ವಿಜಯಪುರ: ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಫೋಟೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿ ವಿಜಯಪುರ ನಗರದಲ್ಲಿ ಶಾಸಕ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಡಿ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಇದರಲ್ಲಿ ಯಾರ್ಯಾರು ಇದ್ದಾರೆ, ಎಲ್ಲವೂ ಗೊತ್ತಿದೆ. ದಾಖಲೆ ಸಮೇತ ನಮಗೆ ಮಾಹಿತಿ ಇದೆ. ಫೋಟೋ ವೈರಲ್ ಹಿಂದೆ ಇರುವವರಿಗೆ ತಕ್ಕ ಶಾಸ್ತಿಯಾಗುತ್ತೆ. ಭ್ರಷ್ಟಾಚಾರದ ವಿರುದ್ಧ, ಹಿಂದುತ್ವದ ಪರ ಮಾತನಾಡುತ್ತೇನೆ. ನನ್ನ ಮಾತು ಅವರಿಗೆ ಸಮಸ್ಯೆಯಾಗುತ್ತಿದೆ. ಫೋಟೋ ವೈರಲ್ ಪ್ರಕರಣದಲ್ಲಿ ಎಲ್ಲಾ ಪಕ್ಷದವರಿದ್ದಾರೆ. ಸಿಡಿ ಮಾಡುವಂತಹದ್ದು BJP ಕಾಂಗ್ರೆಸ್ನಲ್ಲಿ ಫ್ಯಾಕ್ಟರಿ ಇದೆ. ಎರಡೂ ಪಕ್ಷದಲ್ಲಿ ಸಿಡಿ ಮಾಡುವ ಒಬ್ಬರದು ಫ್ಯಾಕ್ಟರಿ ಇದೆ. ನನಗೆ ಅವಕಾಶ ತಪ್ಪಿಸಲು ಯಾರಿಂದಲೂ ಸಾದ್ಯವಿಲ್ಲ. ನನ್ನ ಸಿಡಿ ಇದ್ದರೆ ಬಿಡುಗಡೆ ಅಗಬೇಕಲ್ಲ. ಕಾರ್ಯಕರ್ತರು ಕೆಲವೊಮ್ಮೆ ವಿಡಿಯೋ ಕಾಲ್ ಮಾಡ್ತಾರೆ. ವಿಡಿಯೋ ಕಾಲ್ ಮಾಡಿದಾಗ ನಾನು ರಿಸೀವ್ ಮಾಡ್ತ್ತೇನೆ. ಸಿಡಿ ಇದ್ದರೆ ಬಿಡುಗಡೆ ಮಾಡಲಿ ಎಂದು ಯತ್ನಾಳ್ ಸವಾಲ್ ಹಾಕಿದ್ದಾರೆ.
ಪೊಲೀಸರು ಫೋಟೋ ಪ್ರಕರಣವನ್ನ ತನಿಖೆ ಮಾಡುತ್ತಾರೆ. ಇಂತಹ ನೂರು ಆರೋಪ ಬಂದರೂ ಎದುರಿಸುವ ತಾಕತ್ತಿದೆ. ಕಳ್ಳರು ಇನ್ನೊಂದು ಸ್ವಲ್ಪ ದಿನದಲ್ಲಿ ಸಿಗುತ್ತಾರೆ. ಜನರ ಮುಂದೆ ಬೆತ್ತಲಾಗುತ್ತಾರೆ ಎಂದ ಶಾಸಕ ಯತ್ನಾಳ್
ಇನ್ನು ಇದೇ ವೇಳೆ ಡಿಕೆ ಶಿವಕುಮಾರ್ ಕುರಿತ ಕಾಂಗ್ರೆಸ್ ಮುಖಂಡ ಸಲೀಂ ಹಾಗೂ ಉಗ್ರಪ್ಪ ನಡುವಿನ ಸಂಭಾಷಣೆ ವಿಚಾರಕ್ಕೆ ಸಂಬಂಧಿಸಿ ಯತ್ನಾಳ್ ಮಾತನಾಡಿದ್ದಾರೆ. ಜಲಸಂಪನ್ಮೂಲ ಇಲಾಖೆ ಭ್ರಷ್ಟಾಚಾರ ಪ್ರಕರಣ ನಿಜಾ. ಅದು ಸತ್ಯವೇ ಇದೆ, ಆ ಕಾರಣಕ್ಕೆ ರೇಡ್ ಆಗಿದೆ. ಸಾವಿರಾರು ಕೋಟಿ ಮೌಲ್ಯದ ಆಸ್ತಿ ಸಿಕ್ಕಿದೆ. ಜಲಸಂಪನ್ಮೂಲ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ್ದೇ ರೇಡ್ ಆಗಿದೆ. ಅದರಲ್ಲಿ ಎಲ್ಲ ಪಕ್ಷದವರಿದ್ದಾರೆ, ಯಾವುದೇ ಒಂದು ಪಕ್ಷದವರಿಲ್ಲ. ಇನ್ಕಮ್ ಟ್ಯಾಕ್ಸ್ ನವರು ರೇಡ್ ಮಾಡಿ ಒಳ್ಳೆಯ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರದ ಹಣವನೆಲ್ಲ ವಸೂಲಿ ಮಾಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶದ ಮನೆಗಳು ಅರ್ಧಕ್ಕೆ ನಿಂತಿವೆ. ಬಡವರಿಗೆ ಹೋಗಿ ಅದು ಮುಟ್ಟಬೇಕು ಎಂದು ಶಾಸಕ ಯತ್ನಾಳ್ ತಿಳಿಸಿದರು.
ಇದನ್ನೂ ಓದಿ: ವಿಜಯಪುರ: ಸಾಮಾಜಿಕ ಜಾಲತಾಣದಲ್ಲಿ ಬಸನಗೌಡ ಯತ್ನಾಳ್ ಫೋಟೊ ವೈರಲ್, ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು