Karnataka-Maharashtra Border dispute: ಗಡಿ ವಿವಾದದ ಮಧ್ಯೆಯೂ ಮಹಾರಾಷ್ಟ್ರಕ್ಕೆ ಹರಿದ ಕರ್ನಾಟಕದ ನೀರು: ಜನ ಫುಲ್ ಖುಷ್
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ನಡುವೆಯೇ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ 28 ಹಳ್ಳಿಗಳಿಗೆ ಕೃಷ್ಣಾ ನದಿಯ ನೀರು ಹರಿಸಲಾಗಿದೆ.
ವಿಜಯಪುರ: ಕಳೆದ ಕೆಲವು ದಿನಗಳಿಂದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Karnataka-Maharashtra Border dispute) ನಡೆಯುತ್ತಿದೆ. ಈ ನಡುವೆಯೇ ಕರ್ನಾಟಕದಿಂದ, ಮಹಾರಾಷ್ಟ್ರಕ್ಕೆ ನೀರು ಹರಿಸಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ (Jatha) ತಾಲೂಕಿನ 28 ಹಳ್ಳಿಗಳಿಗೆ ಕೃಷ್ಣಾ ನದಿಯ (Krishna River) ನೀರು ಹರಿಸಲಾಗಿದೆ. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಮೂಲಕ ಜತ್ ತಾಲೂಕಿಗೆ ನೀರು ಹರಿ ಬಿಡಲಾಗಿದೆ.
ಸಂತಸ ವ್ಯಕ್ತಪಡಿಸಿದ ಗಡಿನಾಡ ಕನ್ನಡಿಗರು
ಮಹಾರಾಷ್ಟ್ರದಲ್ಲಿದ್ದರೂ ಇಲ್ಲಿನ ಸರ್ಕಾರ ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದರೆ ಕರ್ನಾಟಕದಿಂದ ನೀರು ಬಿಟ್ಟಿದ್ದಕ್ಕೆ ಸಂತಸವ್ಯಕ್ತವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಮಗೆ ನೀರು ಕೊಡಿ ಇಲ್ಲವಾದ್ರೆ ಕರ್ನಾಟಕಕ್ಕೆ ಹೋಗ್ತೇವೆ: ಮಹಾರಾಷ್ಟ್ರದ ಜತ್ತ ತಾಲೂಕಿನ 42 ಹಳ್ಳಿಗಳ ಜನರ ಘೋಷಣೆ
ಮಾನವೀಯತೆ ದೃಷ್ಟಿಯಿಂದ ಜತ್ ತಾಲೂಕಿನ ಗ್ರಾಮಗಳಿಗೆ ನೀರು ಬಿಡಲಾಗಿದೆ
ಜತ್ ಭಾಗದಲ್ಲಿ ನಮ್ಮವರು ಇದ್ದಾರೆ, ಹಾಗಾಗಿ ನೀರು ಬಿಡಲಾಗಿದೆ. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಮೂಲಕ ನೀರು ಬಿಡಲಾಗುತ್ತಿದೆ. ಮಾನವೀಯತೆ ದೃಷ್ಟಿಯಿಂದ ಜತ್ ತಾಲೂಕಿನ ಗ್ರಾಮಗಳಿಗೆ ನೀರು ಬಿಡಲಾಗಿದೆ ಎಂದು ವಿಜಯಪುರ ನಗರದಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ: ಸಿಎಂ ಬೊಮ್ಮಾಯಿ ಘೋಷಣೆ
ಇನ್ನೂ ಗಡಿ ಕ್ಯಾತೆಯನ್ನು ತೆಗೆದಿದ್ದು ಮಹಾರಾಷ್ಟ್ರದವರು, ನಾವಲ್ಲ. ಗಡಿ ವಿಚಾರದಲ್ಲಿ ನಾವು ಯಾವುದೇ ಗಲಾಟೆ ಮಾಡುವುದಿಲ್ಲ. ನೆಲ, ಜಲ, ಭಾಷೆ ವಿಚಾರದಲ್ಲಿ ಪಕ್ಷಾತೀತವಾಗಿ ಒಗ್ಗಟ್ಟಾಗಿರುತ್ತೇವೆ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರನ್ನು ಅಲ್ಲಿನ ಸರ್ಕಾರ ನಿರ್ಲಕ್ಷಿಸಿದೆ ಎಂದು ಹೇಳಿದರು.
ನಮಗೆ ನೀರು ಕೊಡಿ ಇಲ್ಲವಾದರೇ ಕರ್ನಾಟಕಕ್ಕೆ ಹೋಗುತ್ತೇವೆ ಎಂದ ಜತ್ ಜನರು
ಕಳೆದ ಕೆಲವು ದಿನಗಳ ಹಿಂದೆ ಜತ್ ತಾಲೂಕಿನ ಜನರು ನಮಗೆ ನೀರು ಕೊಡಿ ಇಲ್ಲವಾದರೆ ಕರ್ನಾಟಕಕ್ಕೆ ಹೋಗುತ್ತೇವೆಂದು ತಾಲೂಕಿನ ಉಮದಿ ಗ್ರಾಮದ ಜನ ಆಕ್ರೋಶ ಹೊರ ಹಾಕಿದ್ದರು. ಜತ್ ತಾಲೂಕು ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಜತ್ ತಾಲೂಕಿನ 42 ಹಳ್ಳಿಗಳ ಜನರು ಉಮದಿ ಗ್ರಾಮದಲ್ಲಿ ಸಭೆ ಸೇರಿದ್ದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:43 pm, Fri, 2 December 22