ವಿಜಯಪುರ: ಸಾಮಾಜಿಕ ಜಾಲತಾಣದಲ್ಲಿ ಬಸನಗೌಡ ಯತ್ನಾಳ್ ಫೋಟೊ ವೈರಲ್, ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು
ಈ ಪೋಸ್ಟರ್ ಮೂಲಕ ಶಾಸಕ ಯತ್ನಾಳ್ ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಶಾಸಕರ ಬೆಂಬಲಿಗ ಲಕ್ಷ್ಮಣ ಜಾಧವ್ ದೂರು ನೀಡಿದ್ದಾರೆ.
ವಿಜಯಪುರ: ಸಾಮಾಜಿಕ ಜಾಲತಾಣಗಳಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಫೋಟೊ ವೈರಲ್ ಆಗಿರುವ ಕುರಿತಂತೆ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ವಿಜಯಪುರ ನಗರದ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ‘ಬಿಜೆಪಿಯ ಹಿಂದು ಹುಲಿಯ ಸಿಡಿ ಬಿಡುಗಡೆಗೆ ಕ್ಷಣಗಣನೆ, ಭರ್ಜರಿ ಯಶಸ್ಸು ಕಾಣಲೆಂದು ಆಶಿಸುವೆ’ ಎಂಬ ಬರಹವಿರುವ ಪೊಟೋ ವೈರಲ್ ಆಗಿದೆ.
ಈ ಪೋಸ್ಟರ್ ಮೂಲಕ ಶಾಸಕ ಯತ್ನಾಳ್ ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಶಾಸಕರ ಬೆಂಬಲಿಗ ಲಕ್ಷ್ಮಣ ಜಾಧವ್ ದೂರು ನೀಡಿದ್ದಾರೆ. ನಮ್ಮ ಕಾಂಗ್ರೆಸ್ ಇನಸ್ಟಾಗ್ರಾಮ್ ಅಕೌಂಟ್ನಲ್ಲಿ ಪೋಸ್ಟ್ ಕಾಣಿಸಿಕೊಂಡಿದೆ. ಜೆಡಿಎಸ್ ಮಿಷನ್ 2023 ಎಂಬ ಫೇಸ್ಬುಕ್ ಅಕೌಂಟ್ನಲ್ಲಿಯೂ ಫೋಟೊ ಹರಿದಾಡುತ್ತಿದೆ. ಬಿಜೆಪಿ ನಾಯಕನ ಸಿಡಿ ಬಿಡುಗಡೆಗೆ ಕ್ಷಣಗಣನೆ ಎಂಬ ಟ್ಯಾಗ್ಲೈನ್ ಹಾಕಲಾಗಿದೆ.
ಘಟನೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ: ವಿಎಸ್ ಉಗ್ರಪ್ಪಗೆ ಸಿದ್ದರಾಮಯ್ಯ ಎಚ್ಚರಿಕೆ ಬೆಂಗಳೂರು: ಕಾಂಗ್ರೆಸ್ ನಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುರಿತು ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್. ಉಗ್ರಪ್ಪ ಹಾಗೂ ಸಲೀಂ ಮಾತನಾಡಿರುವ ವಿಚಾರ ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಟೀಕೆ, ವ್ಯಂಗ್ಯಗಳ ಸುರಿಮಳೆಗೈದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಕೂಡ ಇಬ್ಬರ ಘಟನೆ ಹಾನಿ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ವಿ.ಎಸ್. ಉಗ್ರಪ್ಪಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಸಂಜೆ ಸಿದ್ದರಾಮಯ್ಯಗೆ ವಿ.ಎಸ್. ಉಗ್ರಪ್ಪ ಕರೆ ಮಾಡಿದ್ದರು. ಇದೇ ವೇಳೆ, ಸಿದ್ದರಾಮಯ್ಯ ಉಗ್ರಪ್ಪ ನಡೆಗೆ ಅಸಮಾಧಾನ ವ್ಯಕ್ತಪಡಿಸಿರುವುದು ತಿಳಿದುಬಂದಿದೆ. ಸಂಜೆ 6 ಗಂಟೆ ಸುಮಾರಿಗೆ ಉಗ್ರಪ್ಪ ಕರೆ ಮಾಡಿದ್ದರು. ಘಟನೆ ಕುರಿತು ವಿವರ ನೀಡಲು ಉಗ್ರಪ್ಪ ಮುಂದಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಈ ವೇಳೆ ಉಗ್ರಪ್ಪರಿಗೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಈ ರೀತಿಯ ಘಟನೆಗಳು ಒಳ್ಳೆಯದಲ್ಲ ಎಂದು ಎಚ್ಚರಿಕೆ ನೀಡಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಯಡಿಯೂರಪ್ಪ, ವಿಜಯೇಂದ್ರ ಆಪ್ತರ ವಿರುದ್ಧ ಶಾಸಕ ಯತ್ನಾಳ್ ಐಟಿ ದಾಳಿ ಮಾಡಿಸಿದ್ದಾರಾ ಹೇಗೆ: ಹೆಚ್ಡಿ ಕುಮಾರಸ್ವಾಮಿ ಪ್ರಶ್ನೆ ಇದನ್ನೂ ಓದಿ: ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗ ನಡೆದ ಗಲಾಟೆ; ಶಾಸಕ ಯತ್ನಾಳ್ ಸೇರಿ ಎಲ್ಲ 134 ಜನರು ಖುಲಾಸೆ