ಒಳ್ಳೆ ಸಂಸ್ಕೃತಿಯ ಹೆಣ್ಣು ಮಗಳೆಂದು ಗೆಲ್ಲಿಸಿದೆ -ರಮೇಶ್ ಪೇಚಾಟ
ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕರನ್ನು ಗೆಲ್ಲಿಸಿದ್ದು ನನ್ನ ತಪ್ಪಾಗಿದೆ. ಮರಾಠ ಮತದಾರರನ್ನು ಸೇರಿಸಿ ಅವರನ್ನು ನಾನು ಗೆಲ್ಲಿಸಿದೆ. ಅವರು ಒಳ್ಳೆಯ ಸಂಸ್ಕೃತಿಯ ಹೆಣ್ಣು ಮಗಳೆಂದು ನಾನು ಗೆಲ್ಲಿಸಿದೆ. ಅವರನ್ನ ಗೆಲ್ಲಿಸಿದ ತಪ್ಪಿಗೆ ನಾನು ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೆಸರೇಳದೆ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಟಾಂಗ್ ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ನೀಡಿದ್ದಾರೆ. ಕುಕ್ಕರ್, ಸಾವಿರ ರೂಪಾಯಿಗೆ ಮತ ಹಾಕ್ತೀನಿ ಅಂದ್ರೆ ಆಗಲ್ಲ. ನಿಮಗೆ ಕುಕ್ಕರ್ ಬೇಕಿದ್ದರೆ ನಾನು ಕೊಡಿಸುತ್ತೇನೆ. ಮರಾಠ ಸಮುದಾಯದ ಮುಖಂಡರೆಲ್ಲರೂ ಒಂದಾಗಬೇಕು. […]
ಬೆಳಗಾವಿ: ಬೆಳಗಾವಿ ಗ್ರಾಮೀಣ ಶಾಸಕರನ್ನು ಗೆಲ್ಲಿಸಿದ್ದು ನನ್ನ ತಪ್ಪಾಗಿದೆ. ಮರಾಠ ಮತದಾರರನ್ನು ಸೇರಿಸಿ ಅವರನ್ನು ನಾನು ಗೆಲ್ಲಿಸಿದೆ. ಅವರು ಒಳ್ಳೆಯ ಸಂಸ್ಕೃತಿಯ ಹೆಣ್ಣು ಮಗಳೆಂದು ನಾನು ಗೆಲ್ಲಿಸಿದೆ. ಅವರನ್ನ ಗೆಲ್ಲಿಸಿದ ತಪ್ಪಿಗೆ ನಾನು ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೆಸರೇಳದೆ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಟಾಂಗ್ ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ನೀಡಿದ್ದಾರೆ.
ಕುಕ್ಕರ್, ಸಾವಿರ ರೂಪಾಯಿಗೆ ಮತ ಹಾಕ್ತೀನಿ ಅಂದ್ರೆ ಆಗಲ್ಲ. ನಿಮಗೆ ಕುಕ್ಕರ್ ಬೇಕಿದ್ದರೆ ನಾನು ಕೊಡಿಸುತ್ತೇನೆ. ಮರಾಠ ಸಮುದಾಯದ ಮುಖಂಡರೆಲ್ಲರೂ ಒಂದಾಗಬೇಕು. ನೀವೆಲ್ಲಾ ಒಂದಾಗಿ ಮುಂದಿನ ಚುನಾವಣೆಯಲ್ಲಿ ಒಬ್ರು ನಿಲ್ಲಿ, ಯಾರು ಸ್ಪರ್ಧೆ ಮಾಡುತ್ತಾರೋ ಅವರ ಪರ ನಾನಿರುತ್ತೇನೆ. ನನ್ನ ಕಡೆಯಿಂದ ಎಲೆಕ್ಷನ್ ಫಂಡ್ ₹5 ಕೋಟಿ ಕೊಡುತ್ತೇನೆ ಎಂದು ನಾವಗೆ ಗ್ರಾಮದಲ್ಲಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಭಾಗದ ಮರಾಠ ಸಮುದಾಯದವರೆಲ್ಲಾ ಒಂದಾಗಬೇಕು. ಉಳಿದ ಸಮುದಾಯದ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ. ಮುಂದಿನ ಬಾರಿ ಬೆಳಗಾವಿ ಗ್ರಾಮೀಣ, ಯಮಕನಮರಡಿ, ಖಾನಾಪುರದಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿ ತೆಗೆದುಕೊಳ್ಳುವೆ. ಈಗ ಬಿಜೆಪಿಗೆ 17 ಜನ ಬಂದಿದ್ದೇವೆ, ಇನ್ನೂ 17 ಜನ ಬರ್ತಾರೆ ಎಂದರು.
Published On - 9:36 am, Mon, 30 December 19