ಹೆಮ್ಮೆ! ವಿಜಯಪುರದ ಮೂವರು ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ! ಯಾರವರು? ಏನವರ ಸಾಧನೆ?

Pride of Vijayapur - ವಿಜಯಪುರ ನಗರದ ಮೂವರು ವಿಜ್ಞಾನಿಗಳು ಪ್ರಸಕ್ತ ಸಾಲಿನ ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2023 ನೇ ವರ್ಷದ ವಿಶ್ವದ ಉನ್ನತ ಪ್ರತಿಶತ 2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ನಗರದ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ಮೂರು ಜನ ಸಂಶೋಧಕರನ್ನು ಆಯ್ಕೆ ಮಾಡಲಾಗಿದೆ

ಹೆಮ್ಮೆ! ವಿಜಯಪುರದ ಮೂವರು ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ! ಯಾರವರು? ಏನವರ ಸಾಧನೆ?
ವಿಜಯಪುರದ ಡಾ. ರಾಘವೇಂದ್ರ ಕುಲಕರ್ಣಿ, ಡಾ. ಕುಶಾಲದಾಸ, ಡಾ. ರಘು ಎ ವಿ ಅವರಿಗೆ 2023ನೇ ಸಾಲಿನ ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ
Updated By: ಸಾಧು ಶ್ರೀನಾಥ್​

Updated on: Oct 09, 2023 | 12:30 PM

ವಿಜಯಪುರ ನಗರದ ಮೂವರು ವಿಜ್ಞಾನಿಗಳು (Pride of Vijayapur) ಪ್ರಸಕ್ತ ಸಾಲಿನ ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2023 ನೇ ವರ್ಷದ ವಿಶ್ವದ ಉನ್ನತ ಪ್ರತಿಶತ 2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ (Scientist) ನಗರದ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ಮೂರು ಜನ ಸಂಶೋಧಕರನ್ನು (Achievement) ಆಯ್ಕೆ ಮಾಡಲಾಗಿದೆ. ವಿಜಯಪುರ ನಗರದದ ಬಿ ಎಲ್ ಡಿ ಇ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ಡಾ. ಕುಶಾಲದಾಸ ಹಾಗೂ ಡಾ. ರಘು ಎ ವಿ ಅವರಿಗೆ ಔಷಧ ವಿಜ್ಞಾನ, ಶರೀರ ಶಾಸ್ತ್ರ ಹಾಗೂ ಪಾಲಿಮರ್ ಕ್ಷೇತ್ರದಲ್ಲಿನ ಸಂಶೋಧನೆಗಾಗಿ 2023 ನೇ ವರ್ಷದ ವಿಶ್ವದ ಉನ್ನತ 2 ಪ್ರತಿಶತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ.

ಅಮೇರಿಕಾದ ಸ್ಟ್ಯಾನಫೋರ್ಡ್ ವಿಶ್ವವಿದ್ಯಾಲಯ ಮತ್ತು ನೆದರಲ್ಯಾಂಡಿನ ಎಲ್ಸವಿಯರ್ ಪ್ರಕಾಶನ ಸಂಸ್ಥೆ ಪ್ರತಿ ವರ್ಷ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ, ಶ್ರೇಷ್ಠ 2 ಪ್ರತಿಶತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸುತ್ತದೆ. ಡಾ. ರಾಘವೇಂದ್ರ ಕುಲಕರ್ಣಿ ಅವರು ಸತತ 3 ನೇ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪಾಲಿಮರ್ ಆಧಾರಿತ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೈದ ಭಾರತದ ಸಂಶೋಧಕರ ಪೈಕಿ 15 ನೇ ಸ್ಥಾನ ಹಾಗೂ ವಿಶ್ವದ 127 ನೇ ಸ್ಥಾನ ಪಡೆದಿದ್ದಾರೆ. ಡಾ. ರಾಘವೇಂದ್ರ ಕುಲಕರ್ಣಿ ಅವರು 121 ಸಂಶೋಧನಾ ಪ್ರಕಟನೆಗಳನ್ನು ರಚಿಸಿದ್ದಾರೆ. ಅಲ್ಲದೇ, 9 ಪೇಟೆಂಟ್ ಗಳನ್ನೂ ಸಹ ಪಡೆದಿದ್ದಾರೆ. ಅಷ್ಟೇ ಅಲ್ಲ, ಇವರು ಸಂಶೋಧನೆಗಾಗಿ 97 ಲಕ್ಷ ರೂಪಾಯಿ ಅನುದಾನವನ್ನೂ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಧೂಳಾಪುರ ಎಂದೇ ಜರಿಯಲಾಗುತಿದ್ದ ವಿಜಯಪುರ ಈಗ ಶುದ್ದಗಾಳಿ ಇರುವ ಜಿಲ್ಲೆಗಳ ಪಟ್ಟಿಯಲ್ಲಿ ನಿರೀಕ್ಷೆ ಮೀರಿ 6ನೇ ಸ್ಥಾನ ಪಡೆದಿದೆ! ಏನೀ ಬದಲಾವಣೆ?

ಡಾ. ಕುಶಾಲದಾಸ ಶರೀರ ಶಾಸ್ತ್ರ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೈದ ಭಾರತದ ಸಂಶೋಧಕರ ಪೈಕಿ 186 ನೇ ಸ್ಥಾನ ಹಾಗೂ ವಿಶ್ವದಲ್ಲಿ 2407 ನೇ ಸ್ಥಾನ ಪಡೆದಿದ್ದಾರೆ. ಅವರು 135 ಸಂಶೋಧನಾ ಪ್ರಕಟನೆಗಳನ್ನು ರಚಿಸಿದ್ದಾರೆ. ಅಲ್ಲದೇ ಎರಡು ಪೇಟೆಂಟ್ ಗಳನ್ನು ಪಡೆದಿದ್ದು, ಸಂಶೋಧನೆಗಾಗಿ 60 ಲಕ್ಷ ರೂಪಾಯಿ ಅನುದಾನವನ್ನೂ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:  ಅ. 14 ಸೂರ್ಯಗ್ರಹಣದಂದು ಸೂರ್ಯನತ್ತ NASA ದಿಂದ ಒಂದೊಂದಾಗಿ ತ್ರಿವಳಿ ರಾಕೆಟ್‌ ಉಡಾವಣೆ, ಅದರ ಸಾರಥ್ಯ ಭಾರತೀಯ ಮೂಲದ ವಿಜ್ಞಾನಿ ಡಾ. ಆರೋಹ್ ಹೆಗಲಿಗೆ

ಇನ್ನು ಡಾ. ರಘು ಎ ವಿ ಅವರು ಪಾಲಿಮರ್- ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆಗೈದ ಭಾರತದ ಸಂಶೋಧಕರ ಪೈಕಿ 20 ನೇ ಸ್ಥಾನ ಹಾಗೂ ವಿಶ್ವದ 326 ನೇ ಸ್ಥಾನ ಪಡೆದಿದ್ದಾರೆ. ಅಲ್ಲದೇ, 110 ಸಂಶೋಧನಾ ಪ್ರಕಟನೆಗಳನ್ನು ರಚಿಸಿದ್ದಾರೆ ಹಾಗೂ ಸಂಶೋಧನೆಗಾಗಿ 25 ಲಕ್ಷರೂಪಾಯಿ ಅನುದಾನವನ್ನೂ ಪಡೆದುಕೊಂಡಿದ್ದಾರೆ. ಕರ್ನಾಟಕ ಸರ್ಕಾರದ ಸರ್ ಸಿ. ವಿ. ರಾಮನ್ ಪ್ರಶಸ್ತಿಯನ್ನೂ ಡಾ. ರಘು ಎ ವಿ ಸಂಸ್ಥೆಯ ಆಧ್ಯಕ್ಷ ಹಾಗೂ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್, ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ ಎಂ ಜಯರಾಜ, ಕುಲಪತಿ ಡಾ. ಆರ್ ಎಸ್. ಮುಧೋಳ ಹಾಗೂ ವಿವಿಯ ಅಡಳಿತ ಮಂಡಳಿ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ