ಬೌದ್ಧ ವಿಹಾರಗಳು ಎಲ್ಲಿ ಹೋದವು, ರಾಮ-ಕೃಷ್ಣ ಇತಿಹಾಸ ಪುರುಷರಲ್ಲ: ನಿವೃತ್ತ ನ್ಯಾಯಾಧೀಶ
ವಿಜಯಪುರದಲ್ಲಿ ನಿನ್ನೆ (ಡಿ.1) ಆಯೋಜಿಸಲಾಗಿದ್ದ ‘ಸಂವಿಧಾನ ಆಶಯ ಈಡೇರಿದೆಯೇ' ಎನ್ನುವ ವಿಚಾರಗೋಷ್ಠಿಯಲ್ಲಿ ಶ್ರೀರಾಮ ಮತ್ತು ಶ್ರೀಕೃಷ್ಣ (Sri Rama and Sri Krishna) ಐತಿಹಾಸಿಕ ವ್ಯಕ್ತಿಗಳಲ್ಲ. ಅವು ಕೇವಲ ಕಾದಂಬರಿ ಪಾತ್ರಗಳು. ಅಶೋಕ ಚಕ್ರವರ್ತಿ (Emporer Ashoka) ನಿಜವಾದ ಇತಿಹಾಸ ಪುರುಷ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ವಸಂತ ಮುಳಸಾವಳಗಿ ಹೇಳಿದರು.
ವಿಜಯಪುರ: ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಿನ್ನೆ(ಡಿ.1) ನಡೆದಿದ್ದ ಕಾರ್ಯಕ್ರಮದಲ್ಲಿ ‘ಸಂವಿಧಾನ ಆಶಯ ಈಡೇರಿದೆಯೇ’ ಎನ್ನುವ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀರಾಮ ಮತ್ತು ಶ್ರೀಕೃಷ್ಣ (Sri Rama and Sri Krishna) ಐತಿಹಾಸಿಕ ವ್ಯಕ್ತಿಗಳಲ್ಲ. ಅವು ಕೇವಲ ಕಾದಂಬರಿ ಪಾತ್ರಗಳು. ಅಶೋಕ ಚಕ್ರವರ್ತಿ (Emporer Ashoka) ನಿಜವಾದ ಇತಿಹಾಸ ಪುರುಷ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ವಸಂತ ಮುಳಸಾವಳಗಿ ಹೇಳಿದರು. ಅಕ್ಬರ್ ಹೆಂಡತಿ ಹಿಂದೂ ಇದ್ದರೂ. ಆಕೆ ಧರ್ಮಾಂತರ ಆಗಿರಲಿಲ್ಲ. ಅಕ್ಬರ್ನ ಆಸ್ಥಾನದಲ್ಲಿ ಕೃಷ್ಣನ ಮಂದಿರ ಕಟ್ಟಿದ್ದಾನೆ, ಹೋಗಿ ನೋಡಬಹುದು. ಮುಸ್ಲಿಮರು ಹಾಗೆ ಮಾಡಿದ್ದಾರೆ, ಹೀಗೆ ಮಾಡಿದ್ದಾರೆ ಎನ್ನುವವರು ಭಾರತದಲ್ಲಿ ಮುಸ್ಲಿಮ್ ಆಳ್ವಿಕೆಯ 700 ವರ್ಷಗಳ ಇತಿಹಾಸ ಏನು ಹೇಳುತ್ತದೆ ಎನ್ನುವುದನ್ನು ಅರಿಯಬೇಕು ಎಂದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos