Vijayapura News: ಸರ್ಕಾರಿ ಶಾಲಾ ಆವರಣದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಅಡ್ಡಿ: ಬಿಇಒ ಸಸ್ಪೆಂಡ್​ಗೆ ಎಂಬಿ ಪಾಟೀಲ್​ ಆದೇಶ

|

Updated on: Jun 23, 2023 | 8:51 PM

ಸರ್ಕಾರಿ ಶಾಲಾ ಆವರಣದಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕೆ ಅಡ್ಡಿಪಡಿಸಿರುವ ಆರೋಪ ಕೇಳಿಬಂದ ಹಿನ್ನೆಲೆ ಬಸವನಬಾಗೇವಾಡಿ ಬಿಇಒ ಶೇಖರ್ ಬಳಬಟ್ಟಿಯವರನ್ನು ಅಮಾನತು ಮಾಡುವಂತೆ ಡಿಡಿಪಿಐಗೆ ಸಚಿವ ಎಂ.ಬಿ.ಪಾಟೀಲ್ ಆದೇಶಿಸಿದ್ದಾರೆ.

Vijayapura News: ಸರ್ಕಾರಿ ಶಾಲಾ ಆವರಣದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಅಡ್ಡಿ: ಬಿಇಒ ಸಸ್ಪೆಂಡ್​ಗೆ ಎಂಬಿ ಪಾಟೀಲ್​ ಆದೇಶ
ಸಚಿವ ಎಂಬಿ ಪಾಟೀಲ್​
Follow us on

ವಿಜಯಪುರ: ಸರ್ಕಾರಿ ಶಾಲಾ (Government School) ಆವರಣದಲ್ಲಿ ಸಾರ್ವಜನಿಕ ಗ್ರಂಥಾಲಯ (Library) ನಿರ್ಮಾಣಕ್ಕೆ ಅಡ್ಡಿಪಡಿಸಿರುವ ಆರೋಪ ಕೇಳಿಬಂದ ಹಿನ್ನೆಲೆ ಬಸವನಬಾಗೇವಾಡಿ (Basavan Bagewadi) ಬಿಇಒ (BEO) ಶೇಖರ್ ಬಳಬಟ್ಟಿಯವರನ್ನು ಅಮಾನತು ಮಾಡುವಂತೆ ಡಿಡಿಪಿಐಗೆ ಸಚಿವ ಎಂ.ಬಿ.ಪಾಟೀಲ್ (MB Patil) ಆದೇಶಿಸಿದ್ದಾರೆ. ಇಂದು (ಜೂ.23) ವಿಜಯಪುರ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ್ (Shivand Patil) ಬಿಇಒ ಶೇಖರ್ ಬಳಬಟ್ಟಿ ವಿಚಾರ ಪ್ರಸ್ತಾಪಿಸಿದರು.

ಬಿಇಒ ಶೇಖರ್ ಬಳಬಟ್ಟಿ ಯರನಾಳ ಸರ್ಕಾರಿ ಶಾಲಾ ಆವರಣದಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಾಣಕ್ಕೆ ಪರವಾನಗಿ ನೀಡದೇ ಉದ್ಧಟತನ ಮಾಡುತ್ತಿದ್ದಾರೆ ಎಂದು ಶಿವಾನಂದ ಪಾಟೀಲ್ ಹೇಳಿದರು. ಇದಕ್ಕೆ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿ ತಕ್ಷಣವೇ ಬಿಇಒ ಅವರನ್ನು ಸಸ್ಪೆಂಡ್ ಮಾಡುವಂತೆ ಡಿಡಿಪಿಐಗೆ ಆದೇಶಿಸಿದರು.

ಇದನ್ನೂ ಓದಿ: ಏಷ್ಯಾದಲ್ಲೇ ಉತೃಷ್ಟ ಒಣ ದ್ರಾಕ್ಷಿ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುತ್ತಾರೆ, ಆದರೆ ಬೆಳೆಗಾರರ ಪಾಲಿಗೆ ಅದು ಕಹಿ ಕಹಿ, ಬಿಸಿಯೂಟಕ್ಕೆ ಸೇರಿಸಲು ಮನವಿ

ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಸ್ಪೆಂಡ್ ಎಚ್ಚರಿಕೆ

ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಶೌಚಾಲಯ ಇರಲೇಬೇಕು. ವಿದ್ಯಾರ್ಥಿನಿಯರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ ಇರಲೇಬೇಕು. ಶೌಚಾಲಯ ಇಲ್ಲದೆ ಹೋದರೆ ನಿಮ್ಮನ್ನು ಸಸ್ಪೆಂಡ್ ಮಾಡುವೆ. ನಾನು ಯಾರಿಗೂ ಈ ಮಾತು ಹೇಳಿಲ್ಲ, ನಿಮಗೆ ಮೊದಲು ಹೇಳಿದ್ದೇನೆ. ಮಾತಿಗೆ ತಪ್ಪಿದರೆ ಸಸ್ಪೆಂಡ್ ಪಿಕ್ಸ್ ಎಂದು ಡಿಡಿಪಿಐ ಉಮೇಶ ಶಿರಹಟ್ಟಿಮಠ, ಡಿಡಿಪಿಯು ಹೊಸಮನಿ ಅವರಿಗೆ ಖಡಕ್​ ಸೂಚನೆ ನೀಡಿದ್ದಾರೆ.

ಸಚಿವ ಎಂಬಿ ಪಾಟೀಲ್​ ಹಾಗೂ ಡಿಹೆಚ್ಓ ನಡುವೆ ವಾಗ್ವಾದ

ಸಭೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ರಾಜಕುಮಾರ್ ಯರಗಲ್ ಮಾಹಿತಿ ನೀಡುತ್ತಿದ್ದರು. ಈ ವೇಳೆ ನಿಮ್ಮ‌ ಮೇಲೆ ಬಹಳಷ್ಟು ಆರೋಪಗಳಿವೆ, ಸರಿಯಾಗಿ ಕೆಲಸ ಮಾಡದಿದ್ದರೆ ಮನೆಗೆ ಕಳಿಸುವುದಾಗಿ ಎಂಬಿ ಪಾಟೀಲ್ ಎಚ್ಚರಿಕೆ ನೀಡಿದರು. ಹಿರಿಯ ಅಧಿಕಾರಿಗಳ ಸಲಹೆ ಪಡೆದು ಕೆಲಸ ಮಾಡಿ ಎಂದರು.

ಎಂಬಿ ಪಾಟೀಲ್ ಎಚ್ಚರಿಕೆ ಬಳಿಕ ಗರಂ ಆದ ಡಿಎಚ್ಓ ರಾಜಕುಮಾರ ಯರಗಲ್ ಹಿರಿಯ ಅಧಿಕಾರಿಗಳು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನಾನು ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ಆದರೆ ತಾರತಮ್ಯ ಮಾಡೋದನ್ನು ಸಹಿಸುವುದಿಲ್ಲ. ನನಗೆ ಹಿರಿಯ ಅಧಿಕಾರಿಯೊಬ್ಬರು ಇಡಿಯಟ್ ಎಂದಿದ್ದಾರೆ. ನಾನು ಇದನ್ನು ಸಹಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:46 pm, Fri, 23 June 23