ವಿದ್ಯಾಪೀಠದ ಶೀಕೃಷ್ಣನ ಸನ್ನಿಧಾನ ಪಕ್ಕದಲ್ಲೇ ಬೃಂದಾವನಸ್ತರಾದ ವಿಶ್ವಸಂತ

|

Updated on: Dec 30, 2019 | 7:11 AM

ಬೆಂಗಳೂರು: ಉಡುಪಿಯ ಪೇಜಾವರ ಶ್ರೀಗಳು ತಾವೇ ಕಟ್ಟಿ ಬೆಳೆಸಿದ ವಿದ್ಯಾಪೀಠದಲ್ಲಿ ಶೀಕೃಷ್ಣನ ಸನ್ನಿಧಾನದ ಪಕ್ಕದಲ್ಲೇ ಬೃಂದಾವನ ಪ್ರವೇಶ ಮಾಡಿದ್ದಾರೆ. ಉಡುಪಿ ಭಾಗದ ಮಧ್ವ ಸಂಪ್ರದಾಯದಂತೆ ಅಂತಿಮ ವಿಧಿ‌ ವಿಧಾನಗಳು ನೆರವೇರಿದೆ. ರಾತ್ರಿ ಪೂರ್ತಿ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳ ಬೃಂದಾವನ ಪ್ರವೇಶ ಆಗಿದೆ. ರಾತ್ರಿ ಪೂರ್ತಿ ಭಜನೆ ಆರಾಧನೆ ನಡೆದಿದ್ದು, ಇಂದಿನಿಂದ ಪ್ರತಿನಿತ್ಯ ಹೋಮ, ಪವಿತ್ರಯಾಗ, ಪುಷ್ಪಾರ್ಣ ಯಾಗ ಹಾಗೂ ಇತ್ಯಾದಿ ಶಾಂತಿ ಹೋಮಗಳು ನಡೆಯಲಿವೆ. ಪ್ರತಿ 10 ದಿನ ಹೋಮ ಯಾಗಗಳು ನಡೆಯುತ್ತವೆ. 12ನೇ ದಿನಕ್ಕೆ ವಿಶೇಷ […]

ವಿದ್ಯಾಪೀಠದ ಶೀಕೃಷ್ಣನ ಸನ್ನಿಧಾನ ಪಕ್ಕದಲ್ಲೇ ಬೃಂದಾವನಸ್ತರಾದ ವಿಶ್ವಸಂತ
Follow us on

ಬೆಂಗಳೂರು: ಉಡುಪಿಯ ಪೇಜಾವರ ಶ್ರೀಗಳು ತಾವೇ ಕಟ್ಟಿ ಬೆಳೆಸಿದ ವಿದ್ಯಾಪೀಠದಲ್ಲಿ ಶೀಕೃಷ್ಣನ ಸನ್ನಿಧಾನದ ಪಕ್ಕದಲ್ಲೇ ಬೃಂದಾವನ ಪ್ರವೇಶ ಮಾಡಿದ್ದಾರೆ. ಉಡುಪಿ ಭಾಗದ ಮಧ್ವ ಸಂಪ್ರದಾಯದಂತೆ ಅಂತಿಮ ವಿಧಿ‌ ವಿಧಾನಗಳು ನೆರವೇರಿದೆ. ರಾತ್ರಿ ಪೂರ್ತಿ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶ್ರೀಗಳ ಬೃಂದಾವನ ಪ್ರವೇಶ ಆಗಿದೆ.

ರಾತ್ರಿ ಪೂರ್ತಿ ಭಜನೆ ಆರಾಧನೆ ನಡೆದಿದ್ದು, ಇಂದಿನಿಂದ ಪ್ರತಿನಿತ್ಯ ಹೋಮ, ಪವಿತ್ರಯಾಗ, ಪುಷ್ಪಾರ್ಣ ಯಾಗ ಹಾಗೂ ಇತ್ಯಾದಿ ಶಾಂತಿ ಹೋಮಗಳು ನಡೆಯಲಿವೆ. ಪ್ರತಿ 10 ದಿನ ಹೋಮ ಯಾಗಗಳು ನಡೆಯುತ್ತವೆ. 12ನೇ ದಿನಕ್ಕೆ ವಿಶೇಷ ಮಹಾಸಮಾರಾಧನೆ ನಡೆಯುತ್ತೆ. ಪರಮಪೂಜ್ಯ ವಿಶ್ವ ಪ್ರಸನ್ನ ಅವರ ನೇತೃತ್ವದಲ್ಲಿ ಅವರ ಆದೇಶದಂತೆ ಸತ್ಕಾರ್ಯಗಳು ನಡೆಯಲಿವೆ ಎಂದು ಪೂರ್ಣಪ್ರಜ್ಞಾ ವಿದ್ಯಾಪೀಠದ ಕಾರ್ಯದರ್ಶಿ ಕೇಶವ ಆಚಾರ್ಯ ತಿಳಿಸಿದ್ದಾರೆ‌.

ಇಂದಿನಿಂದ ಭಕ್ತಾದಿಗಳು ಪೇಜಾವರ ಶ್ರೀಗಳ ಬೃಂದಾವನ ದರ್ಶನ ಮಾಡಲಿಕ್ಕೆ ಅವಕಾಶ ಮಾಡಿಕೊಡಲಾಗುತ್ತೆ.‌ ಬೃಂದಾವನ ‌ನಿರ್ಮಾಣ ಮಾಡೋದಕ್ಕೆ ಒಂದೂವರೆ ವರ್ಷ ಬೇಕಾಗುತ್ತೆ. ಇದು ತಾತ್ಕಾಲಿಕ ಬೃಂದಾವನವಾಗಿದ್ದು ಪ್ರತಿದಿನ‌ ಪೂಜೆ‌‌ ಪುನಸ್ಕಾರಗಳು ನಡೆಯಲಿವೆ.

Published On - 7:11 am, Mon, 30 December 19