ಪ್ರೀತಿಸಿ ಮದ್ವೆ.. 2 ವರ್ಷದ ಬಳಿಕ ಗಂಡ-ಹೆಂಡ್ತಿ ಇಬ್ಬರೂ ನೇಣಿಗೆ ಶರಣು; ಕಾರಣವೇನು?

ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ರೆಜಿಸ್ಟಾರ್ ಮ್ಯಾರೇಜ್ ಆಗಿದ್ದರು. ಇವರ ಲವ್ ಸ್ಟೋರಿ ಹಾಗೂ ಮ್ಯಾರೇಜ್ ಗೆ ಜಾತಿ ಅಡ್ಡಿಯಾಗಿರಲಿಲ್ಲ. ಮನೆಯವರೆಲ್ಲ ಸೇರಿ ಕಳೆದ 2023 ರ ಡಿಸೆಂಬರ್ ನಲ್ಲಿ ಅದ್ದೂರಿಯಾಗಿ ಇಬ್ಬರಿಗೂ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿದ್ದರು. ಬಳಿಕ ಗಂಡ ಹೆಂಡತಿ ಇಬ್ಬರೂ ಅನ್ಯೋನ್ಯವಾಗಿದ್ದರು. ಆದರೆ ಇಂದು ಇಬ್ಬರೂ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣಿಗೆ ಶರಣಾಗಿದ್ದಾರೆ. ನಾನಿನಗೆ ನೀ ನನಗ ಎಂಬಂತಿದ್ದವರು ಸಾವಿನ ಹಾದಿ ಹಿಡಿದಿದ್ಯಾಕೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಪ್ರೀತಿಸಿ ಮದ್ವೆ.. 2 ವರ್ಷದ ಬಳಿಕ ಗಂಡ-ಹೆಂಡ್ತಿ ಇಬ್ಬರೂ ನೇಣಿಗೆ ಶರಣು; ಕಾರಣವೇನು?
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ರಮೇಶ್ ಬಿ. ಜವಳಗೇರಾ

Updated on:May 15, 2024 | 10:11 PM

ವಿಜಯಪುರ, (ಮೇ 15): ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ ನೇಣಿಗೆ (Suicide) ಶರಣಾಗಿರುವ ದಾರುಣ ಘಟನೆ ವಿಜಯಪುರ (Vijayapura) ‌ನಗರ ಹೊರಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯ ಮನೆಯಲ್ಲಿ ನಡೆದಿದೆ. ಮನೋಜಕುಮಾರ ಪೋಳ (30) ರಾಖಿ (23) ಸಾವನ್ನಪ್ಪಿದ ಜೋಡಿ. ಮನೋಜಕುಮಾರ ಪೋಳ ಹಾಗೂ ರಾಖಿ ಪರಸ್ಪರ ಪ್ರೀತಿಸಿ ಮದುವೆಯಾಗಿ 2 ವರ್ಷಗಳಾಗಿತ್ತು. ಗಂಡ-ಹೆಂಡತಿ ಇಬ್ಬರೇ ಮನೆಯಲ್ಲಿದ್ದ ವೇಳೆ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶ್ರೀ ಸಿದ್ದೇಶ್ವರ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಮನೋಜಕುಮಾರ ಹಾಗೂ ರಾಖಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ರೆಜಿಸ್ಟಾರ್ ಮದುವೆಯಾಗಿದ್ದರು. ಗೋಂದಳಿ ಸಮಾಜದ ಮನೋಜಕುಮಾರ ಹಾಗೂ ಮರಾಠಾ ಸಮಾಜದ ರಾಖಿ ಪ್ರೀತಿಗೆ ಜಾತಿ ಅಡ್ಡಿಯಾಗಿರಲಿಲ್ಲ. ಇಷ್ಟರ ಮಧ್ಯೆ ಕಳೆದ ಡಿಸೆಂಬರ್ ನಲ್ಲಿ ಮನೆಯವರೆಲ್ಲ ಸೇರಿ ಗ್ರ್ಯಾಂಡಾಗಿ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿದ್ದರು. ಮನೆ ಮುಂದೆ ರಿಸೆಪ್ಷನ್ ಸಹ ಮಾಡಿದ್ದರು. ಬಂಧು ಬಾಂಧವರೆಲ್ಲ ಸೇರಿ ಸಂತಸ ಪಟ್ಟಿದ್ದರು.

ಮದುವೆ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿಕೊಂಡಿದ್ದ ಮನೋಜಕುಮಾರ ಹಾಗೂ ರಾಖಿ ಅನ್ಯೋನ್ಯವಾಗಿದ್ದರು. ಮನೋಜಕುಮಾರ ರಾಖಿ ಹಾಗೂ ಮನೋಜಕುಮಾರ ತಾಯಿ ಭಾರತಿ ಮೂವರೇ ಮನೆಯಲ್ಲಿದ್ದರು. ಕಳೆದ ಎರಡು ದಿನಗಳ ಹಿಂದೆ ಭಾರತಿ ಮಗಾ ಹಾಗೂ ಸೊಸೆಯನ್ನು ಮನೆಯಲ್ಲಿ ಬಿಟ್ಟು ಮಗಳ ಊರಿಗೆ ಹೋಗಿದ್ದರಂತೆ. ಇಂದು ಬೆಳಿಗ್ಗೆ 10 ಗಂಟೆಯ ಬಳಿಕ ಮನೆಗೆ ಬಂದು ಬಾಗಿಲು ಬಡಿದರೂ ಬಾಗಿಲನ್ನು ಯಾರೂ ತೆರೆಯಲಿಲ್ಲವಂತೆ. ಬಳಿಕ ಭಾರತಿ ಪೋಳ ತಮ್ಮ ಮೈದುನನ್ನು ಕರೆಯಿಸಿ ಕಿಟಕಿಯ ಗಾಜು ಒಡೆದು ನೋಡಿದಾಗ ಇಬ್ಬರೂ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ನೆಲಕ್ಕೆ ಬಿದ್ದಿರೋದು ಕಂಡು ಬಂದಿದೆ.

ಮನೋಜಕುಮಾರ ಪೋಳ ಹಾಗೂ ರಾಖಿ ಮನೆಯಲ್ಲಿ ಯಾರೂ ಇಲ್ಲದೇ ಇರೋವಾಗ ನೇಣಿಗೆ ಶರಣಾಗಿದ್ದು ಯಾಕೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.  ಮತ್ತೊಂದೆಡೆ ಅನ್ಯೋನ್ಯವಾಗಿದ್ದ ಇಬ್ಬರೂ ಯಾಕೆ ಈ ರೀತಿ ದುಡುಕಿನ ನಿರ್ಧಾರ ತೆಗೆದುಕೊಂಡರು ಎಂದು ಜನ ಮಾತನಾಡುಕೊಳ್ಳುತ್ತಿದ್ದಾರೆ. ಮನೋಜಕುಮಾರ ಹಾಗೂ ರಾಖಿ ಚೆನ್ನಾಗಿಯ ಇದ್ದರು. ಇತ್ತೀಚೆಗೆ ಈ ಜೋಡಿ ಗೋವಾ ಟೂರ್ ಸಹ ಮಾಡಿತ್ತು. ಅವರಿಬ್ಬರ ಇಷ್ಟಕ್ಕೆ ನಾವು ಎಂದೂ ವಿರೋಧ ಮಾಡಿರಲಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ.

ಇನ್ನು ಮನೆಯೊಳಗೆ ಎಲ್ಲ ಬಾಗಿಲುಗಳಿಗೆ ಒಳಗೆ ಕೊಂಡಿ ಹಾಕಿರೋ ಸ್ಥಿತಿಯಲ್ಲಿದ್ದ ಕಾರಣ ಯಾರೋಬ್ಬರ ಮೇಲೂ ನಮಗೆ ಸಂಶಯವಿಲ್ಲ ಎಂದಿದ್ದಾರೆ. ಇನ್ನು ನೆರೆ ಹೊರೆಯ ಜನರು ಸಹ ಮನೋಜಕುಮಾರ ಹಾಗೂ ರಾಖಿ ಚೆನ್ನಾಗಿಯೇ ಇದ್ದರು ಎಂದು ಹೇಳಿದ್ಧಾರೆ. ನಿನ್ನೆ ಬೆಳಿಗ್ಗೆ ಹಾಗೂ ಸಾಯಂಕಾಲ ರಾಖಿ ಸಿಕ್ಕಿದ್ದಳು ಊಟಾ ತಿಂಡಿ ವಿಚಾರ ಮಾತನಾಡಿದೇವು. ನಮ್ಮ ಮನೆಗೆ ಮೊಮ್ಮಕ್ಕಳು ರಜೆಗೆ ಬಂದಿದ್ದ ಕಾರಣ ಹೆಚ್ಚು ಕಾಲ ಮೊಮ್ಮಕ್ಕಳೊಂದಿಗೆ ಕಳೆದೆ. ರಾತ್ರಿ ಸಹ ಯಾವುದೇ ಜಗಳ ಆಗಿದ್ದರ ಗಲಾಟೆಯಾಗಿದ್ದು ನಡೆದಿಲ್ಲ ಎಂದು ಪಕ್ಕದ ಮನೆಯವರು ಮಾಹಿತಿ ನೀಡಿದ್ದಾರೆ.

ಗೆಳತಿ ಮನೆಗೆ ಬಂದಿದ್ದಕ್ಕೆ ಈ ಅನಾಹುತ ನಡೆಯಿತಾ?

ಇನ್ನು ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪ್ರಾಥಮಿಕ ಮಾಹಿತಿ ಪಡೆದಿದ್ದಾರೆ. ಮನೋಜಕುಮಾರ ತಾಯಿ ಭಾರತಿ ಪೋಳ ಅವರಿಂದ ದೂರು ಪಡೆದುಕೊಂಡು ಇಬ್ಬರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದರು. ಕೆಲ ಮೂಲಗಳ ಪ್ರಕಾರ ರಾಖಿ ಕೆಲಸಕ್ಕೆ ಹೋದಾಗ ಮನೋಜ್ ಕುಮಾರ ಓರ್ವ ಸ್ನೇಹಿತೆಯನ್ನು ಮನೆಗೆ ಕರೆದುಕೊಂಡು ಬಂದಿದ್ದನಂತೆ. ಈ ವಿಚಾರವಾಗಿ ನಿನ್ನೆ ಸಾಯಂಕಾಲ ಗಂಡ ಹೆಂಡತಿ ಜಗಳ ಮಾಡಿದ್ದರಂತೆ. ಆಗ ಮನೋಜ್ ಕುಮಾರ ಚಿಕ್ಕಪ್ಪ ಮನೆಗೆ ಆಗಮಿಸಿ ಇಬ್ಬರ ಜಗಳ ಬಿಡಿಸಿ ಬುದ್ದಿಮಾತು ಹೇಳಿ ಹೋಗಿದ್ದರಂತೆ. ನಂತರ ರಾತ್ರಿ ಏನಾಗಿದೆಯೋ ಏನೋ ಬೆಳಿಗ್ಗೆ ಇಬ್ಬರೂ ನೇಣು ಹಾಕಿಕೊಂಡು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:24 pm, Wed, 15 May 24