Kannada News Photo gallery If the traffic rules are broken, the fine will be fixed, Vijaypura SP notice, Kannada News
ಬೇಕಾಬಿಟ್ಟಿ ಪಾರ್ಕಿಂಗ್ಗೆ ಮುಕ್ತಿ ನೀಡಲು ವಿಜಯಪುರ ಎಸ್ಪಿಯಿಂದ ಹೊಸ ರೂಲ್ಸ್ ಜಾರಿ
ವಿಜಯಪುರ ನಗರ ದಿನದಿಂದ ಬೆಳೆಯುತ್ತಿದೆ. ನಗರ ಭಾಗದಲ್ಲೇ ಸುಮಾರು ಮೂರು ಲಕ್ಷಕ್ಕೂ ಅಧಿಕ ವಿವಿಧ ವಾಹನಗಳು ಇವೆ. ಮಿತಿ ಮೀರಿದ ವಾಹನಗಳ ಭರಾಟೆ ಸಂಚಾರಕ್ಕೆ ವ್ಯತ್ಯಯ ಉಂಟು ಮಾಡುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ಸವಾರರಿಗೆ ಅಷ್ಟೇಯಲ್ಲ ಜನರಿಗೂ ತೀವ್ರ ತೊಂದರೆಯಾಗುತ್ತಿದೆ. ಅದರಲ್ಲೂ ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ವಿಪರೀತ ವಾಹನಗಳ ಕಿರಿಕಿರಿ ಹಾಗೂ ಪಾರ್ಕಿಂಗ್ ಸಮಸ್ಯೆಗೆ ಜನರು ರೋಸಿ ಹೋಗಿದ್ದಾರೆ. ಈ ಸಮಸ್ಯೆಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಪೊಲೀಸ್ ಇಲಾಖೆ ಪರಿಹಾರ ಕಂಡುಕೊಳ್ಳುವತ್ತ ಗಮನ ಹರಿಸಿದೆ. ಈ ಕುರಿತು ಡಿಟೇಲ್ಸ್ ಇಲ್ಲಿದೆ.