AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rains: ಮುಂದಿನ 2 ದಿನ ಕರ್ನಾಟಕದ ಈ ಜಿಲ್ಲೆಗಳಲ್ಲಿ ವಿಪರೀತ ಮಳೆ, ರೆಡ್ ಅಲರ್ಟ್​

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಭಾರಿ ಹೆಚ್ಚಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯಲಿದೆ. ಕ್ಯಾಸಲ್​​ರಾಕ್, ಆಗುಂಬೆ, ಗೇರುಸೊಪ್ಪ, ಶೃಂಗೇರಿ, ಜಯಪುರ, ಮಂಕಿ, ಕೊಪ್ಪ, ಯಲ್ಲಾಪುರ, ಹೊನ್ನಾವರ, ಕಮ್ಮರಡಿ,ಕಳಸ, ಬಾಳೆಹೊನ್ನೂರು, ಅಂಕೋಲಾ, ಮೂಡುಬಿದಿರೆ, ಕಾರವಾರ, ಲೋಂಡಾದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಸುಳ್ಯ, ಧರ್ಮಸ್ಥಳ, ಕೋಟಾ, ಭಾಗಮಂಡಲ, ಉಡುಪಿ, ಕುಂದಾಪುರ, ಕಿತ್ತೂರು, ಸೈದಾಪುರ, ಸೋಮವಾರಪೇಟೆ, ಉಡುಪಿ, ಕುಂದಾಪುರ, ಮಂಗಳೂರು, ಗುರುಮಿಟ್ಕಲ್, ಹಳಿಯಾಳ, ಮುಂಡಗೋಡು, ಮಾಣಿ, ಮಂಗಳೂರು, ಪೊನ್ನಂಪೇಟೆ, ನಾಪೋಕ್ಲು, ಪುತ್ತೂರು, ಬಂಟವಾಳ, ಮಂಠಾಳ, ಹಳಿಯಾಳ, ರಾಯಚೂರು,ಉಪ್ಪಿನಂಗಡಿ, ಶಕ್ತಿನಗರ, ಮುಲ್ಕಿ, ಯಡ್ರಾಮಿ, ಚಿತ್ತಾಪುರದಲ್ಲಿ ಮಳೆಯಾಗಿದೆ.

Karnataka Rains: ಮುಂದಿನ 2 ದಿನ ಕರ್ನಾಟಕದ ಈ ಜಿಲ್ಲೆಗಳಲ್ಲಿ ವಿಪರೀತ ಮಳೆ, ರೆಡ್ ಅಲರ್ಟ್​
ಮಳೆ Image Credit source: PTI
ನಯನಾ ರಾಜೀವ್
| Edited By: |

Updated on:Jul 03, 2026 | 12:40 PM

Share

ಬೆಂಗಳೂರು, ಆಗಸ್ಟ್​ 19: ಕರ್ನಾಟಕದಾದ್ಯಂತ ಮುಂದಿನ ಎರಡು ದಿನಗಳ ಕಾಲ ವಿಪರೀತ ಮಳೆ(Rain) ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್​ ಘೋಷಿಸಲಾಗಿದೆ.

ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಹಾಸನ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಮಳೆಯಾಗಲಿದೆ. ಕೊಪ್ಪಳ, ವಿಜಯಪುರ, ಯಾದಗಿರಿ, ಬಳ್ಳಾರಿ, ದಾವಣಗೆರೆಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಕ್ಯಾಸಲ್​​ರಾಕ್, ಆಗುಂಬೆ, ಗೇರುಸೊಪ್ಪ, ಶೃಂಗೇರಿ, ಜಯಪುರ, ಮಂಕಿ, ಕೊಪ್ಪ, ಯಲ್ಲಾಪುರ, ಹೊನ್ನಾವರ, ಕಮ್ಮರಡಿ,ಕಳಸ, ಬಾಳೆಹೊನ್ನೂರು, ಅಂಕೋಲಾ, ಮೂಡುಬಿದಿರೆ, ಕಾರವಾರ, ಲೋಂಡಾದಲ್ಲಿ ಅತಿ ಹೆಚ್ಚು ಮಳೆಯಾಗಿದೆ.

ಮತ್ತಷ್ಟು ಓದಿ: Karnataka Rains: ಕರ್ನಾಟಕದ 5 ಜಿಲ್ಲೆಗಳಿಗೆ ರೆಡ್ ಅಲರ್ಟ್​, ಆ.24ರವರೆಗೂ ಧಾರಾಕಾರ ಮಳೆ

ಸುಳ್ಯ, ಧರ್ಮಸ್ಥಳ, ಕೋಟಾ, ಭಾಗಮಂಡಲ, ಉಡುಪಿ, ಕುಂದಾಪುರ, ಕಿತ್ತೂರು, ಸೈದಾಪುರ, ಸೋಮವಾರಪೇಟೆ, ಉಡುಪಿ, ಕುಂದಾಪುರ, ಮಂಗಳೂರು, ಗುರುಮಿಟ್ಕಲ್, ಹಳಿಯಾಳ, ಮುಂಡಗೋಡು, ಮಾಣಿ, ಮಂಗಳೂರು, ಪೊನ್ನಂಪೇಟೆ, ನಾಪೋಕ್ಲು, ಪುತ್ತೂರು, ಬಂಟವಾಳ, ಮಂಠಾಳ, ಹಳಿಯಾಳ, ರಾಯಚೂರು,ಉಪ್ಪಿನಂಗಡಿ, ಶಕ್ತಿನಗರ, ಮುಲ್ಕಿ, ಯಡ್ರಾಮಿ, ಚಿತ್ತಾಪುರದಲ್ಲಿ ಮಳೆಯಾಗಿದೆ.

ಇಂಡಿ, ಹಾವೇರಿ, ಧಾರವಾಡ, ಶೋರಾಪುರ, ತರೀಕೆರೆ, ಚನ್ನಗಿರಿ, ಕೋಲಾರ, ಗಬ್ಬೂರು, ಮುದಗಲ್, ಕಕ್ಕೇರಿ, ಝಲ್ಕಿ, ಕಮಲಾಪುರ, ಲಕ್ಷ್ಮೇಶ್ವರ, ಲಿಂಗಸುಗೂರು, ಹುಬ್ಬಳ್ಳಿ, ತಾಳಿಕೋಟೆ, ಗೋಕಾಕ್, ಕಲಬುರಗಿ, ಬಸವನ ಬಾಗೇವಾಡಿ, ನೆಲೋಗಿ, ಗದಗ, ಹೊನ್ನಾಳಿ, ಚಿಕ್ಕಬಳ್ಳಾಪುರ, ಎಂಎಂ ಹಿಲ್ಸ್​, ದಾವಣಗೆರೆ, ಗೌರಿಬಿದನೂರಿನಲ್ಲಿ ಮಳೆಯಾಗಿದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಮಂಗಳವಾರ ಬೆಳಗ್ಗೆಯಿಂದಲೇ ಮಳೆಯಾಗುತ್ತಿದೆ. ಎಚ್​ಎಎಲ್​ನಲ್ಲಿ 25.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 24.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್​ನಲ್ಲಿ 25.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 26.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹೊನ್ನಾವರದಲ್ಲಿ 26.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕಾರವಾರದಲ್ಲಿ 27.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 24.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಮಂಗಳೂರು ಏರ್​​ಪೋರ್ಟ್​​ನಲ್ಲಿ 26.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಶಕ್ತಿನಗರದಲ್ಲಿ 27.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಳಗಾವಿ ಏರ್​​ಪೋರ್ಟ್​​ನಲ್ಲಿ 23.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೀದರ್​​ನಲ್ಲಿ 28.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ವಿಜಯಪುರದಲ್ಲಿ 28.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಧಾರವಾಡದಲ್ಲಿ25.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಗದಗದಲ್ಲಿ 26.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕಲಬುರಗಿಯಲ್ಲಿ 29.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹಾವೇರಿಯಲ್ಲಿ 23.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 21.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೊಪ್ಪಳದಲ್ಲಿ 27.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 23.1 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ರಾಯಚೂರಿನಲ್ಲಿ 23.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 22.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:20 am, Tue, 19 August 25

Follow Us
ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ದೇವೇಗೌಡರ ಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಮೇಷ ಮತ್ತು ವೃಷಭ ರಾಶಿಯವರಿಗೆ ಭಾರಿ ಧನಲಾಭದ ಯೋಗ
ಮೇಷ ಮತ್ತು ವೃಷಭ ರಾಶಿಯವರಿಗೆ ಭಾರಿ ಧನಲಾಭದ ಯೋಗ
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಸಚಿವ ಸಂಪುಟ ವಿಸ್ತರಣೆ ಜಟಾಪಟಿ: ಬಿಕೆ ಹರಿಪ್ರಸಾದ್ ಏನಂದ್ರು ನೋಡಿ​​
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಪಾಲಿಗೆ ರಾಧಾ ಪಾತ್ರ ಒಲಿದಿದ್ದು ಹೇಗೆ?
ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ
ಚಿಕ್ಕಮಗಳೂರು: 60 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಕಾರ್ಮಿಕನ ರಕ್ಷಣೆ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ಸಂಪುಟ ವಿಸ್ತರಣೆ ಬಗ್ಗೆ ಸಿದ್ದರಾಮಯ್ಯ ಜೊತೆ ಡಿಕೆಶಿ ಸುದೀರ್ಘ ಚರ್ಚೆ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ವೀಕೆಂಡ್‌ನಲ್ಲೂ ನಡೆಯಲಿದೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ
ಸಿಎಂ ವಿಜಯ್​ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ
ಸಿಎಂ ವಿಜಯ್​ಗೆ ಶಾಕ್; ಬಿಜೆಪಿಯಿಂದ ಟಿವಿಕೆ ನಾಯಕನ ಲಂಚದ ವಿಡಿಯೋ ಬಿಡುಗಡೆ
ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
ಸಿಎಂ ಸಭೆಗೆ ಗೈರಾದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ
‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಡಿಕೆ ಶಿವಕುಮಾರ್
‘ನಾನು ತಪ್ಪು ಮಾಡಿದ್ದರೆ ಪೊರಕೆಯಿಂದ ನನಗೆ ಹೊಡೆಯಿರಿ’: ಡಿಕೆ ಶಿವಕುಮಾರ್