ವಿಜಯಪುರ: ನಕಲಿ ದಾಖಲೆ ಸೃಷ್ಟಿಸಿ ಸ್ಥಿರಾಸ್ತಿ ಮಾರಾಟ ಜಾಲ ಪತ್ತೆ: 18 ಜನ ಆರೋಪಿಗಳ ಬಂಧನ

ನಮಗೆ ಸೇರಿದ್ದ ಮನೆ ನಿವೇಶನ ಹಾಗೂ ಜಮೀನು ನಮಗೆ ಗೊತ್ತೇ ಇಲ್ಲದಂತೆ ಮತ್ತೊಬ್ಬರಿಗೆ ಖರೀದಿಯಾಗಿ ಹೋಗಿ ಬಿಟ್ಟಿರುತ್ತದೆ. ಇಂಥ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ನಕಲಿ ದಾಖಲೆ ಸೃಷ್ಟಿಸಿ ಸ್ಥಿರಾಸ್ತಿ ಮಾರಾಟ ಮಾಡಿದರವನ್ನು ವಿಜಯಪುರ ಜಿಲ್ಲಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕುರಿತು ಇಲ್ಲಿದೆ ವರದಿ.

ವಿಜಯಪುರ: ನಕಲಿ ದಾಖಲೆ ಸೃಷ್ಟಿಸಿ ಸ್ಥಿರಾಸ್ತಿ ಮಾರಾಟ ಜಾಲ ಪತ್ತೆ: 18 ಜನ ಆರೋಪಿಗಳ ಬಂಧನ
ವಿಜಯಪುರ ಪೊಲೀಸ್​ ಠಾಣೆ
Follow us
ಅಶೋಕ ಯಡಳ್ಳಿ, ವಿಜಯಪುರ
| Updated By: ವಿವೇಕ ಬಿರಾದಾರ

Updated on: Jul 02, 2024 | 8:34 AM

ವಿಜಯಪುರ, ಜುಲೈ 02: ಇತ್ತೀಚಿನ ದಿನಗಳಲ್ಲಿ ವಿಜಯಪುರ (Vijayapura) ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ನಾವೇ ಮಾಲೀಕರು ಎಂದು ನಂಬಿಸಿ ಸ್ಥಿರಾಸ್ತಿ ಮಾರಾಟ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಪೈಕಿ ಕೆಲ ಪ್ರಕರಣಗಳಲ್ಲಿ ಮೋಸ ಹೋದವರು ವಿವಿಧ ಪೊಲೀಸ್ (Police) ಠಾಣೆಗಳಲ್ಲಿ ದೂರು ದಾಖಲು ಮಾಡಿದ್ದರು. ಇವೆಲ್ಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡ ಎಸ್ಪಿ ಋಷಿಕೇಷ ಸೋನೆವಣೆ ವಿಶೇಷ ತಂಡಗಳನ್ನು ರಚನೆ ಮಾಡಿ, ಆರೋಪಿಗಳ ಹೆಡೆಮುರಿ ಕಟ್ಟಲು ಮುಂದಾಗಿದ್ದರು. ಪರಿಣಾಮ, ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬೇರೆಯವರ ಸ್ಥಿರಾಸ್ತಿಗಳನ್ನು ತಮ್ಮದೇ ಎಂದು ಮಾರಾಟ ಮಾಡುತ್ತಿದ್ದ 18 ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೋರವಿ ಗ್ರಾಮದ ಸರ್ವೇ ನಂಬರ್ 344/ಬ/1 ಪೈಕಿ 1 ಎಕರೆ 36 ಗುಂಟೆ ಜಮೀನನ್ನು ಕ್ರಯ ಪತ್ರ ಮಾಡಿಕೊಟ್ಟು ಖರೀದಿ ಮಾಡುವವರ ಬಳಿ ಮುಂಗಡವಾಗಿ 25 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಚಾಂದಪೀರ ತಂದೆ ಮಹಮ್ಮದಗೌಸ್ ರಮಲಿ, ಮಹಿಬೂಬಸಾಬ ಹಡಗಲಿ, ಸಿಕಂದರ ಗಂಗನಳ್ಳಿ, ದತ್ತು ತಿಕ್ಕುಂಡಿ, ವಾಗೇಶ ಪೋಳ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ 18.50 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಗರದ ದಿವಟಗೇರಿ ಗಲ್ಲಿಯಲ್ಲಿ ನೀಲವ್ವ ನಿರ್ವಾಣಶೆಟ್ಟಿ ಎಂಬುವವರಿಗೆ ವಿಜಯಪುರ ತಾಲೂಕು ಕಸಬಾದಲ್ಲಿರುವ ಸರ್ವೇ ನಂಬರ್ 15/4 ಕ್ಷೇತ್ರ 10 ಗುಂಟೆ ಜಮೀನನನ್ನು ಸಹ ನಕಲಿ ದಾಖಲಾತಿಗಳನ್ನು ತಯಾರಿಸಿ 5 ಲಕ್ಷ ರೂಪಾಯಿಗಳಿಗೆ ಭೂತನಾಳ ತಾಂಡಾದ ಶಂಕರ ಚವ್ಹಾಣ ಎಂಬಿವವರಿಗೆ ಮಾರಾಟ ಮಾಡಿದ್ದ ಗ್ಯಾಂಗ್​ನ್ನು ಬಂಧಿಸಲಾಗಿದೆ. ಶಂಕರ ಚವ್ಹಾಣ, ಭೀಮರಾಯ ಕಟ್ಟಿಮನಿ, ನಾಗಪ್ಪ ಕೋಲಕಾರ ಎಂಬುವವರನ್ನು ಬಂಧಿಸಲಾಗಿದೆ.

ನಗರದ ಟ್ರೇಜರಿ ಕಾಲೋನಿಯ ಇಮಾಮಸಾಬ್ ಸಯ್ಯದ್ ಎಂಬುವರಿಗೆ ಸೇರಿದ ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿನ ಸರ್ವೇ ನಂಬರ್ 45+2 ನೇದ್ದರ 5 ಎಕರೆ ಜಮೀನಿನ ಮೇಲೆ ಸ್ಟೇಟ್​ ಬ್ಯಾಂಕ ಆಫ್ ಮೈಸೂರ್​ನಲ್ಲಿ 3 ಲಕ್ಷ ಸಾಲವಿತ್ತು. ಆ ಸಾಲವನ್ನು ನಕಲಿ ದಾಖಲೆಗಳ ಮೂಲಕ ಭರಿಸಿದ್ದಾಗಿ ಕೆಲವರು ಸೃಷ್ಟಿ ಮಾಡಿದ್ದರು. ಬಳಿಕ ಜಮೀನಿನ ಮೇಲಿದ್ದ ಋಣ ಕಡಿಮೆ ಮಾಡಲು ಸಬ್ ರೆಜಿಸ್ಟರ್ ಕಚೇರಿಗೆ ಮನವಿ ಸಲ್ಲಿಕೆ ಮಾಡಿದ್ದರು. ಬಳಿಕ ಈ ಜಮೀನು ನಕಲಿ ದಾಖಲೆಗಳಿಂದಲೇ ಮಾರಾಟ ಮಾಡಲು ಸಂಚು ಮಾಡಿದ್ದರು. ಈ ಅರೋಪದ ಮೇಲೆ ನಿಡೋಣಿ ಗ್ರಾಮದ ಜಿನ್ನಪ್ಪ, ಮಹಾವೀರ ಮಂಜರಗಿ ಹಾಗೂ ಶಿವಪ್ಪ ನೇಜಣ್ಣವರ, ತಿಗಣಿಬಿದರಿ ಗ್ರಾಮದ ಸಂತೋಷ ನಾವಿ ಹಾಗೂ ಜ್ಯೋತಿಬಾ ಸಾಳುಂಕೆ, ವಿಜಯಪುರ ನಗರದ ಆದರ್ಶ ನಗರದ ಶ್ರೀಧರ ಅಮೀನಗಡ, ಇವರನ್ನೂ ಖಾಕಿ ಪಡೆ ಅರೆಸ್ಟ್ ಮಾಡಿದೆ.

ಇದನ್ನೂ ಓದಿ: ಬಸನಗೌಡ ಪಾಟೀಲ್​ ಯತ್ನಾಳ್​ ಪತ್ರಕ್ಕೆ ಅಮಿತ್ ಶಾ ಸ್ಪಂದನೆ, ಹಲವರಿಗೆ ಶುರುವಾಯ್ತು ನಡುಕ!

ಮತ್ತೊಂದು ಪ್ರಕರಣದಲ್ಲಿ ತಿಕೋಟಾ ಪಟ್ಟಣದ ರೇವಣಸಿದ್ದಪ್ಪ ಕೋರಿ ಇವರ ಹೆಸರಿನಲ್ಲಿರುವ ಬರಟಗಿ ಗ್ರಾಮದ ಸರ್ವೇ ನಂಬರ್​ 251/*/2 ಪೈಕಿ 7 ಎಕರೆ 35 ಗುಂಟೆ ಜಮೀನನ್ನು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ರೇವಣಸಿದ್ದಪ್ಪನ ಬದಲಾಗಿ ಬೇರೆಯವನನ್ನು ಜಮೀನು ಮಾಲೀಕ ಎಂದು ತೋರಿಸಿ ಖರೀದಿ ತೆಗೆದುಕೊಳ್ಳುವವನ ಬಳಿ ಚೆಕ್‌ಗಳ ಮುಖಾಂತರ 88.20 ರೂಪಾಯಿಗಳು ಹಣವನ್ನು ಪಡೆದುಕೊಂಡು ಮೋಸ ಮಾಡಿದ್ದಾರೆ. ಈ ಪ್ರಕರಣದಲ್ಲಿ ಅಕ್ಬರ ಅಲಿ ಜುಮನಾಳ, ಅಶೋಕ ರಾಠೋಡ, ಸಂತೋಷ ದಳಪತಿ, ಮಹಮ್ಮದ ರಫೀಕ ತುರ್ಕಿ, ಪ್ರಕಾಶ ಚವ್ಹಾಣ ಹಾಗೂ ಮೋಹನ ಹೆಗಡೆ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರ ಬಳಿಯಿದ್ದ ಖೊಟ್ಟಿ ಆಧಾರ ಕಾರ್ಡ್, ಪ್ಯಾನ್ ಕಾರ್ಡ್, ಕೆನರಾ ಬ್ಯಾಂಕಿನ ಪಾಸಬುಕ್, ಎಟಿ ಎಮ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ.

ಬಂಧಿತರಿಂದ ವಶಕ್ಕೆ ಪಡೆಯಲಾದ ಹಣ

ಈ ವಿಚಾರವಾಗಿ ಮಾತನಾಡಿದ ಎಸ್ಪಿ ಋಷಿಕೇಶ ಸೋನೆವಣೆ, ಇಂಥಹ ಪ್ರಕರಣಗಳು ಬೆಳಕಿಗೆ ಬಂದ ಕೂಡಲೇ ಸ್ಥಿರಾಸ್ತಿಗಳ ಮಾಲೀಕರು ಸಮೀಪದ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿ. ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಕಾನೂನು ಬಾಹೀರ ಚಟುವಟಿಕೆಗಳನ್ನು ಮಾಡುವವರ ಹಾಗೂ ಮಾರಾಟ ಮಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮಾರಾಟ ಮಾಡುವ ಹಾಗೂ ಇತರೆ ಕಾನೂನು ಬಾಹೀರ ಚಟುವಟಿಕೆ ಮಾಡುವ ಒಂದೊಂದೇ ಗ್ಯಾಂಗ್​ಗಳನ್ನು ಪೊಲೀಸರು ಅರೆಸ್ಟ್ ಮಾಡುವ ಮೂಲಕ ಇದಕ್ಕೆಲ್ಲ ಬ್ರೇಕ್ ಹಾಕುತ್ತಿದ್ದಾರೆ. ಸದ್ಯ ಬಂಧಿಸಿದ ಆರೋಪಿಗಳಿಂದ ಅಕ್ರಮಕ್ಕೆ ಬಳಕೆ ಮಾಡುತ್ತಿದ್ದ ವಸ್ತುಗಳನ್ನು ಪರಿಕರಗಳನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಪರಾರಿಯಾಗಿರುವ ಇತರೆ ಆರೋಪಿತರ ಬಂಧನಕ್ಕೂ ಬಲೆ ಬೀಸಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಇಂಥ 8 ಪ್ರಕರಣಗಳಲ್ಲಿ ತಪ್ಪಿಸ್ಥರನನ್ನು ಬಂಧಿಸಲಾಗಿದೆ. ಈಗ 8 ಪ್ರಕರಣಗಳ ತನಿಖೆ ನಡೆಸಲಾಗುತ್ತಿದೆ. ಈ ಪೈಕಿ ತಪ್ಪಿತಸ್ಥರು ಕಂಡು ಬಂದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಇನ್ನೂ ತನಿಖೆ ಮುನ್ನಡೆಯಲಿದೆ ಎಂದು ಎಸ್ಪಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್