ವಿಜಯಪುರ, ಆ.04: ವಿಜಯನಗರ ಸಾಮ್ರಾಜ್ಯವನ್ನು ಆಳಿದ ಆದಿಲ್ ಷಾ ತನ್ನ ಪತ್ನಿ ರಾಣಿ ತಾಜ್ ಸುಲ್ತಾನಳ ಗೌರವಾರ್ಥವಾಗಿ 1620 ರಲ್ಲಿ ‘ತಾಜ್ ಬಾವಡಿ’(Taj Bawdi)ಯನ್ನು ನಿರ್ಮಿಸಿದನು. ಇದು ಒಟ್ಟು 224 ಚದರ ಅಡಿ ವಿಸ್ತೀರ್ಣದಲ್ಲಿ 35 ಚದರ ಅಡಿ ಹೊರ ಪ್ರದೇಶ ಮತ್ತು ಸುಮಾರು 52 ಅಡಿ ಎತ್ತರದಲ್ಲಿದೆ. ವಿಜಯಪುರ ನಗರದ ಹೃದಯ ಭಾಗದಲ್ಲಿರುವ ತಾಜ್ ಬಾವಡಿ, ಆದಿಲ್‌ಷಾಹಿ ಕಾಲದ ಪ್ರಮುಖ ಜಲ ಮೂಲಗಳಲ್ಲಿ ಒಂದು. ಐತಿಹಾಸಿಕವಾಗಿಯೂ ವಿಶೇಷ ಹಾಗೂ ವಾಸ್ತು ಶಿಲ್ಪದಲ್ಲೂ ವಿಶಿಷ್ಟ ಹೊಂದಿರುವ ತಾಜ್ ಬಾವಡಿ ಈಗ ಪ್ರಮುಖ ಸ್ಮಾರಕಗಳಲ್ಲಿ ಒಂದಾಗಿದೆ.
ಇಂಥಹ ಸ್ಮಾರಕ ಪ್ರವಾಸಿ ತಾಣವಾಗಬೇಕಿದ್ದು, ಒತ್ತೂವರಿ ಹಾಗೂ ಕಸ ಎಸೆಯೋ ತಾಣವಾಗಿದೆ. ಇಂಥ ಜಲ ಮೂಲವನ್ನು 2016 ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಎಂ ಬಿ ಪಾಟೀಲ್ ನಗರದ ಇತರೆ ಐತಿಹಾಸಿಕ ಬಾವಿಗಳನ್ನು ಸ್ವಚ್ಛ ಮಾಡುವಂತೆ ಇದನ್ನೂ ಹೂಳು ಮುಕ್ತ ಮಾಡಿದ್ದರು. ಆದರೂ ಬಾವಿ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಈ ಐತಿಹಾಸಿಕ ಬಾವಿಯನ್ನು ಪ್ರವಾಸಿ ತಾಣವನ್ನಾಗಿಸಲು ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್, ನಗರ ಶಾಸಕ ಯತ್ನಾಳ ಮುಂದಾಗಿದ್ದಾರೆ.
ಇದನ್ನೂ ಓದಿ:ವಿಜಯಪುರ: ಕೃಷ್ಣಾ ನದಿ ಪಾತ್ರದಲ್ಲಿ ಭಾರಿ ಮಳೆ, ಭರ್ತಿಯಾಗುತ್ತಿದೆ ಆಲಮಟ್ಟಿ ಜಲಾಶಯ
ತಾಜ್ ಬಾವಡಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೊಳಿಸುವ ಸಲುವಾಗಿ ಕರ್ನಾಟಕ ಸರ್ಕಾರದ ಅಡಾಪ್ಟ್ ಎ ಮಾನ್ಯುಮೆಂಟ್ ಯೋಜನೆಯಡಿಯಲ್ಲಿ ವಿವಿಧ ಸಂಘ, ಸಂಸ್ಥೆ, ಎನ್ಜಿಓ ಹಾಗೂ ಕಂಪನಿಗಳನ್ನು ಸಂಪರ್ಕಿಸಿದಾಗ ಮುಂಬಯಿ ಮೂಲದ ವಲ್ಡ್ ಮಾನ್ಯುಮೆಂಟ್ಸ್ ಫಂಡ್ ಇಂಡಿಯಾ ಅಸೋಷಿಯೇಷನ್ ಹಾಗೂ ಟಾಟಾ ಕನ್ಸಲ್ಟಂಟನ್ಸಿ ಸರ್ವೀಸ್ ಫೌಂಡೇಷನ್ ಸಾರ್ವಜನಿಕ ಹೊಣೆಗಾರಿಕೆ ಅನುದಾನದಲ್ಲಿ, ಅಂದರೆ ಸಿಎಸ್ ಆರ್ ಪಂಡ್ ನ ಸುಮಾರು 8 ಕೋಟಿ ರೂಪಾಯಿ ವೆಚ್ಚದಲ್ಲಿ ತಾಜ್ ಬಾವಡಿ ಅಭಿವೃದ್ದಿ ಮಾಡಿ ಪ್ರವಾಸಿ ತಾಣವನ್ನಾಗಿಸಲು ಮುಂದೆ ಬಂದಿವೆ. ಇದನ್ನು ಅಭಿವೃದ್ದಿ ಮಾಡಿ ಪ್ರವಾಸಿ ತಾಣವನ್ನಾಗಿಸಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ನೇತೃತ್ವ ವಹಿಸಿದ್ದಾರೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಜಬಾವಡಿ ಸಂರಕ್ಷಣೆಗಾಗಿ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ. ತಾಜಬಾವಡಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಿದ್ದ 17 ಮನೆಗಳನ್ನು ತೆರವು ಮಾಡಲಾಗಿದೆ. ಇಲ್ಲಿ ಮನೆಗಳ ತೆರವಿಗೆ ಒಳಗಾದವರಿಗೆ ಗುರುತಿಸಲಾಗಿರುತ್ತದೆ. ಕರ್ನಾಟಕ ಕೊಳಚೆ ನಿರ್ಮುಲನಾ ಮಂಡಳಿ ನಿರ್ಮಾಣ ಮಾಡಿರೋ ಬುರಣಾಪುರದ ಬಳಿಯ ಮನೆಗಳನ್ನು ನೀಡಲಾಗಿದೆ. ಪುರಾತನ ಐತಿಹ್ಯಕ್ಕೆ ಯಾವುದೇ ಧಕ್ಕೆ ಆಗದಂತೆ ಇಡೀ ತಾಜ್ ಬಾವಡಿ ಪ್ರದೇಶವನ್ನು ಅಭಿವೃದ್ದಿ ಮಾಡಲಾಗುತ್ತದೆ.
ಇದನ್ನೂ ಓದಿ: ಇಷ್ಟಾರ್ಥ ಕರುಣಿಸೋ ವಿಜಯಪುರದ ದುರ್ಗಾಪರಮೇಶ್ವರಿ, ದೇಶದ ಮೂಲೆ ಮೂಲೆಯಿಂದ ಬರ್ತಾರೆ ರಾಜಕಾರಣಿಗಳು
ಉದ್ಯಾನವನ ಸೇರಿದಂತೆ ಇತರೆ ಪ್ರವಾಸಿಗರನ್ನು ಸೆಳೆಯೋ ಕೆಲಸ ಕಾಮಗಾರಿಗಳನ್ನು ಮಾಡಲಾಗುತ್ತದೆ. ಈ ಮೂಲಕ ದೇಶಿ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯೋ ಕೆಲಸವಾಗಲಿದೆ. ಈ ಮೂಲಕ ಜಿಲ್ಲೆಯಲ್ಲಿ ಪ್ರವಾಸೋಧ್ಯಮ ಬೆಳೆಯಬೇಕು. ಜಿಲ್ಲೆಯ ಸ್ಮಾರಕಗಳು ವಿಶ್ವಪಾರಂಪರಿಕ ಪಟ್ಟಯಲ್ಲಿ ಸೇರುವಂತಾಗಬೇಕೆಂದು ಜನರು ಒತ್ತಾಯ ಮಾಡಿದ್ದಾರೆ. ಪ್ರವಾಸೋದ್ಯಮ ಬೆಳೆದರೆ ಸ್ಥಳಿಯ ಜನರಿಗೆ ಉದ್ಯೋಗ ವ್ಯಾಪಾರ ವಹಿವಾಟು ಮಾಡಲು ಅನಕೂಲವಾಗುತ್ತದೆ. ಹಾಗಾಗಿ ನಗರದ ತಾಜ್ ಬಾವಡಿ ಅಭಿವೃದ್ದಿ ಕಾರ್ಯ ಮಾಡುತ್ತಿರೋದು ಒಳ್ಳೆಯ ಕೆಲಸವೆಂದಿದ್ದಾರೆ.
ಸದ್ಯ ತಾಜ್ ಬಾವಡಿಯ ಪ್ರವೇಶ ದ್ವಾರ, ಖಾಲಿ ಜಾಗದಲ್ಲಿ ಸಾಂಸ್ಕೃತಿಕ ಕಲ್ಯಾಣ ನಿರ್ಮಾಣ, ರಸ್ತೆ ಹಾಗೂ ಫುಟ್ ಪಾತ್ ನಿರ್ಮಾಣ, ಕಾಂಪೌಂಡ್ ನಿರ್ಮಾಣ, ಹಳೆಯ ವಾಸ್ತು ಶಿಲ್ಪದ ಪಳಯುಳಿಕೆಗಳ ರಕ್ಷಣೆ ಹಾಗೂ ಪುನಃ ಸ್ಥಾಪನೆ ಮಾಡುವುದು ಸೇರಿದಂತೆ ಇತರೆ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಇಡೀ ಕಾಮಗಾರಿಯ ಪೂಜೆಯನ್ನು ಸಹ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಹಾಗೂ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಾಜ್ ಬಾವಡಿಯ ಜಲ ರಕ್ಷಣೆಯಷ್ಟೇಯಲ್ಲಾ ಇಡೀ ಆವರಣ ಪ್ರವಾಸಿ ತಾಣವಾಗಿ ನಿರ್ಮಾಣವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ