
ವಿಜಯಪುರ, (ಆಗಸ್ಟ್ 19): ಕಳೆದ ಮೇ ತಿಂಗಳಲ್ಲಿ ವಿಜಯಪುರ ಜಿ್ಲ್ಲೆ ಸೇರಿದಂತೆ ಇತರೆ ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತು. ಮುಂಗಾರು ಮುಂಚೆಯೇ ಆಗಮನವಾಗಿತ್ತು. ನಂತರ ಜೂನ್ ಜುಲೈ ನಲ್ಲಿ ಒಂದು ರೀತಿಯಲ್ಲಿ ಮರೆಯಾಗಿದ್ದ ಮಳೆರಾಯ ಆಗಸ್ಟ್ ನಲ್ಲಿ ಮಳೆ ಅಬ್ಬರ ಜೋರಾಗಿದೆ. ಕಳೆದೊಂದು ವಾರದಿಂದ ವಿಜಯಪುರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಜಿಟಿ ಜಿಟಿ ಮಳೆ ಶೀತಗಾಳಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ತಂಪಾದ ವಾತಾವರಣ ಹಾಗೂ ಜಿಟಿ ಜಿಟಿ ಮಳೆಯಾಗುತ್ತಿರುವುದರಿಂದ ಪುಟ್ಟ ಟ ಮಕ್ಕಳ ಹಾಗೂ ವೃದ್ದರ ಅನಾರೋಗ್ಯಕ್ಕೀಡಾಗಿದ್ದು. ಆಸ್ಪತ್ರೆಗಳೆಲಲಾ ತುಂಬಿ ತುಳುಕುವಂತಾಗಿವೆ.
ಕಳೆದ ಒಂದು ವಾರದಿಂದ ವಿಜಯಪುರ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಹಾಗೂ ಜಿಟಿ ಜಿಟಿ ಮಳೆಯಿಂದಾಗಿ ರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಅದರಲ್ಲೂ ಚಿಕ್ಕ ಮಕ್ಕಳು ವೃದ್ದರು ಹಾಗೂ ವಿವಿಧ ರೋಗಗಳಿಂದ ಬಳಲುತ್ತಿರುವವರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕ್ಕ ಮಕ್ಕಳ ಹಾಗೂ ವೃದ್ದರು ಹೆಚ್ಚಾಗು ಚಿಕಿತ್ಸೆಗೆ ಆಗಮಿಸುವಂತಾಗಿದೆ. ನೆಗಡಿ ಕೆಮ್ಮು ಕಫ ಜ್ವರ ಸೇರಿದಂತೆ ಇತರೆ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈಗಾಗಲೇ ವಿವಿಧ ರೋಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವವ ಆರೋಗ್ಯದ ಮೇಲೆ ಈ ಹವಾಮಾನ ಮತ್ತೆ ಪರಿಣಾಮ ಬೀರುತ್ತಿದೆ.
ಹವಾಮಾನ ವೈಪರಿತ್ಯ, ಜಿಟಿ ಜಿಟಿ ಮಳೆಯಿಂದಲೇ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳ ಹಾಗೂ ವಯೋವೃದ್ದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದ್ದು, ಸೂಕ್ತ ಮುಂಜಾಗೃತಾ ಕ್ರಮಗಳಿಂದಲೇ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ. ಮಳೆಯಲ್ಲಿ ನೆನೆಯಬಾರದು. ಮಾಡಿಟ್ಟ ಹಾಗೂ ಸಂಗ್ರಹಿಸಿಟ್ಟ ಆಹಾರ ಸೇವೆನೆ ಮಾಡದೇ ಬಿಸಿಯಾಗಿರುವ ಆಹಾರ ಸೇವನೆ ಮಾಡಬೇಕು. ನೀರನ್ನು ಕುದಿಸಿ ಕುಡಿಬೇಕು.
ಕಳೆದ ಒಂದು ವಾರದಿಂದಲೇ ಮಕ್ಕಳ ವೃದ್ದರು ಅನಾರೋಗ್ಯಕ್ಕೆ ಈಡಾಗೋದು ಹೆಚ್ಚಾಗಿ ಕಂಡು ಬಂದಿದೆ. ವಾಂತಿ ಬೇಧಿ, ನೆಗಡಿ ಕೆಮ್ಮು ಬಾಧೆಗಳಾಗಿವೆ. ಹೆಚ್ಚಿನ ಸಮಸ್ಯೆ ಕಂಡು ಬಾರದಿದ್ದರೂ ಸಹ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ವೈದ್ಯರು ಹೇಳಿದ್ದಾರೆ. ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕಾ ಆರೋಗ್ಯ ಕೇಂದ್ರಗಳಲ್ಲಿ ಪ್ರತಿಶತ 25 ರಿಂದ 30 ರಷ್ಟು ರೋಗಿಗಳ ಸಂಖ್ಯೆ ಹೆಚ್ಚಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 40 ಕ್ಕೂ ಆಧಿಕ ಮಕ್ಕಳು ಹಾಗೂ ಶೇಕಡಾ 25 ರಷ್ಟು ವೃದ್ದರು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡು ಹೋಗುತ್ತಿದ್ದಾರೆ. ಆಧಿಕ ಅನಾರೋಗ್ಯವಿದ್ದವರನ್ನು ಮಾತ್ರ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿದೆ. ಸದ್ಯ ದಾಖಲು ಮಾಡಿಕೊಳ್ಳುವ ರೋಗಿಗಳ ಸಂಖ್ಯೆ ಕಡಿಮೆಯಿದ್ದರೂ ಸಹ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡು ಹೋಗುವ ಮಕ್ಕಳ ಹಾಗೂ ವೃದ್ದರ ಸಂಖ್ಯೆ ಹೆಚ್ಚಿದೆ ಎಂದು ವಿಜಯಪುರ ಜಿಲ್ಲಾಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಸದ್ಯ ವ್ಯತಿರಿಕ್ತ ಹವಾಮಾನ ಜಿಲ್ಲೆಯಲ್ಲಿ ಹಾಗೇಯೇ ಮುಂದುರೆದಿದೆ. ಇನ್ನು ಸುಮಾರು ಒಂದು ವಾರದ ಕಾಲ ಇದೇ ರೀತಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾಗಿ ಪೋಕಷರು ಪುಟ್ಟ ಮಕ್ಕಳ ಹಾಗೂ ವೃದ್ದರ ಆರೋಗ್ಯ ಕುರಿತು ಕಾಳಜಿ ವಹಿಸಬೇಕಿದೆ. ಬೆಚ್ಚನೆಯ ಹೊದಿಕೆಗಳ ಬಳಕೆ ಹಾಗೂ ಬಿಸಿ ಆಹಾರ ಸೇವನೆ ಮಾಡುವುದು ಒಳಿತು.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ