ಮಡಿಕೇರಿ: ಮಧ್ಯ ಪ್ರದೇಶದಲ್ಲಿ ಕೊಡಗು ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮ ವೈಫಲ್ಯದ ಹಿನ್ನೆಲೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸುಳುಗೋಡಿನ ದರ್ಶನ್ ಮಧ್ಯಪ್ರದೇಶದ ಸಿಂಗ್ರೋಳ್ಳಿ ಎಂಬಲ್ಲಿ ಉದ್ಯೋಗದಲ್ಲಿದ್ದ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ ಎಂದು ತಿಳಿದುಬಂದಿದೆ. ತನ್ನ ಸಾವಿಗೆ ದಿವ್ಯಾ, ಅವರ ಕುಟುಂಬಸ್ಥರೇ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ದರ್ಶನ್ (28) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದರ್ಶನ್, ತನ್ನದೇ ಊರಿನ ದಿವ್ಯಾ ಎಂಬಾಕೆಯನ್ನ 8 ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ದರ್ಶನ್ ಜೊತೆ ವಿವಾಹ ನಿರಾಕರಿಸಿ ದಿವ್ಯಾ ಕಳೆದ ನಾಲ್ಕು ತಿಂಗಳಿನಿಂದ ಪೊಲೀಸ್ ಒಬ್ಬರನ್ನು ಪ್ರೀತಿಸುತ್ತಿದ್ದರು. ದಿವ್ಯಾ ಮೋಸದಿಂದ ತೀವ್ರ ಮನನೊಂದಿದ್ದ ದರ್ಶನ್ ಸಾವಿಗೆ ಕೊರಳೊಡ್ಡಿದ್ದಾನೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡೆತ್ ನೋಟ್ ಬರೆದಿರುವ ದರ್ಶನ್, ತನ್ನ ಸಾವಿಗೆ ದಿವ್ಯಾ ಮತ್ತು ಮನೆಯವರು ಕಾರಣ ಎಂದು ಉಲ್ಲೇಖ ಮಾಡಿದ್ದಾನೆ.
ದಸರಾ ನೋಡಲು ಬಂದಿದ್ದ ಬೆಂಗಳೂರಿನ ಆಟೋ ಚಾಲಕ ಮೈಸೂರಿನ ವಸತಿ ಗೃಹದಲ್ಲಿ ನೇಣಿಗೆ ಶರಣು
ಮೈಸೂರು: ವಿಶ್ವವಿಖ್ಯಾತ ದಸರಾ ನೋಡಲು ಬಂದಿದ್ದ ಬೆಂಗಳೂರಿನ ಆಟೋ ಚಾಲಕರೊಬ್ಬರು ಮೈಸೂರಿನ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ. ಶಿವರಾಜ್ (28 ) ಮೃತ ದುರ್ದೈವಿ. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಶಿವರಾಜ್, ಬೆಂಗಳೂರಿನಲ್ಲಿ ಆಟೋ ಚಾಲಕರಾಗಿದ್ದರು. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವರಾಜ್, ಸಂಗಂ ಚಿತ್ರಮಂದಿರದ ಬಳಿಯ ಲಾಡ್ಜ್ನಲ್ಲಿ ಸಾವಿಗೀಡಾಗಿದ್ದು, ಅಕ್ಟೋಬರ್ 1 ರಂದು ಕೊಠಡಿ ಬಾಡಿಗೆ ಪಡೆದಿದ್ದಾನೆ. ದಸರಾ ನೋಡಲು ಬಂದಿರುವುದಾಗಿ ಕೊಠಡಿ ಪಡೆದಿದ್ದ ಶಿವರಾಜ್, ಎರಡು ದಿನಗಳು ಕೊಠಡಿ ಬಾಗಿಲು ತೆರೆದಿರಲಿಲ್ಲ. ಇದೀಗ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.
(virajpet youth working in madhya pradesh commits suicide due to love failure, Bangalore auto driver commits suicide in a lodge in mysuru)