ಕರ್ನಾಟಕದ ಹಲವೆಡೆ ಗಾಳಿ ಸಹಿತ ಭಾರಿ ಮಳೆ! ವಿಜಯಪುರದಲ್ಲಿ ಮನೆ ಮೇಲ್ಚಾವಣಿ ಶೀಟ್ ಮೇಲಿಟ್ಟಿದ್ದ ಕಲ್ಲು ಬಿದ್ದು ಬಾಲಕ ಸಾವು

| Updated By: sandhya thejappa

Updated on: Apr 26, 2022 | 10:36 AM

ತೋಟದ ಮನೆಯಲ್ಲಿ 14 ವರ್ಷದ ಸಚಿನ್ ಮಹಾಂತೇಶ್ ಸೊನ್ನದ ಮೃತಪಟ್ಟಿದ್ದಾನೆ. ಜೋರಾಗಿ ಬೀಸಿದ ಗಾಳಿ ಹಾಗೂ ಮಳೆಗೆ ಮನೆಯ ಮೇಲ್ಚಾವಣಿಯ ತಗಡುಗಳು ಹಾರಿ ಹೋಗಿವೆ.

ಕರ್ನಾಟಕದ ಹಲವೆಡೆ ಗಾಳಿ ಸಹಿತ ಭಾರಿ ಮಳೆ! ವಿಜಯಪುರದಲ್ಲಿ ಮನೆ ಮೇಲ್ಚಾವಣಿ ಶೀಟ್ ಮೇಲಿಟ್ಟಿದ್ದ ಕಲ್ಲು ಬಿದ್ದು ಬಾಲಕ ಸಾವು
ಮಳೆಗೆ ಮನೆಯ ಮೇಲ್ಚಾವಣಿಯ ತಗಡುಗಳು ಹಾರಿ ಹೋಗಿವೆ
Follow us on

ವಿಜಯಪುರ: ರಾಜ್ಯದ ಹಲವೆಡೆ ಗಾಳಿ ಸಹಿತ ಬಾರಿ ಮಳೆಯಾಗುತ್ತಿದೆ. ಮಳೆ (Rain) ಪರಿಣಾಮ ಅಲ್ಲಲ್ಲಿ ಅನಾಹುತಗಳು ಸಂಭವಿಸಿವೆ. ಇನ್ನು ವಿಜಯಪುರ ಹೊರವಲಯದ ಹೌಸಿಂಗ್​ಬೋರ್ಡ್​ ಬಳಿ ಮನೆ ಮೇಲ್ಚಾವಣಿ ಶೀಟ್ ಮೇಲಿಟ್ಟಿದ್ದ ಕಲ್ಲು ಬಿದ್ದು ಬಾಲಕ (Boy) ಸಾವನ್ನಪ್ಪಿದ್ದಾನೆ. ತೋಟದ ಮನೆಯಲ್ಲಿ 14 ವರ್ಷದ ಸಚಿನ್ ಮಹಾಂತೇಶ್ ಸೊನ್ನದ ಮೃತಪಟ್ಟಿದ್ದಾನೆ. ಜೋರಾಗಿ ಬೀಸಿದ ಗಾಳಿ ಹಾಗೂ ಮಳೆಗೆ ಮನೆಯ ಮೇಲ್ಚಾವಣಿಯ ತಗಡುಗಳು ಹಾರಿ ಹೋಗಿವೆ. ಈ ವೇಳೆ ತಗಡುಗಳ ಮೇಲಿಟ್ಟಿದ್ದ ಕಲ್ಲು ಬಾಲಕನ ಮೇಲೆ ಬಿದ್ದಿದೆ.

ಸಿಡಿಲು ಬಡಿದು ಡಿಪ್ಲೊಮಾ ವಿದ್ಯಾರ್ಥಿ ಸಾವು:
ಬಳ್ಳಾರಿ: ಜಿಲ್ಲೆಯ ಸಂಡೂರು ಪುರಸಭೆ ವ್ಯಾಪ್ತಿಯ ನಂದಿಹಳ್ಳಿಯಲ್ಲಿ ಸಿಡಿಲು ಬಡಿದು ಡಿಪ್ಲೊಮಾ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಮಂಜುನಾಥ(21) ಮೃತ ವಿದ್ಯಾರ್ಥಿ. ನಿನ್ನೆ ಸಂಜೆ ಭಾರಿ ಗಾಳಿ ಮಳೆ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮೈಗೂರು ಗ್ರಾಮದಲ್ಲಿ ಸಿಡಿಲಿನ ಸದ್ದಿಗೆ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಬಾಳು ಸಬಕಾಳೆ ಎಂಬುವವರ ಕೋಳಿಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇನ್ನು ಹುಬ್ಬಳ್ಳಿ ತಾಲೂಕಿನ ಮಂಟೂರು ಗ್ರಾಮದಲ್ಲಿ ಕಲ್ಲಪ್ಪ ಹೊನ್ನಾಯ್ಕರ್ ಎನ್ನುವ ರೈತನ ಮನೆ ಕುಸಿದು ಎತ್ತು ಸಾವನ್ನಪ್ಪಿದೆ. ಜೋರಾಗಿ ಮಳೆ ಬಂದ ಹಿನ್ನೆಲೆ ಎತ್ತನ್ನು ರೈತ ಒಳಗೆ ಕಟ್ಟಿದ್ದರು. ಧಿಡೀರ್ ಮನೆ ಕುಸಿತದಿಂದ ಮಣ್ಣಿನ ಅಡಿಯಲ್ಲಿ ಸಿಕ್ಕು ಎತ್ತು ಮೃತಪಟ್ಟಿದೆ.

ದೇಶದಲ್ಲಿ ಭಾರಿ ಮಳೆ ಸಾಧ್ಯತೆ:
ಇನ್ನು ಮುಂದಿನ 2 ದಿನಗಳಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್-ಮಣಿಪುರ-ಮಿಜೋರಾಂ-ತ್ರಿಪುರಾದಲ್ಲಿ ಲಘು ಮಳೆಯಾಗಲಿದೆ. ಮುಂದಿನ 3 ದಿನಗಳಲ್ಲಿ ಉಪ-ಹಿಮಾಲಯದ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಚದುರಿದ ಮಳೆಯಾಗುವ ಸಾಧ್ಯತೆಯಿದೆ.

ಮುಂದಿನ 3 ದಿನಗಳಲ್ಲಿ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಸಾಕಷ್ಟು ವ್ಯಾಪಕ ಮಳೆಯಾಗಲಿದೆ. ಏಪ್ರಿಲ್ 27-29ರವರೆಗೆ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ ಮಳೆಯಾಗಲಿದೆ. ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದಲ್ಲಿ ಮಿಂಚು ಮತ್ತು ಬಿರುಗಾಳಿ, ಗುಡುಗು ಸಹಿತ ಮಳೆಯಾಗುತ್ತದೆ.

ಇದನ್ನೂ ಓದಿ

ರಂಜಾನ್ ಹಬ್ಬಕ್ಕೆ ಮತ್ತೆ ಕೊರೊನಾ 4ನೇ ಅಲೆಯ ಕರಿನೆರಳು! ಸರ್ಕಾರದಿಂದ ಟಫ್ ರೂಲ್ಸ್ ಜಾರಿ ಸಾಧ್ಯತೆ

545 ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ; ಗ್ರಾ.ಪಂ ಸದಸ್ಯ, ಬ್ರೋಕರ್ ಕೆಲಸ ಮಾಡಿದ್ದ ಕಿಂಗ್​ಪಿನ್ ರುದ್ರಗೌಡ ಪಾಟೀಲ್ಗೆ ಇತ್ತು ಅನೇಕರ ಲಿಂಕ್

Published On - 10:17 am, Tue, 26 April 22