ನನ್ನ ಹೆಸರಲ್ಲಿ ಸಿನಿಮಾ ಮಾಡ್ತಿರೋದೇಕೆ?: ‘ಕಾಲಾಪತ್ಥರ್’ ಟೈಟಲ್ ವಿರುದ್ಧ ಮಾಜಿ ರೌಡಿಶೀಟರ್ ಗರಂ
ನನ್ನ ಹೆಸರು ಬಳಸಿಕೊಂಡು ಸಿನಿಮಾ ಮಾಡುತ್ತಿರುವುದು ತಪ್ಪು. ಟೈಟಲ್ ಹಿಂಪಡೆಯಲು ಫಿಲಂ ಚೇಂಬರ್ಗೆ ಮನವಿ ಮಾಡುತ್ತೇನೆ ಎಂದು ಕಾಲಾಪತ್ಥರ್ ಹೇಳಿದ್ದಾರೆ.
ಬೆಂಗಳೂರು: ನಟ ವಿಕ್ಕಿ ಅಭಿನಯದ ಹೊಸ ಸಿನಿಮಾ ‘ಕಾಲಾಪತ್ಥರ್’ ವಿರುದ್ಧ ಅದೇ ಹೆಸರಿನ ಮಾಜಿ ರೌಡಿಶೀಟರ್ ಕಾಲಾಪತ್ಥರ್ ಸಿಟ್ಟಾಗಿದ್ದಾರೆ. ಬೆಳಗ್ಗೆಯಷ್ಟೇ ನಟ ವಿಕ್ಕಿ ಕಾಲಾಪತ್ಥರ್ ಸಿನಿಮಾದ ಟೈಟಲ್ ಪ್ರಕಟಿಸಿದ್ದರು. ಸಿನಿಮಾ ಹೆಸರು ಹಾಗೂ ಮಾಜಿ ರೌಡಿ ಶೀಟರ್ ಎರಡೂ ಹೆಸರು ಒಂದೇ ಇದೆ. ಇದಕ್ಕಾಗಿ ಕಾಲಾಪತ್ಥರ್ ಅಸಮಾಧಾನ ಹೊರ ಹಾಕಿದ್ದಾರೆ.
ನನ್ನ ಹೆಸರು ಬಳಸಿಕೊಂಡು ಸಿನಿಮಾ ಮಾಡುತ್ತಿರುವುದು ತಪ್ಪು. ಟೈಟಲ್ ಹಿಂಪಡೆಯಲು ಫಿಲಂ ಚೇಂಬರ್ಗೆ ಮನವಿ ಮಾಡುತ್ತೇನೆ ಎಂದು ಕಾಲಾಪತ್ಥರ್ ಹೇಳಿದ್ದಾರೆ.
“ಕಾಲಾಪತ್ಥರ್” “kaala patthar “ The first look and first impression #VikkyVarun #kaalapatthar Thank you pic.twitter.com/4opx5PrqZs
— Vikky Varun (Santhosh Kumar R) (@Vikky_Varun) January 18, 2021
ವಿಕ್ಕಿ ಈ ಮೊದಲು ಕೆಂಡ ಸಂಪಿಗೆ ಹಾಗೂ ಕಾಲೇಜ್ ಕುಮಾರ ಚಿತ್ರದಲ್ಲಿ ನಟಿಸಿದ್ದರು.
ಪೆರೋಲ್ ಮೇಲೆ ಹೊರಬಂದ ರೌಡಿ ಶೀಟರ್ ದರ್ಬಾರ್ ಕಂಡು ಪೊಲೀಸರೇ ಕಂಗಾಲು!