ ಹಾಗೂ ಮನೆಯವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯ ಮಾಡಿದ್ದಾರೆ. ಕೌಸರ್ ತಂದೆ ರಾಜೇಸಾಬ್ ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತಳ ಅತ್ತೆ ಬಾನೂಬೀ ಚಪ್ಪರಬಂದ್, ಪತಿ ರಿಯಾಜ್ ಅಹ್ಮದ್, ಮೈದುನ ನಿಸಾರ್ ಅಹ್ಮದ್, ನಾದಿನಿ ನಾಹೇದಾ, ಮಾವ ಅಲ್ಲಾಭಕ್ಷ, ಪತಿಯ ಸೋದರ ಮಾವಂದಿರಾದ ಮೌಲಾಲಿ ಹಾಗೂ ಮೆಹಬೂಬ ಸಾಬ್ ವಿರುದ್ಧ ದೂರು ದಾಖಲು ಮಾಡಿದ್ದಾರೆ.

Published On - 1:24 pm, Sat, 23 May 20

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್