ವಿಜಯಪುರ: ರಾಜಸ್ಥಾನದ ಉದಯಪುರದಲ್ಲಿ (Udaipur) ನಡೆದ ಕನ್ಹಯ್ಯಾ ಲಾಲ್ ಕೊಲೆ ಖಂಡಿಸಿ ಇಂದು (ಜುಲೈ 2) ಹೊಸಪೇಟೆಯಲ್ಲಿ ಬಂದ್ ಆಚರಣೆ ಮಾಡಿದ್ದಾರೆ. ಹೊಸಪೇಟೆಯ ಪಾದಗಟ್ಟಿ ಆಂಜನೇಯ ದೇವಸ್ಥಾನ ಮುಂದೆ ಪ್ರತಿಭಟನೆಗೆ (Protest) ಆಯೋಜನೆಗೊಂಡಿತ್ತು. ಆದರೆ ಪ್ರತಿಭಟನೆಗಾಗಿ ಸಿದ್ಧಪಡಿಸಿದ್ದ ವೇದಿಕೆ ಮುಂಭಾಗದ ಚೇರಗಳನ್ನ ಪೊಲೀಸರು ತೆರವುಗೊಳಿಸಿ ಪ್ರತಿಭಟನಾನಿರತ ಹಿಂದೂ ಸಂಘಟನೆಗಳ ಮುಖಂಡರು, ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ. ಧರಣಿ ಮಾಡದಂತೆ ಪೊಲೀಸರ ಜೊತೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ಹೀಗಾಗಿ ಲಾಠಿ ಪ್ರಹಾರ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಅನುಮತಿ ಪಡೆಯದೇ ಹಿಂದು ಸಂಘಟನೆ ಪ್ರತಿಭಟನೆಗೆ ಮುಂದಾಗಿತ್ತು. ಹೀಗಾಗಿ ಪ್ರತಿಭಟನೆ ತಡೆದ ಪೊಲೀಸರ ವರ್ತನೆ ವಿರುದ್ಧ ಶ್ರೀರಾಮ ಸೇನೆ ಮುಖಂಡರು ಆಕ್ರೋಶಗೊಂಡಿದ್ದಾರೆ. ಹಿಂದೂ ಹತ್ಯೆಯಾದರೂ, ರಾಜ್ಯ ಸರ್ಕಾರ ಪ್ರತಿಭಟನೆ ಮಾಡಲು ಅವಕಾಶ ನೀಡುತ್ತಿಲ್ಲ. ಪ್ರತಿಭಟನೆಯನ್ನ ಹತ್ತಿಕ್ಕಿ, ಹೋರಾಟ ದಮನ ಮಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರನ್ನ ಬಂಧನ ಮಾಡುತ್ತಿದ್ದಾರೆ ಅಂದರೆ ಹಿಂದೂಗಳ ಸ್ಥಿತಿ ಎಲ್ಲಿಗೆ ಬಂದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶ್ರೀರಾಮು ಸೇನೆ ಮುಖಂಡ ಗಂಗಾಧರ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೈದರಾಬಾದ್ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ವಿರೋಧಿಸಿ ಟಿಆರ್ಎಸ್ ಬೆಂಬಲಿಗರಿಂದ ವಿನೂತನ ಪ್ರತಿಭಟನೆ
ಎಸ್ಪಿ ಡಾ ಕೆ ಅರುಣ್ ಮಾತನಾಡಿ, ಹಿಂದೂ ಸಂಘಟನೆಯ ಕಾರ್ಯಕರ್ತರು ತಹಶೀಲ್ದಾರರಿಗೆ ಮನವಿ ಕೊಡಲು ಅನುಮತಿ ನೀಡಿದ್ದೆವು. ಆದರೆ ಹಿಂದೂ ಸಂಘಟನೆಯ ಕಾರ್ಯಾಕರ್ತರು ಅನುಮತಿ ವೇದಿಕೆ ಸಿದ್ಧಪಡಿಸಿದ್ದರು. ವೇದಿಕೆ ನಿರ್ಮಾಣ ಪರಿಣಾಮ ಟ್ರಾಫಿಕ್ ಜಾಮ್ ಉಂಟಾಗಿತ್ತು.ಪ್ರತಿಭಟನಾಕಾರರು ಅನುಮತಿ ಪಡೆಯದೇ ವೇದಿಕೆ ಹಾಕಿದ್ದರು. ಹೀಗಾಗಿ ಪ್ರತಿಭಟನೆ ತೆರವುಗೊಳಿಸಿದ್ದೇವೆ. ಹಲವರನ್ನ ವಶಕ್ಕೆ ಪಡೆದಿದ್ದೇವೆ. ಪ್ರತಿಭಟನೆಯಲ್ಲಿ ಭಾಗಿಯಾದವರ ದೃಶ್ಯಾವಳಿಗಳನ್ನ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ವ್ಯಾಪಾರಸ್ಥರು ಭಯಬೀಳದೇ ಅಂಗಡಿ ಮುಗ್ಗಟ್ಟುಗಳನ್ನ ತೆರಯಬಹುದು. ವ್ಯಾಪಾರಸ್ಥರಿಗೆ ಪೊಲೀಸರ ರಕ್ಷಣೆ ನೀಡಲಿದ್ದಾರೆ. ನಾನು ಸ್ಥಳದಲ್ಲೆ ಇದ್ದು ಪರಿಸ್ಥಿತಿ ಅವಲೋಕಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಕೋಮುಗಲಭೆ ಸೃಷ್ಠಿಸಲು ಯತ್ನಿಸಿದ ಹದಿಮೂರರ ಬಾಲಕ? ಪೊಲೀಸ್ ತನಿಖೆಯಿಂದ ಬಯಲಾಯಿತು ಬಾಲಕನ ಅಸಲಿಯತ್ತು
ನೂಪುರ್ ಹೇಳಿಕೆ ಬೆಂಬಲಿಸಿ ರ್ಯಾಲಿ:
ಪ್ರವಾದಿ ಬಗ್ಗೆ ಬಿಜೆಪಿ ನಾಯಕಿ ನೂಪುರ್ ಹೇಳಿಕೆ ಬೆಂಬಲಿಸಿ ಹಿಂದೂ ಪರ ಸಂಘಟನೆಗಳು ಮೈಸೂರಿನಲ್ಲಿ ರ್ಯಾಲಿ ನಡೆಸಿವೆ. ಗಾಂಧಿ ವೃತ್ತದಿಂದ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ಮಾಡಿವೆ. ಈ ವೇಳೆ ಕಾರ್ಯಕರ್ತರು ‘ತುಮ್ ಆಗೇ ಬಡೋ ಹಮ್ ತುಮಾರೇ ಸಾಥ್ ಹೇ’ ಎಂದು ಘೋಷಣೆ ಕೂಗಿದ್ದಾರೆ.
Published On - 11:37 am, Sat, 2 July 22