ಇಷ್ಟಾರ್ಥ ಕರುಣಿಸೋ ವಿಜಯಪುರದ ದುರ್ಗಾಪರಮೇಶ್ವರಿ, ದೇಶದ ಮೂಲೆ ಮೂಲೆಯಿಂದ ಬರ್ತಾರೆ ರಾಜಕಾರಣಿಗಳು
ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಸೋಮದೇವರ ಹಟ್ಟಿ ತಾಂಡಾದಲ್ಲಿ ಜಾತ್ರಾ ಸಂಭ್ರಮ. ಪ್ರತಿ ಮಣ್ಣೆತ್ತಿನ ಅಮಾವಾಸ್ಯೆಯಂದು ನಡೆಯುವ ಶ್ರೀ ದುರ್ಗಾದೇವಿ ಜಾತ್ರೆಗೆ ವೈಶಿಷ್ಟ್ಯವಿದೆ. ದುರ್ಗಾ ದೇವಿಯ ದರ್ಶನಕ್ಕೆ ಸ್ಥಳೀಯರಷ್ಟೇ ಅಲ್ಲ ಇತರೆ ರಾಜ್ಯಗಳ ಜನರು ವಿವಿಧ ಪಕ್ಷಗಳ ರಾಜಕಾರಣಿಗಳು ಹಾಗೂ ಹಾಲಿ ಮಾಜಿ ಮಂತ್ರಿಗಳು ಬರುವುದು ಕಾಮನ್, ಎರಡು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ..
ವಿಜಯಪುರ, (ಜುಲೈ 05): ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ತಾಂಡಾದಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಪ್ರತಿ ಮಣ್ಣೆತ್ತಿನ ಅಮಾವಾಸ್ಯೆಯಂದು ನಡೆಯುವ ಈ ಜಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಅನ್ಯರಾಜ್ಯದ ಪ್ರಭಾವಿ ನಾಯಕರು ಇಲ್ಲಿಗೆ ಆಗಮಿಸಿ ದೇವಿಯ ದರ್ಶನ ಪಡೆದು ಹರಕೆ ಹೊತ್ತುಕೊಳ್ಳುತ್ತಾರೆ. ಇನ್ನೂ ಇಲ್ಲಿಗೆ ಬಂದ ರಾಜಕಾರಣಿಗಳು ಏನೇ ಬೇಡಿಕೊಂಡರೂ ಅವರ ಇಷ್ಟಾರ್ಥ ಈಡೇರಿ ರಾಜಕಾರಣದಲ್ಲಿ ಮತ್ತಷ್ಟು ಉತ್ತುಂಗಕ್ಕೆ ಏರುತ್ತಾರೆ ಎಂಬುದು ರಾಜಕಾರಣಿಗಳ ನಂಬಿಕೆಯಾಗಿದೆ/
ಇನ್ನೂ ಎರಡುವರೆ ಸಾವಿರ ಜನಸಂಖ್ಯೆ ಇರುವ ಈ ಸೋಮದೇವರಹಟ್ಟಿ ತಾಂಡಾದಲ್ಲಿರುವ ದೇವಾಲಯಕ್ಕೆ ಹಿಂದೆ ಮಾಜಿ ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ ಪಾಟೀಲ್ ಅವರು ಬಂದು ಹೋಗಿದ್ದಾರೆ. ಅದೇ ರೀತಿ ಇಲ್ಲಿಯವರೆಗೆ ಸಾಕಷ್ಟು ಜನ ರಾಜಕಾರಣಿಗಳು ಇಲ್ಲಿಗೆ ಬಂದು ಹರಕೆ ಹೊತ್ತುಕೊಂಡು ಹೋಗುತ್ತಾರೆ. ಅದರಲ್ಲೂ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ, ಸುಶೀಲ ಕುಮಾರ ಶಿಂಧೆ, ದಿವಂಗತ. ಅಂಬರೀಷ, ಗೋಪಿನಾಥ ಮುಂಡೆ, ಸಂಜಯ ಪಾಟೀಲ ಸೇರಿದಂತೆ ಹಲವು ಜನ ಐಪಿಎಸ್, ಐಐಎಸ್ ಅಧಿಕಾರಿಗಳು ಸಹಿತ ಇಲ್ಲಿಗೆ ಬಂದು ಹೋಗಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಭಾಗದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ: ಜೋಡಿ ಮಣ್ಣೆತ್ತಿಗೆ ಸಖತ್ ಬೆಲೆ
ಇಂದೂ ಸಹ ಕೇಂದ್ರ ಸಚಿವ ಶ್ರೀಪಾದ ನಾಯಕ, ಮುಂಬೈ ಸಂಸದ ಸಂಜೈ ಪಾಟೀಲ, ಎಂಎಲ್ಸಿ ಸುನೀಲಗೌಡ ಪಾಟೀಲ್, ತಾಂಡಾ ಅಭಿವೃದ್ಧಿ ನಿಗಮದ ಅದ್ಯಕ್ಷ ಜಯದೇವ ನಾಯಕ, ಜೀತು ಮಹಾರಾಜ ಸೇರಿದಂತೆ ಅನೇಕ ಗಣ್ಯರು ಜಾತ್ರೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಅಷ್ಟೇ ಅಲ್ಲ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯಕ್ ಮಾತನಾಡಿ ನಾನು ಹತ್ತು ವರ್ಷಗಳಿಂದ ಈ ದೇವಿಯ ಜಾತ್ರೆಗೆ ಬರುತ್ತಿದ್ದೇನ. ಕಳೆದ ವರ್ಷ ದೇವಿಯ ಬಳಿ ನಾನು ನಿಗಮ ಮಂಡಳಿಯ ಅಧ್ಯಕ್ಷನನ್ನು ಮಾಡು ಎಂದು ಹರಕೆ ಕಟ್ಟಿಕೊಂಡಿದ್ದೆ. ಅದು ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನುಳಿದಂತೆ ಎಂದು ಜಾತ್ರೆಯಲ್ಲಿ ಭಾಗಿಯಾದ ವಿವಿಧ ಪಕ್ಷಗಳ ಮುಖಂಡರು ಮಾತನಾಡಿದರು. ಶ್ರೀ ದುರ್ಗಾದೇವಿಯ ಮಹಿಮೆ ಹಿನ್ನಲೆ ರಾಜಕಾರಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ದರ್ಶನ ಆಶಿರ್ವಾದ ಪಡೆಯುತ್ತಾರೆ. ಇನ್ನೂ ದೇವಿಯ ಮಹಿಮೆಯ ಕಾರಣ ಭಕ್ತಾದಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿರುವದು ದೇವಿಯ ಶಕ್ತಿಯೇ ಇದಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ