AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ನೋಡಲು ಬಂದಿದ್ದ ಬೆಂಗಳೂರಿನ ಆಟೋ ಚಾಲಕ ಮೈಸೂರಿನ ವಸತಿ ಗೃಹದಲ್ಲಿ ನೇಣಿಗೆ ಶರಣು

ಶಿವರಾಜ್, ಮೈಸೂರಿನ ಸಂಗಂ ಚಿತ್ರಮಂದಿರದ ಬಳಿಯ ಲಾಡ್ಜ್​​ನಲ್ಲಿ ಸಾವಿಗೀಡಾಗಿದ್ದು, ಅಕ್ಟೋಬರ್ 1 ರಂದು ಕೊಠಡಿ ಬಾಡಿಗೆ ಪಡೆದಿದ್ದಾನೆ. ದಸರಾ ನೋಡಲು ಬಂದಿರುವುದಾಗಿ ಕೊಠಡಿ ಪಡೆದಿದ್ದ ಶಿವರಾಜ್, ಎರಡು ದಿನಗಳು ಕೊಠಡಿ ಬಾಗಿಲು ತೆರೆದಿರಲಿಲ್ಲ. ಇದೀಗ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.

ದಸರಾ ನೋಡಲು ಬಂದಿದ್ದ ಬೆಂಗಳೂರಿನ ಆಟೋ ಚಾಲಕ ಮೈಸೂರಿನ ವಸತಿ ಗೃಹದಲ್ಲಿ ನೇಣಿಗೆ ಶರಣು
ದಸರಾ ನೋಡಲು ಬಂದಿದ್ದ ಬೆಂಗಳೂರಿನ ಆಟೋ ಚಾಲಕ ಮೈಸೂರಿನ ವಸತಿ ಗೃಹದಲ್ಲಿ ನೇಣಿಗೆ ಶರಣು
TV9 Web
| Edited By: |

Updated on:Oct 20, 2021 | 11:51 AM

Share

ಮೈಸೂರು: ವಿಶ್ವವಿಖ್ಯಾತ ದಸರಾ ನೋಡಲು ಬಂದಿದ್ದ ಬೆಂಗಳೂರಿನ ಆಟೋ ಚಾಲಕರೊಬ್ಬರು ಮೈಸೂರಿನ ವಸತಿ ಗೃಹದಲ್ಲಿ ನೇಣಿಗೆ ಶರಣಾಗಿದ್ದಾರೆ. ಶಿವರಾಜ್ (28 ) ಮೃತ ದುರ್ದೈವಿ. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಶಿವರಾಜ್, ಬೆಂಗಳೂರಿನಲ್ಲಿ ಆಟೋ ಚಾಲಕರಾಗಿದ್ದರು. ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವರಾಜ್, ಮೈಸೂರಿನ ಸಂಗಂ ಚಿತ್ರಮಂದಿರದ ಬಳಿಯ ಲಾಡ್ಜ್​​ನಲ್ಲಿ ಸಾವಿಗೀಡಾಗಿದ್ದು, ಅಕ್ಟೋಬರ್ 1 ರಂದು ಕೊಠಡಿ ಬಾಡಿಗೆ ಪಡೆದಿದ್ದಾನೆ. ದಸರಾ ನೋಡಲು ಬಂದಿರುವುದಾಗಿ ಕೊಠಡಿ ಪಡೆದಿದ್ದ ಶಿವರಾಜ್, ಎರಡು ದಿನಗಳು ಕೊಠಡಿ ಬಾಗಿಲು ತೆರೆದಿರಲಿಲ್ಲ. ಇದೀಗ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.

ಪ್ರೇಮ ವೈಫಲ್ಯ: ಮಧ್ಯ ಪ್ರದೇಶದಲ್ಲಿ ಉದ್ಯೋಗದಲ್ಲಿದ್ದ ಕೊಡಗು ಮೂಲದ ಯುವಕ ಆತ್ಮಹತ್ಯೆ

ಮಡಿಕೇರಿ: ಮಧ್ಯ ಪ್ರದೇಶದಲ್ಲಿ ಕೊಡಗು ಮೂಲದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮ ವೈಫಲ್ಯದ ಹಿನ್ನೆಲೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸುಳುಗೋಡಿನ ದರ್ಶನ್ ಮಧ್ಯಪ್ರದೇಶದ ಸಿಂಗ್ರೋಳ್ಳಿ ಎಂಬಲ್ಲಿ ಉದ್ಯೋಗದಲ್ಲಿದ್ದ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ ಎಂದು ತಿಳಿದುಬಂದಿದೆ. ತನ್ನ ಸಾವಿಗೆ ದಿವ್ಯಾ, ಅವರ ಕುಟುಂಬಸ್ಥರೇ ಕಾರಣ ಎಂದು ಡೆತ್‌ನೋಟ್ ಬರೆದಿಟ್ಟು ದರ್ಶನ್ (28) ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದರ್ಶನ್, ತನ್ನದೇ ಊರಿನ ದಿವ್ಯಾ ಎಂಬಾಕೆಯನ್ನ 8 ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ದರ್ಶನ್ ಜೊತೆ ವಿವಾಹ ನಿರಾಕರಿಸಿ ದಿವ್ಯಾ ಕಳೆದ ನಾಲ್ಕು ತಿಂಗಳಿನಿಂದ ಪೊಲೀಸ್ ಒಬ್ಬರನ್ನು ಪ್ರೀತಿಸುತ್ತಿದ್ದರು. ದಿವ್ಯಾ ಮೋಸದಿಂದ ತೀವ್ರ ಮನನೊಂದಿದ್ದ ದರ್ಶನ್ ಸಾವಿಗೆ ಕೊರಳೊಡ್ಡಿದ್ದಾನೆ. ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಡೆತ್ ನೋಟ್ ಬರೆದಿರುವ ದರ್ಶನ್, ತನ್ನ ಸಾವಿಗೆ ದಿವ್ಯಾ ಮತ್ತು ಮನೆಯವರು ಕಾರಣ‌ ಎಂದು ಉಲ್ಲೇಖ ಮಾಡಿದ್ದಾನೆ.

(Bangalore auto driver commits suicide in a lodge in mysuru, virajpet youth working in madhya pradesh commits suicide due to love failure)

Published On - 11:32 am, Wed, 20 October 21

ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
New Year 2026 Live: 2025ಕ್ಕೆ ಬೈಬೈ.. ಹೊಸ ವರ್ಷ 2026ಕ್ಕೆ ಹಾಯ್ ಹಾಯ್
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ