AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲ‌ ಮಿಂಚಿಲ್ಲ ಈಗಲೂ ವಾಪಸ್ ಬಂದು ಬಿಜೆಪಿಗೆ ಶರಣಾಗತಿ ಆಗಿ: ಕಾಂಗ್ರೆಸ್​ಗೆ ಹೊರಟ ನಾಯಕರಿಗೆ ಯತ್ನಾಳ್​ ಕಿವಿಮಾತು

ದುಡುಕಿನ‌ ನಿರ್ಧಾರ ತೆಗೆದುಕೊಂಡಿದ್ದೀರಿ, ಕಾಲ‌ ಮಿಂಚಿಲ್ಲ. ಈಗಲೂ ವಾಪಸ್ ಬಂದು ಬಿಜೆಪಿಗೆ ಶರಣಾಗತಿ ಆಗಿ ಎಂದು ಕಾಂಗ್ರೆಸ್​ಗೆ ಹೊರಟ ನಾಯಕರುಗಳಿಗೆ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal)​ ಕಿವಿಮಾತು ಹೇಳಿದ್ದಾರೆ.

ಕಾಲ‌ ಮಿಂಚಿಲ್ಲ ಈಗಲೂ ವಾಪಸ್ ಬಂದು ಬಿಜೆಪಿಗೆ ಶರಣಾಗತಿ ಆಗಿ: ಕಾಂಗ್ರೆಸ್​ಗೆ ಹೊರಟ ನಾಯಕರಿಗೆ ಯತ್ನಾಳ್​ ಕಿವಿಮಾತು
ಬಸನಗೌಡ ಪಾಟೀಲ್ ಯತ್ನಾಳ್
ಕಿರಣ್ ಹನುಮಂತ್​ ಮಾದಾರ್
|

Updated on: Apr 16, 2023 | 3:05 PM

Share

ವಿಜಯಪುರ: ‘ದುಡುಕಿನ‌ ನಿರ್ಧಾರ ತೆಗೆದುಕೊಂಡಿದ್ದೀರಿ, ಕಾಲ‌ ಮಿಂಚಿಲ್ಲ. ಈಗಲೂ ವಾಪಸ್ ಬಂದು ಬಿಜೆಪಿಗೆ ಶರಣಾಗತಿ ಆಗಿ ಎಂದು ಕಾಂಗ್ರೆಸ್​ಗೆ ಹೊರಟ ನಾಯಕರುಗಳಿಗೆ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal)​ ಕಿವಿಮಾತು ಹೇಳಿದ್ದಾರೆ. ‘ನನಗೂ ಸಚಿವನನ್ನಾಗಿ ಮಾಡಲಿಲ್ಲ, ನಮಗೂ ಅನ್ಯಾಯವಾಗಿದೆ ಎಂದು ಕೆಲವೊಮ್ಮೆ ಅನಿಸುತ್ತೆ. ಮೇ.13 ರಂದು ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಈಗ ಹೋದವರದ್ದು ಯಾರದ್ದು ಡೆಪಾಸಿಟ್ ಉಳಿಯೋದಿಲ್ಲ. ಎಲ್ಲಾ ವೇಸ್ಟ್ ಬಾಡಿಗಳನ್ನು, ಕಸ ಕಡ್ಡಿಗಳನ್ನು ತೆಗೆಯಲು ಪ್ರಧಾನಿ ಪ್ರಯತ್ನ ಮಾಡಿದ್ದಾರೆ. ಮುಂದಿನ ಐದು ವರ್ಷ ಯೋಗಿ ಆದಿತ್ಯನಾಥ ಮಾದರಿಯಲ್ಲಿ ಕರ್ನಾಟಕದಲ್ಲಿ ಸರ್ಕಾರ ಆಗಲಿದೆ. ಲಿಂಗಾಯತರ ಕಡೆಗಣನೆ ಆಗಿದೆ ಎಂದು ನೀವು ನಿಮ್ಮ ಸ್ವಾರ್ಥಕ್ಕಾಗಿ ಹೇಳುತ್ತಿದ್ದೀರಿ ಎಂದಿದ್ದಾರೆ.

ನಮ್ಮ ದೇಶ, ಸಿದ್ದಾಂತ, ಪ್ರಮಾಣಿಕತೆ ಇದೆಲ್ಲ ನಿಮಗೆ ಇಲ್ಲ. ಪಕ್ಷಕ್ಕೆ ಅನ್ಯಾಯ ಮಾಡುತ್ತಿದ್ದೀರಿ. ದೇವರು ನಿಮಗೆ ಒಳ್ಳೇದು ಮಾಡಲ್ಲ ಎನ್ನುವ ಮೂಲಕ ಕಿಡಿಕಾರಿದ್ದು, ಎಸ್​.ಡಿ.ಪಿ.ಐ ವಿದೇಶಿ ಸಂಘಟನೆ. 2047 ಕ್ಕೆ ಈ ದೇಶದ ಪ್ರಧಾನಿಯನ್ನ ಮುಸ್ಲಿಂ ಅವರನ್ನ ಮಾಡುವುದಾಗಿದೆ. ಅದಕ್ಕೆ ಫಂಡಿಂಗ್ ಆಗ್ತಿರೋದು ವಿದೇಶದಿಂದ, ಪಾಕಿಸ್ತಾನದಿಂದ, ಮುಸ್ಲಿಂ ರಾಷ್ಟ್ರಗಳಿಂದ. ಅದರ ಅಜೆಂಡಾ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡೋದಾಗಿದೆ. ದುರ್ದೈವ ಎಂದರೆ ನಮ್ಮ ಬಿಜೆಪಿ ನಾಯಕರು ಆರ್​ಎಸ್​ಎಸ್ ಸ್ವಯಂ ಸೇವಕರು ಎಂದು ಹೇಳಿಕೊಂಡು ತಿರುಗಾಡುತ್ತಿರಿ, ಆರ್​ಎಸ್​ಎಸ್ ನೀವು ಇದ್ದಾಗ ನಿಮ್ಮ ತತ್ವ ಏನಿದೆ? ಎಲ್ಲಿ ಹೋಯ್ತು ನಿಮ್ಮ ತತ್ವ? ಎಂದು ಆರ್​.ಎಸ್​.ಎಸ್ ಹಿನ್ನೆಲೆ ಉಳ್ಳವರಿಗೆ ಯತ್ನಾಳ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಬಾದಾಮಿಯಲ್ಲಿ ಕಾಂಗ್ರೆಸ್​ಗೆ ಬಿಗ್ ಶಾಕ್; ಕೊನೆ ಕ್ಷಣದಲ್ಲಿ ಕೈ ಕೊಟ್ಟು ಜೆಡಿಎಸ್ ಸೇರಿದ ಡಾ ದೇವರಾಜ ಪಾಟೀಲ್

ದೇಶದ ಬಗ್ಗೆ ನಿಮಗೆ ಕಾಳಜಿ ಇಲ್ವಾ?, ಇವರ ಉದ್ದೇಶ ಕುಟುಂಬ ಸ್ವಾರ್ಥ. ಕಾಂಗ್ರೆಸ್​ಗೆ ಹೋಗ್ತಿರಲ್ಲ, ನಿಮ್ಮವರು ನೀವು ಅಧಿಕಾರಕ್ಕೆ ಇರಬೇಕಾ? ಈಗಲೂ ಕಾಲ‌ ಮಿಂಚಿಲ್ಲ, ಕ್ಷಮೆ ಕೇಳಿ ವಾಪಸ್ ಬಿಜೆಪಿಗೆ ಬನ್ನಿ. ಕರ್ನಾಟಕದಲ್ಲಿ 130 ಸೀಟ್ ಬಿಜೆಪಿ ಬರುತ್ತೆ, ಸ್ವಚ್ಚ ಸರ್ಕಾರ ಇರುತ್ತದೆ. ಮುಖ್ಯಮಂತ್ರಿ ಆಗುತ್ತಿನಿ ಎನ್ನುತ್ತಿದ್ದವರು, ಈಗ ಕಾಂಗ್ರೆಸ್​ಗೆ ಹೋಗ್ತಿದ್ದಾರೆ. ಕಾಂಗ್ರೆಸ್ ಕಚೇರಿ ಕಸ ಹೊಡೆಯಲು ಹೊರಟಿದ್ದಾರೆ. ಭಾರತ ಮಾತಾಕಿ ಜೈ ಎನ್ನುತ್ತಿದ್ದವರು ಈಗ ಸೋನಿಯಾಗಾಂಧಿ ಕಿ ಜೈ, ಅರೆಹುಚ್ಚ ರಾಹುಲ್ ಗಾಂಧಿ ಕಿ ಜೈ ಎನ್ನುತ್ತಿದ್ದಾರೆಂದು ಯತ್ನಾಳ್​ ಕಿಡಿಕಾರಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ