ದೆಹಲಿಯಲ್ಲಿ ವಿಜಯಪುರ ಜಿಲ್ಲೆಯ ಕರ್ತವ್ಯನಿರತ ಯೋಧ ಆತ್ಮಹತ್ಯೆ
ದೆಹಲಿಯಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕರ್ತವ್ಯನಿರತ ಯೋಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 22 ವರ್ಷ ವಯಸ್ಸಾಗಿತ್ತು.
ವಿಜಯಪುರ: ದೆಹಲಿಯಲ್ಲಿ (Delhi) ಜಿಲ್ಲೆಯ (Vijayapura) ಯೋಧರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೇನಾ ಕ್ಯಾಂಪ್ನಲ್ಲಿ (Army Camp) ಕರ್ತವ್ಯದಲ್ಲಿದ್ದ ಮಂಜುನಾಥ್ ಹೂಗಾರ್ (Manjunath Hoogar) ನೇಣಿಗೆ ಶರಣಾದವರು. ಅವರಿಗೆ 22 ವರ್ಷ ವಯಸ್ಸಾಗಿತ್ತು. ಮುದ್ದೇಬಿಹಾಳ ತಾಲೂಕಿನ (Muddebihal) ಜಟ್ಟಗಿ ಗ್ರಾಮದ ಮಂಜುನಾಥ್ ಒಂದೂವರೆ ತಿಂಗಳ ಹಿಂದೆ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಆತ್ಮಹತ್ಯೆ ಬಗ್ಗೆ ಸೇನಾ ಅಧಿಕಾರಿಗಳಿಂದ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಆದರೆ ಮಂಜುನಾಥ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಸದ್ಯ ದೆಹಲಿಯಲ್ಲಿ ಮೃತ ದೇಹವಿದ್ದು, ಮಂಗಳವಾರ (ಡಿಸೆಂಬರ್ 07) ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಆಗಮಿಸುವ ಸಾಧ್ಯತೆ ಇದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕಳುಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮಂಜುನಾಥ್ ಸಾವಿನಿಂದ ಕುಟುಂಬದವರಲ್ಲಿ ಶೋಕ ಮನೆಮಾಡಿದೆ.
ಇದನ್ನೂ ಓದಿ:
Andhra Pradesh: ತಿರುಪತಿ ಸಮೀಪ ಭೀಕರ ಅಪಘಾತ; ಶಿಶು ಸೇರಿ 6 ಮಂದಿ ದುರ್ಮರಣ
ಹಳ್ಳಿಗಳಲ್ಲಿ ಬೀದಿದೀಪ ಬದಲಿಸೋದು ಮೋದಿ ಸರ್ಕಾರ: ಬಿಜೆಪಿ ಪ್ರಚಾರ ಸಭೆಯಲ್ಲಿ ಪ್ರತಾಪ್ ಸಿಂಹ
Published On - 7:53 pm, Sun, 5 December 21