ಸಿದ್ದರಾಮಯ್ಯಗೆ ಹೊಸ ಕಾರ್ ಬೇಕಂತೆ.. ಆದ್ರೆ ಸ್ಪೀಕರ್ ಏನಂದ್ರು?
ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೊಸ ಕಾರು ಖರೀದಿಗೆ ಸರ್ಕಾರ ಬ್ರೇಕ್ ಹಾಕಿದೆ. ಹೊಸ ಕಾರು ಖರೀದಿ ಸೇರಿದಂತೆ ಸಿದ್ದರಾಮಯ್ಯ ಮೂರು ಬೇಡಿಕೆ ಇಟ್ಟಿದ್ದರು. ಆದ್ರೆ, ಹೊಸ ಕಾರು ಖರೀದಿ ಪ್ರಸ್ತಾಪಕ್ಕೆ ವಿಧಾನಸಭೆ ಸ್ಪೀಕರ್ ಅನುಮತಿ ನೀಡಿಲ್ಲ. ಇಬ್ಬರು ಪಿಎಗಳನ್ನು ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಹೊಸ ಕಾರು ಖರೀದಿ ಮಾಡಲು ಎರಡು ತಿಂಗಳ ಹಿಂದೆಯೇ ಸಿದ್ದರಾಮಯ್ಯ ಪತ್ರ ಬರೆದಿದ್ದರು. 3 ಬೇಡಿಕೆ ಇಟ್ಟು ಬರೆದ ಪತ್ರ ಸ್ಪೀಕರ್ ಕಚೇರಿಯಲ್ಲೇ ಬಾಕಿಯಿದ್ದು, ಹಳೆಯ ಕಾರು ಬಳಕೆ […]
ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೊಸ ಕಾರು ಖರೀದಿಗೆ ಸರ್ಕಾರ ಬ್ರೇಕ್ ಹಾಕಿದೆ. ಹೊಸ ಕಾರು ಖರೀದಿ ಸೇರಿದಂತೆ ಸಿದ್ದರಾಮಯ್ಯ ಮೂರು ಬೇಡಿಕೆ ಇಟ್ಟಿದ್ದರು. ಆದ್ರೆ, ಹೊಸ ಕಾರು ಖರೀದಿ ಪ್ರಸ್ತಾಪಕ್ಕೆ ವಿಧಾನಸಭೆ ಸ್ಪೀಕರ್ ಅನುಮತಿ ನೀಡಿಲ್ಲ.
ಇಬ್ಬರು ಪಿಎಗಳನ್ನು ಮೇಲ್ದರ್ಜೆಗೆ ಏರಿಸುವುದು ಸೇರಿದಂತೆ ಹೊಸ ಕಾರು ಖರೀದಿ ಮಾಡಲು ಎರಡು ತಿಂಗಳ ಹಿಂದೆಯೇ ಸಿದ್ದರಾಮಯ್ಯ ಪತ್ರ ಬರೆದಿದ್ದರು. 3 ಬೇಡಿಕೆ ಇಟ್ಟು ಬರೆದ ಪತ್ರ ಸ್ಪೀಕರ್ ಕಚೇರಿಯಲ್ಲೇ ಬಾಕಿಯಿದ್ದು, ಹಳೆಯ ಕಾರು ಬಳಕೆ ಮಾಡುವಂತೆ ಸ್ಪೀಕರ್ ಕಚೇರಿಯಿಂದ ಮೌಖಿಕ ಸೂಚನೆ ನೀಡಲಾಗಿದೆ. ಶಾಸಕರ ಭವನದ ಇಬ್ಬರು ವಾಹನ ಚಾಲಕರು ಮತ್ತು ಒಬ್ಬ ಸ್ವೀಪರ್ರನ್ನು ಅನ್ಯ ಸೇವೆ ಮೇಲೆ ನಿಯೋಜಿಸಲು ಮಾಡಿರುವ ಮನವಿಗೂ ಸ್ಪೀಕರ್ ಕಚೇರಿ ಸ್ಪಂದನೆ ನೀಡಿಲ್ಲ.
Published On - 1:55 pm, Mon, 30 December 19