ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗ ನಡೆದ ಗಲಾಟೆ; ಶಾಸಕ ಯತ್ನಾಳ್ ಸೇರಿ ಎಲ್ಲ 134 ಜನರು ಖುಲಾಸೆ

ತೀರ್ಪು ಹೊರಬೀಳುತ್ತಿದ್ದಂತೆ ಉಭಯ ಸಮುದಾಯದವರು ಪರಸ್ಪರ ಸಂತಸ ಹಂಚಿಕೊಂಡರು.

ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗ ನಡೆದ ಗಲಾಟೆ; ಶಾಸಕ ಯತ್ನಾಳ್ ಸೇರಿ ಎಲ್ಲ 134 ಜನರು ಖುಲಾಸೆ
ಬಸನಗೌಡ ಪಾಟಿಲ್ ಯತ್ನಾಳ್ (ಸಂಗ್ರಹ ಚಿತ್ರ)

ಬೆಂಗಳೂರು: ವಿಜಯಪುರ ನಗರದಲ್ಲಿ 2014 ಮೇ 26 ರಂದು ನಡೆದಿದ್ದ ಗಲಾಟೆ ಪ್ರಕರಣದ ತೀರ್ಪು ಪ್ರಕಟಗೊಂಡಿದ್ದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಎಲ್ಲ 134 ಜನರು ಖುಲಾಸೆಗೊಂಡಿದ್ದಾರೆ. ಪ್ರಚೋದನಕಾರಿ ಭಾಷಣ ಮತ್ತು ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲಿತ್ತು.

ನಗರದ ಗಾಂಧಿಚೌಕ್ ಪೊಲೀಸರು ದಾಖಲಿಸಿದ್ದ ಎರಡು ಪ್ರಕರಣಗಳಲ್ಲಿ‌ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದಾರೆ. ಎಲ್ಲರೂ ನಿರಪರಾಧಿಗಳು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ವಿಜಯಪುರ ನಗರ‌ ಶಾಸಕ ಬಸನಗೌಡ ಪಾಟೀಲ್ ಪಾಟೀಲ್ ಸೇರಿದಂತೆ ಎರಡು‌ ಕೋಮಿನ 134 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ನ್ಯಾಯಾಧೀಶ ಡಿ. ಜಯಂತಕುಮಾರ ಅವರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಲ್ಲರೂ ನಿರ್ದೋಷಿಗಳು ಎಂದು ತೀರ್ಪು ನೀಡಿದೆ. ನರೇಂದ್ರ ಮೋದಿ ಮೊದಲ‌ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ಚೀಕರಿಸುವ ವೇಳೆ ವಿಜಯಪುರದಲ್ಲಿ ನಡೆದ ವಿಜಯೋತ್ಸವದ ವೇಳೆ ಗಲಾಟೆ ನಡೆದಿತ್ತು. ಕೋಮು ಗಲಭೆಯಾಗಿ‌ ತಿರುವು ಪಡೆದುಕೊಂಡಿದ್ದ ಗಲಾಟೆಯಲ್ಲಿ ಎರಡು ಕೋಮುಗಳ ಮಧ್ಯೆ ನಡೆದಿದ್ದ ಕಲ್ಲು ತೂರಾಟ ನಡೆದು, ಬೈಕ್ ಹಾಗೂ ಇತರೆ ವಾಹನಗಳಿಗೆ ಬೆಂಕಿ‌ ಹಚ್ಚಲಾಗಿತ್ತು. ಈ ಪ್ರಕರಣದ ತನಿಖೆ ಸುದೀರ್ಘ 7 ವರ್ಷಗಳ ಕಾಲ ನಡೆದಿತ್ತು.

ನ್ಯಾಯಾಲಯದ ತೀರ್ಪು ಸ್ವಾಗತ ಮಾಡಿರುವ ಶಾಸಕ ಬಸನಗೌಡ ಪಾಟಿಲ್ ಯತ್ನಾಳ್ ಸೇರಿದಂತೆ ಇತರರು, ಮುಂದೆ ಸಹೋದರತೆಯಿಂದ ಇರುತ್ತೇವೆ. ಕೆಲ ಕಿಡಿಗೇಡಿಗಳಿಂದ ನಡೆದ ಗಲಾಟೆಯಲ್ಲಿ ಅಮಾಯಕರು ಕಷ್ಟ ಅನುಭವಿಸುವಂತಾಗಿತ್ತು. ನ್ಯಾಯಾಲಯದ ತೀರ್ಪಿನಿಂದ ಎಲ್ಲರಿಗೂ ಸಂತಸವಾಗಿದೆ ಎಂದು ತಿಳಿಸಿದರು. ಅಲ್ಲದೇ, ತೀರ್ಪು ಹೊರಬೀಳುತ್ತಿದ್ದಂತೆ ಉಭಯ ಸಮುದಾಯದವರು ಪರಸ್ಪರ ಸಂತಸ ಹಂಚಿಕೊಂಡರು.

ಇದನ್ನೂ ಓದಿ: 

ಸರ್ಕಾರದಿಂದ ಭರವಸೆ ಸಿಕ್ಕಲ್ಲಿ ಮೀಸಲಾತಿ ಹೋರಾಟ ಮುಂದೆ ಹಾಕ್ತೀವಿ: ಬಸನಗೌಡ ಪಾಟೀಲ್ ಯತ್ನಾಳ್

ಮಂತ್ರಿ ಆಗಲು ನಾನು ಯೋಗ್ಯನಿಲ್ಲ; ಸಿಎಂ ಆಗಲು ಮಾತ್ರ ಯೋಗ್ಯ ಎಂದು ಅನಿಸಿರಬೇಕು: ಬಸನಗೌಡ ಪಾಟೀಲ್ ಯತ್ನಾಳ್

Click on your DTH Provider to Add TV9 Kannada