ರಂಜಾನ್ ಹಬ್ಬಕ್ಕೆ ಮತ್ತೆ ಕೊರೊನಾ 4ನೇ ಅಲೆಯ ಕರಿನೆರಳು! ಸರ್ಕಾರದಿಂದ ಟಫ್ ರೂಲ್ಸ್ ಜಾರಿ ಸಾಧ್ಯತೆ

ರಂಜಾನ್ ವೇಳೆ ಮಸೀದಿಯಲ್ಲಿ ಗುಂಪು ಗುಂಪಾಗಿ ಸಾಕಷ್ಟು ಜನ ಸೇರುವ ಹಿನ್ನೆಲೆ ಕೊರೊನಾ ಸೋಂಕು ಹರಡುವಿಕೆ ಬಗ್ಗೆ ಸರ್ಕಾರಕ್ಕೆ ಆತಂಕ ಮೂಡಿದೆ. ಧಾರ್ಮಿಕ ಕೇಂದ್ರಗಳಿಗೆ ಅನ್ವಯ ಆಗುವಂತೆ ಸರ್ಕಾರ ರೂಲ್ಸ್ ಜಾರಿಗೊಳಿಸಿದರೆ ಮುಸ್ಲಿಂ ಬಾಂಧವರಿಗೆ ಭಾರೀ ನಿರಾಸೆ ಆಗುತ್ತದೆ.

ರಂಜಾನ್ ಹಬ್ಬಕ್ಕೆ ಮತ್ತೆ ಕೊರೊನಾ 4ನೇ ಅಲೆಯ ಕರಿನೆರಳು! ಸರ್ಕಾರದಿಂದ ಟಫ್ ರೂಲ್ಸ್ ಜಾರಿ ಸಾಧ್ಯತೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: sandhya thejappa

Updated on:Apr 26, 2022 | 9:20 AM

ಬೆಂಗಳೂರು: ಕೊರೊನಾ (Coronavirus) ಕಾರಣದಿಂದ ಸರ್ಕಾರ (Government) ಎರಡು ವರ್ಷ ರಂಜಾನ್ ಹಬ್ಬಕ್ಕೆ ಕಠಿಣ ನಿಯಮಗಳನ್ನ ಜಾರಿಗೊಳಿಸಿತ್ತು. ಮಸೀದಿಯಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸಿ ಟಫ್ ರೂಲ್ಸ್ ಜಾರಿಗೊಳಿಸಿತ್ತು. ಈ ಬಾರಿಯಾದರೂ ಯಾವುದೇ ಅಡಚಣೆಯಿಲ್ಲದೆ ಹಬ್ಬವನ್ನು ಆಚರಿಸಬಹುದು ಅಂತ ಯೋಚಿಸುತ್ತಿರುವಾಗ ಮತ್ತೆ ಕೊರೊನಾ ನಾಲ್ಕನೇ ಅಲೆ ಆತಂಕ ಶುರುವಾಗಿದೆ. ರಾಜ್ಯದಲ್ಲಿ ನಿಯಂತ್ರಣಲ್ಲಿದ್ದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಈ ವರ್ಷವೂ ರಂಜಾನ್ ಹಬ್ಬಕ್ಕೆ ಟಫ್ ರೂಲ್ಸ್ ಜಾರಿಯಾಗುವ ಸಾಧ್ಯತೆಯಿದೆ.

ರಂಜಾನ್ ವೇಳೆ ಮಸೀದಿಯಲ್ಲಿ ಗುಂಪು ಗುಂಪಾಗಿ ಸಾಕಷ್ಟು ಜನ ಸೇರುವ ಹಿನ್ನೆಲೆ ಕೊರೊನಾ ಸೋಂಕು ಹರಡುವಿಕೆ ಬಗ್ಗೆ ಸರ್ಕಾರಕ್ಕೆ ಆತಂಕ ಮೂಡಿದೆ. ಧಾರ್ಮಿಕ ಕೇಂದ್ರಗಳಿಗೆ ಅನ್ವಯ ಆಗುವಂತೆ ಸರ್ಕಾರ ರೂಲ್ಸ್ ಜಾರಿಗೊಳಿಸಿದರೆ ಮುಸ್ಲಿಂ ಬಾಂಧವರಿಗೆ ಭಾರೀ ನಿರಾಸೆ ಆಗುತ್ತದೆ. ಮೇ 3ರಂದು ನಡೆಯುವ ರಂಜಾನ್ ಹಬ್ಬ ಆಚರಣೆಗೆ ಸಿದ್ಧತೆ ನಡೆಯುತ್ತಿದೆ. ಸೋಂಕು ಉಲ್ಬಣಗೊಂಡರೆ ಸರಳವಾಗಿ ಹಬ್ಬ ಆಚರಿಸಲು ಸರ್ಕಾರ ಸೂಚನೆ ನೀಡುವ ಸಾಧ್ಯತೆಯಿದೆ.

ಭಾರತದಲ್ಲಿ 2541 ಮಂದಿಗೆ ಕೊರೊನಾ ಸೋಂಕು: ನಿನ್ನೆ (ಏಪ್ರಿಲ್ 25) ದೇಶದ ವಿವಿಧೆಡೆ ಒಟ್ಟು 2,541 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 30 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟು 43,06,008 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಪ್ರಸ್ತುತ 16,522 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,22,223ಕ್ಕೆ ಮುಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳು ಶೇ 0.04 ಆಗುತ್ತದೆ. ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಪ್ರಮಾಣವು ಶೇ 98.75 ಇದೆ.

ಇನ್ನು ಕರ್ನಾಟಕದಲ್ಲಿ ನಿನ್ನೆ(ಏಪ್ರಿಲ್ 25) 64 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಪ್ರಸ್ತುತ 1671 ಸಕ್ರಿಯ ಪ್ರಕರಣಗಳಿದ್ದು, 4637 ಮಾದರಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಸೋಂಕಿನಿಂದ 69 ಮಂದಿ ಚೇತರಿಸಿಕೊಂಡು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಪಾಸಿಟಿವಿಟಿ ಪ್ರಮಾಣ ಶೇ 1.38 ಇದೆ. ಇದು ವಾರದ ಸರಾಸರಿಗಿಂತಲೂ ಹೆಚ್ಚು ಎನ್ನುವುದು ಗಮನಾರ್ಹ ಸಂಗತಿ. ವಾರದ ಸರಾಸರಿ ಪಾಸಿಟಿವಿಟಿ ಪ್ರಮಾಣವು ಶೇ 0.96 ಇದೆ.

ಮಾಸ್ಕ್ ಹಾಕದ ಜನರು: ಕೊರೊನಾ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿದೆ. ಇಂದಿನಿಂದ ಈ ರೂಲ್ಸ್ ಜಾರಿಯಾಗಿದೆ. ಆದರೆ ದಂಡ ವಿಧಿಸಲ್ಲ ಅಂತ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ. ಕೊರೊನಾ ಹೆಚ್ಚಾದರೆ ಮಾತ್ರ ದಂಡ ಹಾಕುತ್ತೇವೆ ಎಂದಿದ್ದಾರೆ. ಇಂದಿನಿಂದ ಮಾಸ್ಕ್ ಕಡ್ಡಾಯವಾಗಿದ್ದರೂ, ಜನ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಬೆಂಗಳೂರಿನಲ್ಲಿ ಪೊಲೀಸರು, ಮಾರ್ಷಲ್ಸ್​ ಮಾಸ್ಕ್​ ಬಗ್ಗೆ ಅರಿವು ಮೂಡಿಸುತ್ತಾರೆ. ಮಾಸ್ಕ್ ಇಲ್ಲದೆ ರಾಜ್ಯದಲ್ಲಿ ಜನರು ಓಡಾಡುತ್ತಿದ್ದಾರೆ.

ಇದನ್ನೂ ಓದಿ

Sara Tendulkar: ಶೀಘ್ರದಲ್ಲೇ ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರಾ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್?

Ravindra Jadeja: ಪಂದ್ಯ ಮುಗಿದ ಬಳಿಕ ಈ ಬಾರಿ ರವೀಂದ್ರ ಜಡೇಜಾ ಸೋಲಿಗೆ ನೀಡಿದ ಕಾರಣವೇನು ಗೊತ್ತೇ?

Published On - 9:04 am, Tue, 26 April 22

ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್