ವಿಜಯಪುರ: ಒಂದೇ ದಿನ ಸಾವಿನಲ್ಲಿ ಒಂದಾದ ಶತಾಯುಷಿ ಪತಿ-ಪತ್ನಿ, ಗದಗದಲ್ಲೂ ಮತ್ತೊಂದು ಘಟನೆ

| Updated By: ಸಾಧು ಶ್ರೀನಾಥ್​

Updated on: Sep 03, 2022 | 4:58 PM

vijayapura: ಇಬ್ಬರೂ ಹಿರಿಯನ್ನು ಕಳೆದುಕೊಂಡ ಕುಟುಂಬದಲ್ಲಿ ಇದೀಗ ದುಃಖ ಮನೆ ಮಾಡಿದೆ. ಒಂದೇ ದಿನ ಗಂಡ ಹೆಂಡತಿ ಮೃತಪಟ್ಟಿದ್ದಕ್ಕೆ ಗ್ರಾಮಸ್ಥರಿಂದಲೂ ಸಂತಾಪ ವ್ತಯಕ್ತವಾಗುತ್ತಿದೆ.

ವಿಜಯಪುರ: ಒಂದೇ ದಿನ ಸಾವಿನಲ್ಲಿ ಒಂದಾದ ಶತಾಯುಷಿ ಪತಿ-ಪತ್ನಿ, ಗದಗದಲ್ಲೂ ಮತ್ತೊಂದು ಘಟನೆ
ಒಂದೇ ದಿನ ಸಾವಿನಲ್ಲೂ ಒಂದಾದ ಶತಾಯುಷಿ ಪತಿ ಮತ್ತು ಪತ್ನಿ
Follow us on

ವಿಜಯಪುರ: ತಿಕೋಟಾ ತಾಲೂಕಿನ (tikota taluk in vijayapura) ಮಲಕನದೇವರಹಟ್ಟಿ ಗ್ರಾಮದ ವೃದ್ಧ ದಂಪತಿ (elder couple) ಸಾವಿನಲ್ಲೂ ಒಂದಾಗಿ, ತಮ್ಮ ಅನ್ಯೋನ್ಯತೆಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಇಂದು ಬೆಳಗ್ಗೆ ವಯೋಸಹಜವಾಗಿ ದೇವೇಂದ್ರ ಶ್ಯಾಮರಾಯ ವಳಸಂಗ್ (105) ಸಾವನ್ನಪ್ಪಿದ್ದಾರೆ. ಪತಿಯ ಸಾವಿನಿಂದ ಆಘಾತಕ್ಕೆ ಒಳಗಾಗಿ ದೇವೇಂದ್ರ ಅವರ ಪತ್ನಿ ದುಂಡವ್ವ (87) ಅವರೂ ಸಹ ಕೊನೆಯುಸಿರೆಳೆದಿದ್ದಾರೆ (death).

ಇಬ್ಬರೂ ಹಿರಿಯನ್ನು ಕಳೆದುಕೊಂಡ ಕುಟುಂಬದಲ್ಲಿ ಇದೀಗ ದುಃಖ ಮನೆ ಮಾಡಿದೆ. ಒಂದೇ ದಿನ ಗಂಡ ಹೆಂಡತಿ ಮೃತಪಟ್ಟಿದ್ದಕ್ಕೆ ಗ್ರಾಮಸ್ಥರಿಂದಲೂ ಸಂತಾಪ ವ್ತಯಕ್ತವಾಗುತ್ತಿದೆ. ಇಂದು ಮಲಕನದೇವರಹಟ್ಟಿ ಗ್ರಾಮದಲ್ಲಿ ದಂಪತಿ ಅಂತ್ಯಕ್ರಿಯೆ ನಡೆಯಲಿದೆ.

ಪತ್ನಿ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಪತಿಯೂ ಸಾವು

ಗದಗದಲ್ಲೂ ವೃದ್ಧ ಪತ್ನಿಯ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಪತಿಯೂ ಸಾವು

ಗದಗ ತಾಲೂಕಿನ ಕಣಗಿನಾಳದಲ್ಲಿಯೂ ದಂಪತಿ ಇಂದು ಸಾವಿನಲ್ಲೂ ಒಂದಾಗಿರುವ ಅಪರೀಪದ ಪ್ರಕರಣ ನಡೆದಿದೆ. ಅನಾರೋಗ್ಯದಿಂದಾಗಿ ಪತ್ನಿ ಈರವ್ವ ರಾಮಶೆಟ್ರ (65) ಮೃತಪಟ್ಟಿದ್ದರು. ಪತ್ನಿಯ ಸಾವಿನ ಸುದ್ದಿ ಕೇಳಿ ಪತಿ ಸಿದ್ದರಾಮ ರಾಮಶೆಟ್ರ ಸಹ ಅಸುನೀಗಿದ್ದಾರೆ. ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ.

Published On - 3:39 pm, Sat, 3 September 22