ಈ ಬಾರಿ ಸಮ್ಮಿಶ್ರ ಸರ್ಕಾರ ಫಿಕ್ಸಾ? ಕತ್ನಳ್ಳಿ ಮಠದಿಂದ ಹೊರಬಿತ್ತು ವರ್ಷದ ಭವಿಷ್ಯ!

ಯುಗಾದಿ ಅಮಾವಾಸ್ಯೆಯಂದು ವಿಜಯಪುರದ ಕತ್ನಳ್ಳಿ ಗ್ರಾಮದ ಶ್ರೀ ಗುರು ಚಕ್ರವರ್ತಿ ಸದಾ ಶಿವಯೋಗೇಶ್ವರ ಜಾತ್ರೆ ನಡೆಯುತ್ತದೆ. ಜಾತ್ರೆಯ ಪ್ರಯುಕ್ತ ಹಲವಾರು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿರುತ್ತದೆ. ಇನ್ನು ಜಾತ್ರೆಯ ಕೊನೆಯಲ್ಲಿ ಇಂದಿನಿಂದ ಒಂದು ವರ್ಷದವರೆಗೆ ಆಗು ಹೋಗುಗಳ ಕುರಿತು ಭವಿಷ್ಯವನ್ನು ನುಡಿಯಲಾಗುತ್ತದೆ. ಹಾಗಾಗಿ ಈ ಜಾತ್ರೆಯನ್ನು ಕಾರ್ಣಿಕ ನುಡಿಯೋ ಆಥವಾ ಭವಿಷ್ಯ ನುಡಿಯೋ ಜಾತ್ರೆಯೆಂದೇ ಕರೆಯುತ್ತಾರೆ. ಪ್ರಸಕ್ತ ವರ್ಷದ ಭವಿಷ್ಯವನ್ನು ಮಠದ ಪೀಠಾಧಿಪತಿಗಳು ನುಡಿದಿದ್ದಾರೆ. ಸ್ವಾಮೀಜಿ ನುಡಿದ ಭವಿಷ್ಯವಾಣಿಯ ಕುರಿತ ವರದಿ ಇಲ್ಲಿದೆ ನೋಡಿ.

ಈ ಬಾರಿ ಸಮ್ಮಿಶ್ರ ಸರ್ಕಾರ ಫಿಕ್ಸಾ? ಕತ್ನಳ್ಳಿ ಮಠದಿಂದ ಹೊರಬಿತ್ತು ವರ್ಷದ ಭವಿಷ್ಯ!
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ರಮೇಶ್ ಬಿ. ಜವಳಗೇರಾ

Updated on:Apr 11, 2024 | 8:38 PM

ವಿಜಯಪುರ, (ಏಪ್ರಿಲ್ 11): ವಿಜಯಪುರ ತಾಲೂಕಿನ ಕತ್ನಳ್ಳಿಯಲ್ಲಿ ಶ್ರೀ ಗುರು ಚಕ್ರವರ್ತಿ ಸದಾಶಿವಯೋಗೇಶ್ವರ ಜಾತ್ರೆ ಪ್ರತಿ ಯುಗಾದಿಯಂದು ನಡೆಯುತ್ತದೆ. ಇನ್ನು ಜಾತ್ರೆಯ ಕೊನೆಯಲ್ಲಿ ಒಂದು ವರ್ಷದವರೆಗೆ ಆಗು ಹೋಗುಗಳ ಕುರಿತು ಭವಿಷ್ಯವನ್ನು ನುಡಿಯಲಾಗುತ್ತದೆ. ಇಲ್ಲಿ ನುಡಿಯುವ ಭವಿಷ್ಯ ಎಂದೂ ಸುಳ್ಳಾಗಲು ಮುಂದೆಯೂ ಸುಳ್ಳಾಗದು ಎನ್ನುವ ನಂಬಿಕೆ ಇದೆ. ಅದರಂತೆ ಈ ವರ್ಷ, ಮಳೆ ಬೆಳೆ ರೋಗ ರುಜಿನಗಳು, ರಾಜಕಾರಣ ಸೇರಿದಂತೆ ಇತರೆ ವಿಚಾರಗಳ ಕುರಿತು ಶಿವಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದು, ಒಗಟಿನ ರೂಪದಲ್ಲಿ ಭವಿಷ್ಯ ನುಡಿದಿರುವ ಅವರು ನಾಲ್ಕು ರೇಸಿ ಬಂಡಿಗಳಿವೆ, ಅವು ಈಗ ಮುಂದೆ ಹೊರಟಿವೆ. ತ್ಯಾಗಿ, ಯೋಗಿ, ಭೋಗಿ, ರೋಗಿ ಈ ಯಾವ ಗಾಡಿಯಲ್ಲಿ ಕುಳಿತು ಸ್ಪರ್ಧೆ ಗೆಲ್ಲುತ್ತೀರಿ ನೋಡಿ ಎಂದಿದ್ದಾರೆ.

ಸ್ವಾಮೀಜಿ ನುಡಿದ ಭವಿಷ್ಯ

ಕ್ರೋಧಿನಾಮ ಸಂವತ್ಸರ ಇದಾಗಿದೆ. ಯಾರೋಬ್ಬರೂ ಕ್ರೋಧದಿಂದ ಇರಬಾರದು. ಎಲ್ಲರೂ ಸಹಬಾಳ್ವೆಯಿಂದ ಹೊಂದಾಣಿಕೆಯಿಂದ, ನಯ ವಿನಯದಿಂದ ಹೋಗಬೇಕೆಂದು ಭವಿಷ್ಯವಾಣಿಯಲ್ಲಿ ಹೇಳಿದರು. ಇನ್ನು ಮಳೆಯ ಕುರಿತು ಭವಿಷ್ಯ ನುಡಿದ ಸ್ವಾಮೀಜಿ ಸಾಕ್ಷಾತ್ ಶಿವನೇ ಮಲೆಗಾಗಿ ಒಂಟಿಗಾಲಲ್ಲಿ ನಿಂತಿದ್ದಾನೆ. ನೀರಿಗಾಗಿ ಪ್ರಾಣಿ ಪಕ್ಷಿ ಪರಿತಪಿಸುವಂತಾಗುತ್ತದೆ. ಮುಂದಿನ ದಸಕಿ ಬೇರೆ ಬರುತ್ತದೆ. ಅದು ಯಾರನ್ನು ಬೆಸುಗೆ ಹಾಕುತ್ತದೆಯೋ ಅಗಲಿಸುತ್ತದೆಯೋ ಕೂಡಿಸುತ್ತದೆಯೋ ಎಂಬುದು ಗೊತ್ತಿಲ್ಲ. ಇದರಿಂದ ಪಾರಾಗಗಬೇಕೆಂದರೆ ದೇವರ ಸೇವೆ ಮಾಡಬೇಕೆಂದರು.

ರಾಜಕೀಯ ಭವಿಷ್ಯ

ರಾಜಕಾರಣದ ಕುರಿತು ಹೇಳಿದ ಸ್ವಾಮೀಜಿ, ನಾಲ್ಕು ಗಾಡಿಗಳು ಓಡುತ್ತಿವೆ. ಒಂದು ತ್ಯಾಗಿ, ಒಂದು ಯೋಗಿ, ಒಂದು ಭೋಗಿ ಹಾಗೂ ಒಂದು ರೋಗಿ ಗಾಡಿಯಂತಿವೆ. ನೀವು ಯಾವ ಗಾಡಿಯಲ್ಲಿ ಹೋಗುತ್ತೀರಿ ನೋಡಿ ಎಂದು ಲೋಕಸಭಾ ಚುನಾವಣೆ ಹಾಗೂ ದೇಶದ ರಾಜಕಾರಣದ ಕುರಿತು ಭವಿಷ್ಯನನ್ನು ಮುಂದುವರೆಸಿ ಮಾತನಾಡಿದ ಸ್ವಾಮೀಜಿ, ಒಳಗೆ ಕೆಲವೊಂದು ದೈತ್ಯ ಕಂಪನಿ ಗಂಟು ಬಿದ್ದಿದೆ. ದೈತ್ಯರ ರಾಜ್ಯವಾಗಬೇಕೆಂದು ಗಂಟು ಬಿದ್ದಿದೆ. ತನ್ನ ಕೈಯ್ಯಲ್ಲಿ ಆಗದಿದ್ದರೆ ಮಿಶ್ರ ಸರ್ಕಾರ ಮಾಡಬೇಕೆಂದು ಗಂಟು ಬಿದ್ದಿದೆ ಎಂದು ನುಡಿದರು.

ಈ ಬಾರಿ ಎಲ್ಲ ರೀತಿಯಲ್ಲಿ ಮಿಶ್ರವಿದೆ ಸುಖಕ್ಕಿಂತ ದುಖಃ ಹೆಚ್ಚಿದೆ ಎಂದ ಸ್ವಾಮೀಜಿ ಇನ್ನುಳಿದಂತೆ ಇತರೆ ವಿಚಾರಗಳ ಕುರಿತು ಭವಿಷ್ಯ ನುಡಿದರು. ಎಲ್ಲವನ್ನೂ ಯಾರೂ ನಂಬಬೇಡಿ, ಪಂಚಭೂತಗಳು ಕ್ರೋಧವಾಗಿದೆ ಎಲ್ಲರೂ ಹುಷಾರಾಗಿರಬೇಕೆಂದು ತಿಳಿಸಿದರು. ಮಳೆಯ ಬೆಳೆಯ ವಿಸೃತ ಭವಿಷ್ಯವನ್ನು ಚಮಕೇರಿಯಲ್ಲಿ ಹೇಳುತ್ತೇನೆಂದರು.

ಭವಿಷ್ಯ ನುಡಿಯೋ ಕಾರ್ಯದ ಬಳಿಕ ನಿಯದಂತೆ ಮಹಿಳೆಯರಿಗೆ ಹಾಗೂ ಕೆಲ ಮುಖಂಡರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿಸಲಾಗುತ್ತದೆ. ನಂತರ ಜಾತ್ರೆಗೆ ಆಗಮಿಸಿದ ಸಾವಿರಾರು ಭಕ್ತರಿಗೆ ಕಡಬು ತುಪ್ಪ ಅಣ್ಣ ಸಾರು ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟಾರೆ ಕಾರ್ಣಿಕ ಭವಿಷ್ಯವನ್ನು ನುಡಿಯೋ ಜಾತ್ರೆಗೆ ತೆರೆ ಬಿದ್ದಿದೆ. ಸ್ವಾಮೀಜಿ ನುಡಿದ ಭವಿಷ್ಯವನ್ನು ನೆರೆದ ಭಕ್ತರು ವಿಶ್ಲೇಷತೆಯಲ್ಲಿ ತೊಡಗಿದ್ದು ಕಂಡು ಬಂತು.

ಮಠದಲ್ಲಿ ಸಕಲ ಪೂಜಾ ಕಾರ್ಯಕ್ರಮ ನೆರವೇರಿಸಿಕೊಂಡು ಬಾಜಾ ಭಜಂತ್ರಿ ಸಮೇತ ಮಠದ ಪೀಠಾಧಿಪತಿ ಶ್ರೀ ಶಿವಯ್ಯ ಸ್ವಾಮೀಜಿ ಮಠದ ಬಳಿ ಬೇವಿಕ ಕಟ್ಟೆಯ ಬಳಿ ಆಗಮಿಸಿ ಭವಿಷ್ಯ ನುಡಿಯೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಲವಾರು ತಲೆಮಾರುಗಳಿಂದ ಮಠದ ಜಾತ್ರೆಯಲ್ಲಿ ನುಡಿಯೋ ಭಷ್ಯದ ಸುಳ್ಳಾಗಲ್ಲ. ಈ ಭವಿಷ್ಯದ ಆಧಾರದ ಮೇಲೆ ಈ ಭಾಗದ ಜನರು ತಮ್ಮ ಮುಂದಿನ ಕಾರ್ಯಗಳನ್ನು ಮಾಡುತ್ತಾರೆ. ಜೀವನ ಮಾಡುತ್ತಾರೆಂದು ಭಕ್ತರು ಹೇಳಿದ್ದಾರೆ.

Published On - 8:35 pm, Thu, 11 April 24

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್